ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೬

ರಂಗಣ್ಣನ ಕನಸಿನ ದಿನಗಳು

ಮಾರನೆಯ ದಿನ ರಂಗಣ್ಣ ಬೆಳಗ್ಗೆ ಊಟ ಮಾಡಿಕೊಂಡು ಮಧ್ಯಾಹ್ನ ಸಾಹೇಬರ ಕಚೇರಿಗೆ ಹೋದನು. ಸಾಹೇಬರು ಹಸ್ತಲಾಘವವನ್ನು ಕೊಟ್ಟು, ಕುಶಲ ಪ್ರಶ್ನೆ ಮಾಡಿ, ಥಟ್ಟನೆ, ' ರಂಗಣ್ಣನವರೇ ! ನಾಳೆ ನಾನು ರಂಗನಾಥಪುರದ ಸಭೆಗೆ ಬರಲು ಒಪ್ಪಿಕೊಂಡಿದ್ದೇನೆ ! ನೀವೂ ನನ್ನನ್ನು ಆಹ್ವಾನಿಸುವುದಕ್ಕಾಗಿಯೇ ಬಂದಿರಬಹುದು ! ನೀವು ಆಹ್ವಾನ ಕೊಟ್ಟು ಒತ್ತಾಯ ಮಾಡುವುದಕ್ಕೆ ಮೊದಲೇ ನಾನಾಗಿ ಒಪ್ಪಿಕೊಂಡಿರುವುದು ನಿಮಗೆ ಸಂತೋಷವಲ್ಲವೆ?' ಎಂದು ನಗುತ್ತಾ ಹೇಳಿದರು. ರಂಗಣ್ಣ ತನ್ನ ಮನಸ್ಸಿನ ಸ್ಥಿತಿಯನ್ನು ಪ್ರಯತ್ನ ಪೂರ್ವಕವಾಗಿ ಮರೆ ಮಾಚುತ್ತ, ಬಹಳ ಸಂತೋಷ ಸಾರ್ ! ತಮ್ಮ ಭೇಟಿ ಮೊದಲು ನನ್ನ ರೇಂಜಿಗೆ ಕೊಡೋಣವಾಗುತ್ತದೆ. ಅದರಲ್ಲಿಯೂ ಉಪಾಧ್ಯಾಯರ ಸಂಘದ ಸಭೆಗೆ ತಾವು ದಯಮಾಡಿಸುತ್ತೀರಿ. ಅಲ್ಲಿ ಏನು ಕೆಲಸ ನಡೆಯುತ್ತದೆ ? ಎಂಬುದನ್ನು ತಾವು ಸಾಕ್ಷಾತ್ತಾಗಿ ನೋಡಿದಂತಾಗುತ್ತದೆ, ನಾನು ವರದಿಯ ಮೂಲಕ ತಿಳಿಸುವುದಕ್ಕಿಂತ ತಾವು ಕಣ್ಣಾರೆ ನೋಡಿದರೆ ಹೆಚ್ಚು ಸಂಗತಿಗಳು ತಿಳಿದಂತಾಗುತ್ತದೆ. ತಾವು ರಂಗನಾಥ ಪುರಕ್ಕೆ ಎಷ್ಟು ಗಂಟೆಗೆ ದಯಮಾಡಿಸುತ್ತೀರಿ? ಮಧ್ಯಾಹ್ನ ಹನ್ನೆರಡು ಗಂಟೆಗೆ ಸಭೆ ಸೇರುತ್ತದೆ.”

ಹನ್ನೆರಡು ಗಂಟೆಗೆ ಸಭೆ ಸೇರುವುದಾಗಿ ಆ ಹೆಡ್ ಮೇಷ್ಟು ಸಹ ತಿಳಿಸಿದನು. ಆದರೆ ನಾನು ಬೆಳಗ್ಗೆ ಒ೦ಬತ್ತು ಅಥವಾ ಹತ್ತು ಗಂಟೆಗೆಲ್ಲ ರಂಗನಾಥಪುರಕ್ಕೆ ಬರಬೇಕೆಂದು ಪಂಚಾಯತಿ ಮೆಂಬರುಗಳು ಒತ್ತಾಯ ಮಾಡಿದರು. ಬೆಳಗಿನ ಬಸ್ಸಿನಲ್ಲಿ ಅಲ್ಲಿಗೆ ಬರುತ್ತೇನೆ ; ಸಾಯಂಕಾಲಕ್ಕೆ ಹಿಂದಿರುಗುತ್ತೇನೆ. ಅವರೂ ಈಗ ತಾನೆ-ಒಂದು ಗಂಟೆಯ ಹಿಂದೆ- ವಾಪಸು ಹೋದರು. ಅವರನ್ನು ಮುಂದಾಗಿ ಕಳಿಸಿ ನೀವು ಸ್ವಲ್ಪ ಹಿಂದಾಗಿ ಬಂದಿರಿ.'

ರಂಗಣ್ಣ ಆ ಮಾತುಗಳನ್ನು ಕೇಳಿ ಏನು ಮಾಡಬೇಕು ? ಒಳ್ಳೆಯ ಧರ್ಮ ಸೂಕ್ಷ ದ ಸಮಸ್ಯೆ ಎದುರು ನಿಂತಿತು. ತಾನು ಅವರನ್ನು ಕಳಿಸಲಿಲ್ಲ, ಆ ಹೆಡ್‌ಮೇಷ್ಟು ಗ್ರಾಮಸ್ಥರನ್ನು ಕಟ್ಟಿಕೊಂಡು ತಾನಾಗಿ ಬಂದು ಆಹ್ವಾನ ಕೊಟ್ಟಿದ್ದಾನೆಂದೂ ಊಟದ ಏರ್ಪಾಟಿನ ವಿಚಾರದಲ್ಲಿ