ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೪

ರಂಗಣ್ಣನ ಕನಸಿನ ದಿನಗಳು

ಆಗಲಿ ಭಟ್ಟರೇ ! ಬರುತ್ತೇವೆ. ಆದರೆ ಈ ಬಾರಿ ಊಟದ ಏರ್ಪಾಟು ಇಟ್ಟು ಕೊಳ್ಳಬೇಡಿ. ಸಭೆಯನ್ನು ಮಧ್ಯಾಹ್ನ ಹನ್ನೆರಡು ಗಂಟೆಗೆ ಸೇರಿಸೋಣ. ಉಪಾಧ್ಯಾಯರೆಲ್ಲ ಊಟಗಳನ್ನು ಮಾಡಿಕೊಂಡೇ ಬರಲಿ, ಸಾಯಂಕಾಲ ಐದು ಗಂಟೆಗೆ ಮುಕ್ತಾಯ ಮಾಡಿದರೆ ಅವರವರ ಊರುಗಳನ್ನು ಕತ್ತಲೆಯಾಗುವುದರೊಳಗೆ ಸೇರಿಕೊಳ್ಳುತ್ತಾರೆ.

ಗಂಗೇಗೌಡರು ಎಲ್ಲ ಏರ್ಪಾಟುಗಳನ್ನೂ ಮಾಡಿಬಿಟ್ಟಿದ್ದಾರೆ ಸ್ವಾಮಿ.

ಮಾಡಿದ್ದ ರೇನು ? ಇವರಿಗೆ ಈ ಕೂಡಲೆ ತಿಳಿಸಿಬಿಡಿ, ಊಟದ ವ್ಯವಸ್ಥೆಗಳು ಬರಬರುತಾ ರಗಳೆಗೆ ಹಿಡಿದುಕೊಂಡಿವೆ. ತುಂಟರು ಅರ್ಜಿಗಳನ್ನು ಬರೆಯುವುದಕ್ಕೆ ಅವಕಾಶವಾಗಿದೆ. ಇನ್ನು ಮುಂದೆ ಊಟದ ಏರ್ಪಾಡು ರದ್ದು !

ಸ್ವಾಮಿಯವರಿಗೆ ಬಹಳ ಬೇಸರಿಕೆ ಆದ ಈ ಗೆ ಕಾಣುತ್ತೆ. ನಮ್ಮ ಮೇಷ್ಟರುಗಳಲ್ಲಿ ತಮ್ಮ ಮೇಲೆ ಅರ್ಜಿ ಬರೆಯುವವರು ಯಾರೂ ಇಲ್ಲ ಸ್ವಾಮಿ ! ನಾನು ಬಲ್ಲೆ. ಗ್ರಾಮಸ್ಥರು ಎಷ್ಟೋ ಸಂತೋಷದಿಂದ ಚಪ್ಪರ ಹಾಕಿ, ವರ್ಷಕ್ಕೊಂದು ಉತ್ಸವ ಎಂದು ಭಾವಿಸಿಕೊಂಡು ಒಪ್ಪೊತ್ತು ಆದರಾತಿಥ್ಯ ಮಾಡುತ್ತಾರೆ. ಅವರು ಯಾರೂ ಅರ್ಜಿ ಬರೆಯೋವರಲ್ಲ, ಈ ದಿನ ಗಂಗೇಗೌಡರೇ ಇಲ್ಲಿಗೆ ಬರುತ್ತಿದ್ದರು. ಸ್ವಾಮಿಯವರು ಸರ್ಕಿಟು ಹೊರಟಿರುತ್ತೀರೋ ಏನೋ, ನಾನೇ ಹೋಗಿ ನೋಡಿಕೊಂಡು ಬರುತ್ತೇನೆ ; ಇದ್ದರೆ ಜ್ಞಾಪಿಸಿ ಬರುತ್ತೇನೆ ಎಂದು ಸಮಾಧಾನ ಹೇಳಿ ನಾನು ಹೊರಟು ಬಂದೆ ?

ಭಟ್ಟರೇ ! ನೀವು ಹೇಳುವುದನ್ನೆಲ್ಲ ನಾನು ಆಲೋಚನೆ ಮಾಡಿದೇನೆ. ಹೊಸದಾಗಿ ನೀವೇನೂ ಹೇಳುತ್ತಿಲ್ಲ. ಊಟದ ವ್ಯವಸ್ಥೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದ್ದೇನೆ. ಈಗ ನೀವು ನಿಮ್ಮ ಕೇಂದ್ರದ ಉಪಾಧ್ಯಾಯರಿಗೆಲ್ಲ ವರ್ತಮಾನ ಕೊಟ್ಟು ಬಿಡಿ. ಅಪ್ಪಿ ತಪ್ಪಿ ಯಾರಾದರೂ ಊಟವಿಲ್ಲದೆ ಬಂದರೆ ನಮ್ಮ ಬಿಡಾರದಲ್ಲಿ ಊಟ ಮಾಡುತ್ತಾರೆ.'

ಗ್ರಾಮಸ್ಥರಿಗೆ ನಾನು ಹೇಗೆ ಈ ವರ್ತಮಾನ ಕೊಡುವುದೊ ತಿಳಿಯದು ಸ್ವಾಮಿ ! ಗಂಗೇ ಗೌಡರಿಗೆ ಹೇಗೆ ಮುಖ ತೋರಿಸಲಿ ! ಈ