ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉತ್ಸಾಹಭಂಗ

೧೯೫

ಬಾರಿಗೆ ದಯವಿಟ್ಟು ನಡೆಸಿಕೊಡಬೇಕು. ಮುಂದಿನ ಸಭೆಗೆ ತಮ್ಮ ಇಷ್ಟದಂತೆಯೇ ಊಟದ ಏರ್ಪಾಟನ್ನು ಕೈ ಬಿಡಬಹುದು.

'ಅದೆಲ್ಲಾ ಆಗುವುದಿಲ್ಲ! ಪಂಚಾಯತಿ ಚೇರ್ಮನ್ನರಿಗೆ ನಾನೇ ಕಾಗದ ಕೊಡುತ್ತೇನೆ. ತೆಗೆದುಕೊಂಡು ಹೋಗಿ ಅವರಿಗೆ ತಲುಪಿಸಿ. ಬಹಳ ಒತ್ತಾಯಕ್ಕೆ ಬಂದರೆ ಮಧ್ಯಾಹ್ನ ಉಪ್ಪಿಟ್ಟು ಮತ್ತು ಕಾಫಿಯ ಏರ್ಪಾಟನ್ನು ಮಾತ್ರ ಇಟ್ಟು ಕೊಳ್ಳಲಿ. ಊಟದ ಏವಾ೯ಟು ಖಂಡಿತ ಬೇಡ !!

ಹೀಗೆಂದು ಹೇಳಿ ರಂಗಣ್ಣ ಶಂಕರಪ್ಪನನ್ನು ಕರೆದು ಒಂದು ಕಾಗದವನ್ನು ಚೇರ್ಮನ್ ಗಂಗೇಗೌಡರಿಗೆ ಬರೆರು ತರುವಂತೆ ತಿಳಿಸಿದನು. ಅದರಂತೆ ಕಾಗದವನ್ನು ಬರೆದು ಆತ ತಂದು ಕೊಟ್ಟನು. ರಂಗಣ್ಣ ರುಜು ಮಾಡಿ, “ಭಟ್ಟರೇ ! ಈ ಕಾಗದವನ್ನು ತೆಗೆದು ಕೊಂಡು ಹೋಗಿ ಕೊಡಿ, ನಾನು ನಾಳೆ ಸಾಯಂ ಕಾಲಕ್ಕೆ ರಂಗನಾಥಪುರಕ್ಕೆ ಬರುತ್ತೇನೆ ನಮ್ಮ ಬಿಡಾರ ನಾಳೆ ಮಧ್ಯಾಹ್ನಕ್ಕೋ ಸಂಜೆಗೋ ಅಲ್ಲಿಗೆ ಬರುತ್ತದೆ. ಮುಸಾಫರಖಾನೆಯನ್ನು ಚೊಕ್ಕಟಮಾಡಿಸಿ ಇಟ್ಟರಿ' - ಎಂದು ಹೇಳಿ ಹೊರಟು ಬಿಟ್ಟನು. ತಿಮ್ಮಣ್ಣ ಭಟ್ಟನಿಗೆ ಕೈಗೆ ಬರುವ ಪ್ರಮೋಷನ್ ತಪ್ಪಿ ಹೋದರೆ ಎಷ್ಟು ವ್ಯಸನವಾಗಬಹುದೋ ಅಷ್ಟೊಂದು ವ್ಯಸನವಾಯಿತು. ತಾನು ಗಂಗೇಗೌಡರಿಗೆ ಹೇಳಿ ಗ್ರಾಮಸ್ಥರಿಗೆಲ್ಲ ತಕ್ಕ ತಿಳಿವಳಿಕೆ ಕೊಟ್ಟು, ಅವರಲ್ಲಿ ಉತ್ಸಾಹವನ್ನು ತುಂಬಿ ರಂಗನಾಥಪುರದ ಸಭೆ ಇತರ ಕೇಂದ್ರಗಳ ಸಭೆಗಳನ್ನು ತಲೆಮೆಟ್ಟುವಂತೆ ಏರ್ಪಾಟುಗಳನ್ನು ಮಾಡಿ ಕೊಂಡಿದ್ದೆಲ್ಲ ವ್ಯರ್ಥವಾಯಿತಲ್ಲ! ಈಗ ಗಂಗೇಗೌಡರಿಗೆ ಮತ್ತು ಗ್ರಾಮಸ್ಥರಿಗೆ ಏನು ಸಮಾಧಾನ ಹೇಳಬೇಕು?-ಎಂದು ಬಹಳವಾಗಿ ಚಿಂತಿಸಿದನು. ಒಂದು ಕಡೆ ಇನ್ಸ್ಪೆಕ್ಟರು ಖಂಡಿತವಾಗಿ ಹೇಳಿಬಿಟ್ಟಿದ್ದಾರೆ; ಅವರ ಮಾತಿಗೆ ವಿರೋಧವಾಗಿ ನಡೆಯುವುದಕ್ಕಾಗುವುದಿಲ್ಲ, ಇನ್ನೊಂದು ಕಡೆ ತಾನು ಕೈ ಕೊಂಡಿರುವ ಏರ್ಪಾಟುಗಳನ್ನು ಬಿಟ್ಟು ಬಿಡಲು ಮನಸ್ಸಿಲ್ಲ. ಗ್ರಾಮಸ್ಥರೆಲ್ಲ ಬಹಳ ಉತ್ಸಾಹಭರಿತರಾಗಿದ್ದಾರೆ. ಈ ಉಭಯಸಂಕಟದಲ್ಲಿ ಸಿಕ್ಕಿ ಪೇಚಾಡುತ್ತಾ ಮೆಲ್ಲಮೆಲ್ಲನೆ ಕಚೇರಿಯನ್ನು ಬಿಟ್ಟು ತಿಮ್ಮಣ್ಣ ಭಟ್ಟನೂ ಹೊರಟನು.