ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೨

ರಂಗಣ್ಣನ ಕನಸಿನ ದಿನಗಳು

'ಮೆಮೋ ಮಾಡಿ, ಜವಾನನ ಕೈಯಲ್ಲಿ ಕಳಿಸಿಕೊಟ್ಟೆ. ಆ ಮೆಮೋವಿಗೆ ರುಜು ಮಾಡಲಿಲ್ಲ. ಜವಾನನಿಗೆ ಎರಡು ಏಟು ಬಿಗಿದು ಕಳಿಸಿಬಿಟ್ಟ ಸ್ವಾಮಿ ! ಆ ಜವಾನ ಅಳುತ್ತಾ ಬಂದು ಮೆಮೋ ಪುಸ್ತಕವನ್ನು ಮೇಜಿನ ಮೇಲಿಟ್ಟು-ಸ್ವಾಮಿ ! ನನಗೆ ನಾಲ್ಕು ದಿನ ರಜಾ ಕೊಡಿ, ನಾನು ಸ್ಕೂಲಿಗೆ ಬರೋಕಾಗೋದಿಲ್ಲ ಎಂದು ಹೇಳಿದನು. ಹೋಗಿ~ ಹಾಗೆಲ್ಲ ಅವಿಧೇಯತೆಯಿಂದ ನಡೆದುಕೊಳ್ಳಬಾರದು ಉಗ್ರಪ್ಪನವರೇ ! ಜವಾನನಿಗೆ ಹೊಡೆದದ್ದು ತಪ್ಪು ಎಂದು ಹೇಳಿದೆ. ನನ್ನನ್ನು ದುರುಗುಟ್ಟಿಕೊಂಡು ಆತ ನೋಡುತ್ತ-ನನಗೆ ಮೆಮೋ ಕಳಿಸೋ ಹಡ್ ಮೇಷ್ಟ್ರು ಇದುವರೆಗೂ ಹುಟ್ಟಿಕೊಂಡಿರಲಿಲ್ಲ. ಇನ್ಸ್ಪೆಕ್ಟರ ಬೆಂಬಲ ಇದೆ ಎಂದು ನನಗೆ ಮೆಮೋ ಮಾಡಿದ್ದೀರಿ. ಮಕ್ಕಳೊಂದಿಗರು ನೀವು ! ಹುಷಾರಾಗಿರಿ !~ ಎಂದು ಎಲ್ಲರೆದುರಿಗೂ ಹೇಳಿದ ಸ್ವಾಮಿ ! ನನಗೆ ಕೈ ಕಾಲು ಅದುರಿಹೋಯಿತು. ಆ ಮನುಷ್ಯನನ್ನು ನೋಡಿದರೇನೇ ಸಾಕು, ಎಂಥವರಿಗಾದರೂ ಭಯವಾಗುತ್ತೆ ! ಅಂಥ ಭಾರಿ ಆಳು ! ಆತನ ಕೈಯಲ್ಲಿ ದೊಣ್ಣೆ ! ಅದೇನು ಒನಕೆಯೋ ಏನೋ ಎನ್ನುವ ಹಾಗಿದೆ ! ಮಹಾ ಪು೦ಡ ಮನುಷ್ಯ ! ರೇಗಿ ಒಂದು ಬಾರಿ ಅಪ್ಪಳಿಸಿಬಿಟ್ಟರೆ ನನ್ನ ಆಯುಸ್ಸು ಮುಗಿದು ಹೋಗುತ್ತೆ !

'ಈಗ ನಡೆದಿರುವ ವಿಚಾರವನ್ನೆಲ್ಲ ರಿಪೋರ್ಟು ಮಾಡಿ ; ಇತರ ಅಸಿಸ್ಟೆಂಟರ ಹೇಳಿಕೆಗಳನ್ನು ತೆಗೆದು ಕಳಿಸಿಕೊಡಿ ; ಜವಾನನ ಹೇಳಿಕೆ ಯನ್ನು ತೆಗೆದು ಕಳಿಸಿ, ಆಲೋಚನೆ ಮಾಡುತ್ತೇನೆ. ಈಗ ನಾನು ಸಾಹೇಬರನ್ನು ನೋಡಿಕೊಂಡು ಬರಬೇಕು.”

“ಅಪ್ಪಣೆ ಸ್ವಾಮಿ ! ನನ್ನ ರಿಪೋರ್ಟನ್ನೂ, ಕೆಲವರು ಅಸಿಸ್ಟೆಂಟರ ಹೇಳಿಕೆಯನ್ನೂ, ಜವಾನನ ಹೇಳಿಕೆಯನ್ನೂ ಎಲ್ಲವನ್ನೂ ಈ ಲಕೋಟೆಯಲ್ಲಿಟ್ಟಿದ್ದೇನೆ ಸ್ವಾಮಿ ! ಪರಾಂಬರಿಸಬೇಕು. ಜಾಗ್ರತೆ ತಾವು ಇದನ್ನು ಫೈಸಲ್ ಮಾಡಬೇಕು. ಒಂದು ಕ್ಷಣ ಎನ್ನುವುದು ನನಗೆ ಒಂದು ಯುಗದಂತೆ ಆಗಿದೆ

“ನಾನು ಹೆಡ್ ಕ್ವಾರ್ಟರಿಗೆ ಹಿಂದಿರುಗಿ ಬಂದಮೇಲೆ ಈ ವಿಚಾರಕ್ಕೆ ಗಮನ ಕೊಡುತ್ತೇನೆ. ನೀವು ಈ ಮಧ್ಯೆ ಏನೇನು ನಡೆಯುತ್ತದೆಯೋ