ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದ ಗಂಗೇಗೌಡರು

೧೯೯

ಕೊನೆಗೊಂಡಿತಲ್ಲ- ಎಂದು ಆತನಿಗೂ ಚಿತ್ತ ಕಲಕಿ ಹೋಯಿತು. ಎರಡು ನಿಮಿಷಗಳ ಕಾಲ ಹಾಗೆಯೇ ನಿಂತಿದ್ದವನು ಎಳನೀರನ್ನೂ ಬಾಳೆಯ ಹಣ್ಣುಗಳನ್ನೂ ತಾನೇ ಹಿಡಿದುಕೊಂಡು ರಂಗಣ್ಣನ ಕೊಟಡಿಗೆ ಹೋದನು. ಅವನ್ನು ಕೆಳಗಿಟ್ಟು, ದೀರ್ಘದಂಡ ನಮಸ್ಕಾರವನ್ನು ಮಾಡಿ, ಎದ್ದು ಕೈ ಮುಗಿದುಕೊಂಡು, ' ತಾವು ಧಣಿಗಳು, ನಾನು ಬಡವ. ನನ್ನ ಸರ್ವಾಪರಾಧಗಳನ್ನೂ ಕ್ಷಮಿಸಬೇಕು. ಸೇವಕರ ತಪ್ಪನ್ನು ಧಣಿಗಳು ನೋಡಬಾರದು. ಅರಿಕೆ ಮಾಡಿಕೊಳ್ಳುತ್ತೇನೆ. ನನ್ನ ಕೈ ಮೀರಿ ಏರ್ಪಾಟುಗಳು ನಡೆದಿವೆ. ತಾವು ಪ್ರಸನ್ನರಾಗಬೇಕು ' - ಎಂದನು.

ಓ ಹೋ ! ನಿಮ್ಮ ಕೈ ಮೀರಿ ಏರ್ಪಾಟುಗಳು ನಡೆದಿವೆಯೋ ? ಈ ಆಟಗಳನ್ನು ಯಾರ ಮುಂದೆ ಕಟ್ಟು ತೀರಿ! ಊಟದ ಏರ್ಪಾಟು ಬೇಡ. ಎಂದು ನಾನು ಹೇಳಿದೆ. ಈ ಇನ್ಸ್ಪೆಕ್ಟರಿಗೆ ಚಳ್ಳೆಹಣ್ಣು ತಿನ್ನಿಸುತ್ತೇನೆ ಎಂದು ಹಂಚಿಕೆ ಮಾಡಿ ಗ್ರಾಮಸ್ಥರನ್ನು ಎತ್ತಿ ಕಟ್ಟಿ, ಗುಂಪು ಕಟ್ಟಿಕೊಂಡು ಸಾಹೇಬರ ಹತ್ತಿರ ಹೋದಿರಿ, ಸೂತ್ರಧಾರಕರಾಗಿ ಎಲ್ಲವನ್ನೂ ನಡೆಸಿದಿರಿ. ಈಗ ನಿರಪರಾಧಿಗಳಂತೆ ಬಂದು ಅರಿಕೆ ಮಾಡಿ ಕೊಳ್ಳುತಿದ್ದೀರಿ !

ಕ್ಷಮಿಸಬೇಕು. ಅರಿಕೆಮಾಡಿಕೊಳ್ಳುತ್ತೇನೆ.”

ಏನಿದೆ ಅರಿಕೆ ಮಾಡಿಕೊಳ್ಳುವುದು ? ಆಷಾಢಭೂತಿ ಮೇಷ್ಟ್ರುಗಳಲ್ಲಿ ಅಗ್ರಗಣ್ಯರಾಗಿದ್ದೀರಿ !'

ಸ್ವಾಮಿಯವರು ಹಾಗೆ ತಿಳಿದುಕೊಳ್ಳಬಾರದು. ನನ್ನ ಮೇಲೆ ಕೋಪ ಮಾಡಿಕೊಳ್ಳುವುದು ಸಹಜವಾಗಿದೆ. ಆದರೂ ನನ್ನ ಅರಿಕೆಯನ್ನು ಲಾಲಿಸಬೇಕು. ತಮ್ಮ ಅಪ್ಪಣೆಯನ್ನು ಶಿರಸಾವಹಿಸಿ ಪಂಚಾಯತಿ ಚೇರ್ಮನ್ನರಿಗೆ ತಮ್ಮ ಪತ್ರವನ್ನು ಕೊಟ್ಟೆ, ಚೇರ್ಮನ್ ಗಂಗೇಗೌಡರು ನೋಡಿಕೊಂಡರು. ನೋ ಡಿ ಕೊಂಡು, - ಹೆಡ್ ಮೇಷ್ಟೆ ! ಇನ್ ಸ್ಪೆಕ್ಷ ರನ್ನು ಕಾಣುವುದಕ್ಕೆ ನಾನೇ ಹೋಗಬೇಕಾಗಿತ್ತು. ಅವರ ಮನಸ್ಸಿಗೆ ಬಹಳ ಬೇಜಾರು ಆಗಿದೆ. ನಾನೇ ಹೋಗಿದ್ದರೆ ತಕ್ಕ ರೀತಿ ಸಮಾಧಾನ ಹೇಳುತ್ತಿದ್ದೆ. ನನಗೆ ಬದಲು ನೀವೇ ಹೋದಿರಿ, ಹೀಗಾಯಿತು ! ಈಗೇನು ಮಾಡೋಣ ? ಎಂದು ಕೇಳಿದರು. ನಾನು, ಇನ್ ಸ್ಪೆಕ್ಟರ್