ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉತ್ಸಾಹಭಂಗ

೧೯೭

ತನಗೂ ಮೇಷ್ಟರಿಗೂ ಚರ್ಚೆ ನಡೆಯಿತೆಂದೂ, ಊಟದ ಏರ್ಪಾಟನ್ನು ತಾನು ರದ್ದು ಮಾಡಲು ಹೇಳಿದೆನೆಂ ದೂ ಸಾಹೇಬರಿಗೆ ತಿಳಿಸಬೇಕೇ ? ಇಲ್ಲದಿದ್ದರೆ, ತನ್ನ ಪ್ರೇರಣೆಯಿಂದ ಆ ಹೆಡ್‌ಮೇಷ್ಟು ಗ್ರಾಮಸ್ಥರೊ೦ದಿಗೆ ಬಂದು ಆಹ್ವಾನ ಕೊಟ್ಟನೆಂದು ಒಪ್ಪಿಕೊಳ್ಳ ಬೇಕೆ ? ತಿಮ್ಮಣ್ಣ ಭಟ್ಟ ತಂದಿಟ್ಟ ಪೇಚಾಟ ! ಕೊನೆಗೂ ಇನ್ಸ್ಪೆಕ್ಟರಿಗೆ ಸೋಲು, ಮೇಷ್ಟರಿಗೆ ಗೆಲವು ! ಆ ಸಮಯದಲ್ಲಿ ತಾನು ಏನನ್ನೂ ಆಡಬಾರದೆಂದು ರಂಗಣ್ಣ ನಿಷ್ಕರ್ಷೆ ಮಾಡಿಕೊಂಡನು. ಸಾಹೇಬರು ರಂಗನಾಥಪುರಕ್ಕೆ ಬರುತ್ತಾರೆ; ಅಲ್ಲಿ ಮಾತನಾಡುವುದಕ್ಕೆ ಬೇಕಾದಷ್ಟು ಅವಕಾಶವಿರುತ್ತದೆ ; ಸಂದರ್ಭ ನೋಡಿಕೊಂಡು ತಿಳಿಸಬೇಕಾದ ವಿಚಾರಗಳನ್ನು ಆಗ ತಿಳಿಸಿದರಾಯಿತು – ಎಂದು ತೀರ್ಮಾನಿಸಿಕೊಂಡು, 'ಅಪ್ಪಣೆಯಾದರೆ ನಾನು ಹೋಗಿ ಬರುತೇನೆ. ನಾಳೆ ರಂಗನಾಥಪುರದಲ್ಲಿ ತಮ್ಮ ಭೇಟಿಯಾಗುತ್ತದೆಯಲ್ಲ ! ಅಲ್ಲಿ ಏನೇನು ಏರ್ಪಾಟುಗಳನ್ನು ಮಾಡಿದ್ದಾರೆ ಯೋ ಏನೇನು ಬಿಟ್ಟಿದ್ದಾರೆಯೋ ಹೋಗಿ ನೋಡುತ್ತೇನೆ' ಎಂದು ಹೇಳಿದನು.

ಹೆಚ್ಚು ಏರ್ಪಾಟುಗಳೇನೂ ಬೇಡ ಎಂದು ಗ್ರಾಮಸ್ಥರಿಗೆ ತಿಳಿಸಿ.”

ನಮ್ಮ ಮಾತುಗಳನ್ನು ಅವರು ಯಾರೂ ಕೇಳುವುದಿಲ್ಲ ಸಾರ್ ? ಹಿಡಿದ ಹಟವನ್ನು ಸಾಧಿಸುವುದೇ ಅವರ ಚಾಳಿ !' ಎಂದು ಉತ್ತರ ಹೇಳಿ ರಂಗಣ್ಣ ಹೊರಟು ಬ೦ದನು.

ಸಾಹೇಬರು ತನ್ನ ರೇಂಜಿಗೆ ಬ೦ದ ಉಪಾಧ್ಯಾಯರ ಸಂಘದ ಕಾರ್ಯ ಕಲಾಪಗಳನ್ನು ನೋಡುವ ವಿಚಾರದಲ್ಲಿ ರಂಗಣ್ಣನಿಗೆ ಸಂತೋಷವಿದ್ದರೂ, ಆ ಹೆಡ್ ಮೆಷ್ಟು ತಿಮ್ಮಣ್ಣ ಭಟ್ಟ ತನ್ನ ಅಕ್ಷಣೆಗೆ ವಿರುದ್ಧವಾಗಿ ನಡೆದು, ಪಂಚಾಯತಿಯವರನ್ನು ಎತ್ತಿಕಟ್ಟಿ, ಕಡೆಗೂ ಊಟದ ಏರ್ಪಾಡನ್ನು ಇಟ್ಟುಕೊಂಡನಲ್ಲ ! ತನ್ನನ್ನು ಅಲಕ್ಷಿಸಿ ಸಾಹೇಬರ ಹತ್ತಿರ ಹೋದನಲ್ಲ !-- ಎಂಬುದಾಗಿ ಅಸಮಾಧಾನ ಮತ್ತು ಕೋಪಗಳು ಆ ಸಂತೋಷವನ್ನು ಮುಳುಗಿಸಿಬಿಟ್ಟು ವು. ಆದ್ದರಿ೦ದ ರಂಗನಾಥಪುರಕ್ಕೆ ಬರುತ್ತ ಆ ತಿಮ್ಮಣ್ಣ ಭಟ್ಟನಿಗೆ ತಕ್ಕ ಶಾಸ್ತಿಯನ್ನು ಯಾವ ಸಂದರ್ಭದಲ್ಲಾದರೂ ಮಾಡಬೇಕೆಂಬ ಕೀಳು ಯೋಚನೆಗೆ ಎಡೆಗೊಟ್ಟು ಚಿತ್ತಶಾಂತಿಯನ್ನು ಕೆಡಿಸಿಕೊಂಡನು.