ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದ ಗಂಗೇಗೌಡರು

೨೦೧

ನಾಗುತ್ತ, “ ನಿಮಗೇನು ಉಪಕಾರ ಮಾಡಿದ್ದಾರೆ ಅವರು !' ಎಂದು ಕೇಳಿದನು.

ನೋಡಿ ಸ್ವಾಮಿ ! ಈಗ್ಗೆ ಎಂಟು ವರ್ಷಗಳ ಹಿಂದೆ ನನ್ನ ಎರಡನೆಯ ಹುಡುಗನ ಉಪನಯನ ನಡೆಯಬೇಕಾಗಿತ್ತು. ಕೈಯಲ್ಲಿ ಕಾಸಿರಲಿಲ್ಲ ; ಬಾಹ್ಮಣ್ಯ ಬಿಡುವ ಹಾಗಿರಲಿಲ್ಲ. ಗೌಡರ ಹತ್ತಿರ ಒಂದು ನೂರು ರೂಪಾಯಿ ಸಾಲ ಪಡೆದುಕೊಂಡು ಉಪನಯನ ಮಾಡಿ ಬಿಡೋಣ. ಬರುವ ಸ೦ಬಳದಲ್ಲಿ ಹೇಗೋ ಉಳಿಸಿ ಸಾಲ ತೀರಿಸಿದರಾಯಿತು. ಎಂದು ನಿಶ್ಚಯ ಮಾಡಿಕೊಂಡು ಅವರನ್ನು ಕೇಳೋಣವೆಂದು ಹೋದೆ. ನನ್ನ ಕಷ್ಟವನ್ನು ಹೇಳಿಕೊಂಡೆ. ಆಗ ಅವರು,- ಮೇಷ್ಟೆ ನಿಮಗೆಷ್ಟು ಸಂಬಳ? ಎಂದು ಕೇಳಿದರು. ಹದಿನೈದು ರೂಪಾಯಿ-ಎಂದು ಉತ್ತರ ಹೇಳಿದೆ. ನಿಮಗೆ ಮಕ್ಕಳೆಷ್ಟು ? ಎಂದು ಕೇಳಿದರು. ಎರಡು ಹೆಣ್ಣು ಮೂರು ಗಂಡು ಎಂದು ಹೇಳಿದೆ. ಅವರು, ರಾಮ ರಾಮ ! ದೇವರೇ ! ಎ೦ದು ಉದ್ಗಾರ ತೆಗೆದು ನಿಮ್ಮ ಸಂಸಾರ ನಡೆಯುವುದೇ ಕಷ್ಟವಾಗಿದೆಯಲ್ಲ ! ನೀವು ತಿಳಿಸುವುದೇನು ! ಸಾಲ ತೀರಿಸುವುದೇನು !-ಎಂದು ಹೇಳಿದರು. ನನಗೆ ಮುಖ ಭಂಗವಾಗಿ ಹೋಯಿತು. ಅದನ್ನು ಅವರು ನೋಡಿ- ಮೇಷ್ಟ್ರೇ ! ನನ್ನ ಹತ್ತಿರ ಹಣವೇನೋ ಇದೆ ; ಕೊಡ ಬಲ್ಲೆ. ನಿಮ್ಮ ಬಡತನ ಮತ್ತು ನಿಮ್ಮ ಕಷ್ಟ ನೋಡಿ ದಾನವಾಗಿಯೇ ಕೊಡ ಬಲ್ಲೆ. ಆದರೆ ಅದರಿಂದ ನೀವು ಉದ್ಧಾರವಾಗುವುದಿಲ್ಲ ; ನಿಮ್ಮ ಆತ್ಮಗೌರವಕ್ಕೆ ಹಾನಿಯಾಗುತ್ತದೆ. ನಾನು ಹೇಳಿದಂತೆ ಮಾಡಿ. ಇಗೋ ! ನೂರು ರುಪಾಯಿ ತೆಗೆದುಕೊಳ್ಳಿ. ನನ್ನ ಲೇವಾದೇವಿಯ ಮತ್ತು ಜಮೀನು ಆದಾಯ ವೆಚ್ಚಗಳ ಲೆಕ್ಕ ಪತ್ರಗಳನ್ನು ನೋಡಿಕೊಳ್ಳಿ. ನಿಮಗೆ ತಿಂಗಳಿಗೆ ಹತ್ತು ರುಪಾಯಿ ನಾನು ಕೊಡುತ್ತೇನೆ, ನಿಮ್ಮ ಸಾಲಕ್ಕೆ ವಜಾಮಾಡಿಕೊಳ್ಳುತ್ತೇನೆ' ಎಂದು ಹೇಳಿದರು ಸ್ವಾಮಿ ! ಹಣವನ್ನು ಎಣಿಸಿ ಕೊಟ್ಟು ಬಿಟ್ಟರು. !

'ಬಡ್ಡಿಯ ದರವನ್ನು ಏನು ಹಾಕಿದರು ? ಪತ್ರ ಏನು ಬರೆದುಕೊಟ್ಟರಿ ?

ಬಡ್ಡಿ ಯಿಲ್ಲ, ಏನೂ ಇಲ್ಲ ಸ್ವಾಮಿ! ನಾನು ಪತ್ರವನ್ನು ಸಹ ಬರೆದು