ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉತ್ಸಾಹಭಂಗ

೧೯೩

ಎಲ್ಲಕ್ಕೂ ಸರಿಯಾಗಿ ರಿಕಾರ್ಡಿಡಿ. ಆತನಿಗೆ ಒಳ್ಳೆಯ ಮಾತಿನಲ್ಲಿ ಬುದ್ಧಿಯನ್ನೂ ಹೇಳಿ, ಬೇಕಾಗಿದ್ದರೆ ನನ್ನ ಹತ್ತಿರ ಕಳಿಸಿಕೊಡಿ. ನಾನೂ ಬುದ್ಧಿ ಹೇಳುತ್ತೇನೆ. ನಮ್ಮ ಮಾತುಗಳನ್ನು ಕೇಳದೆ ಪುಂಡಾಟ ಮಾಡಿದರೆ ಗೊತ್ತೇ ಇದೆ : ದಂಡಂ ದಶಗುಣಂ ಭವೇತ್ ; ದಂಡೇನ ಗೌರ್ಗಾರ್ದಭ… ?

ಅಪ್ಪಣೆ ಸ್ವಾಮಿ ! ನಾನು ಮಕ್ಕಳೊಂದಿಗೆ, ನನಗೆ ಜಮೀನು ಮನೆ ಮೊದಲಾದ ಆಸ್ತಿಯೇನೂ ಇಲ್ಲ. ನಾನು ಸತ್ತರೆ ನನ್ನ ಹೆಂಡತಿ ಮಕ್ಕಳ ಪಾಡು ನಾಯಿನಾಡಾಗುತ್ತದೆ. ಬುರುವ ಅಲ್ಪ ಇನ್ಷುರೆನ್ಸ್ ಹಣದಲ್ಲಿ ಏನನ್ನು ತಾನೇ ಮಾಡಲಾಗುತ್ತದೆ ? ಮನೆ ಬಿಟ್ಟು ಒಂಟಿಯಾಗಿ ಓಡಾಡುವುದಕ್ಕೆ ಹೆದರಿಕೆಯಾಗುತ್ತೆ ಸ್ವಾಮಿ ! ಸಾಯಲಿ ಕಾಲವಂತೂ ಕತ್ತಲಾಗುವುದರೊಳಗಾಗಿ ಮನೆ ಸೇರಿಕೊಳ್ಳುತ್ತೇನೆ. ರಾತ್ರಿ ಹೊತ್ತು ನಿದ್ರೆ ಬರುವುದಿಲ್ಲ ! ಕನಸಿನಲ್ಲಿಯೂ ನೆನಸಿನಲ್ಲಿಯೂ ಆ ಉಗ್ರಪ್ಪನ ಆಕಾರವೇ ! ಅವನ ಕೈಯ ದೊಣ್ಣೆಯೆ ! ?

ಒಳ್ಳೆಯದು ಹೆಡ್ ಮೇಷ್ಟ್ರೇ  ! ಏನು ಮಾಡುವುದು ? ದುಷ್ಟರ ಸಹವಾಸ ! ಆತ ಧರಿಸುವ ಖಾದಿ ನೋಡಿದರೆ ಗಾಂಧಿಯವರ ಶಿಷ್ಯ ! ಆತನ ದುರ್ವಿದ್ಯೆ ನೋಡಿದರೆ ಸೈತಾನಿನ ಶಿಷ್ಯ ! ?

ಹೆಡ್ ಮೇಷ್ಟು ಕೈ ಮುಗಿದು ಹೊರಟು ಹೋದನು. ಶಂಕರಪ್ಪ ಬಂದು, ಬಹಳ ಜರೂರು ಕಾಗದಗಳು ! ಸ್ವಾಮಿಯವರ ರುಜುವಾಗಬೇಕು. ಎಂದು ಹೇಳಿ ಕೆಲವು ಕಾಗದಗಳನ್ನು ಮೇಜಿನ ಮೇಲಿಟ್ಟನು. ರಂಗಣ್ಣ ನಿಂತಹಾಗೆಯೇ ಅವುಗಳಿಗೆ ರುಜುಗಳನ್ನು ಕಿರಕಿ ಕೊಟಡಿಯಿಂದ ಹೊರಟನು. ಆ ಹೊತ್ತಿಗೆ ರಂಗನಾಧ ಪುರ ಕೇಂದ್ರದ ಉಪಾಧ್ಯಾಯರ ಸಂಘದ ಕಾರ್ಯದರ್ಶಿ ತಿಮ್ಮಣ್ಣ ಭಟ್ಟ ಬಂದು ಕೈ ಮುಗಿದು ಎರಡು ನಿಂಬೇಹಣ್ಣುಗಳನ್ನು ರಂಗಣ್ಣನಿಗೆ ಕಾಣಿಕೆ ಕೊಟ್ಟನು.

'ಸ್ವಾಮಿಯವರ ಸವಾರಿ ನಾಳಿದ್ದು ರಂಗನಾಥಪುರಕ್ಕೆ ಪ್ರೋಗ್ರಾಂ ಇದೆ. ಸಂಘದ ಸಭೆ ಏರ್ಪಾಟಾಗಿದೆ. ಸ್ವಾಮಿಯವರಿಗೆ ಜ್ಞಾಪಿಸಿ ಹೋಗೋಣವೆಂದು ಬಂದಿದ್ದೇನೆ.'