ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೨

ರಂಗಣ್ಣನ ಕನಸಿನ ದಿನಗಳು

ಕೊಡಲಿಲ್ಲ ! ಕೊನೆಗೆ ಅವರು ಹಣ ಕೊಟ್ಟಿದ್ದಕ್ಕೆ ಸಾಕ್ಷಿಗಳು ಸಹ ಇರಲಿಲ್ಲ !'

'ಆಮೇಲೆ ಹತ್ತು ತಿಂಗಳಲ್ಲಿ ಸಾಲ ತೀರಿಹೋಯಿತೋ ??

'ತೀರಿ ಹೋಯಿತು ಸ್ವಾಮಿ ! ಆದರೆ ಗೌಡರು ನನ್ನನ್ನು ಕೆಲಸದಿಂದ ಬಿಡಿಸಲಿಲ್ಲ. ಮುಂದೆಯೂ ಹಾಗೆಯೇ ನಡೆಸಿಕೊಂಡು ಬಂದರು !

'ಆಮೇಲೆ ತಿಂಗಳು ತಿಂಗಳಿಗೆ ಹತ್ತು ರುಪಾಯಿಗಳನ್ನು ಕೈಗೆ ಕೊಡುತ್ತಾ ಬಂದರೋ ?”

'ಇಲ್ಲ ಸ್ವಾಮಿ ! ನಾನು ಕೇಳಲಿಲ್ಲ. ಅವರೇ ಒಂದು ದಿನ ಮೇಷ್ಟೆ ! ನಿಮಗೆ ಬರುವ ಸಂಬಳದಲ್ಲಿ ಈಗಿನಂತೆಯೇ ಹೇಗೋ ಸಂಸಾರವನ್ನು ಸುಧಾರಿಸಿಕೊಳ್ಳಿ. ನಿಮ್ಮ ಕೈಗೆ ಈ ಹಣವನ್ನು ಕೊಟ್ಟರೆ, ಹಬ್ಬ ಹುಣ್ಣಿಮೆ ಎಂದು ಹೇಳಿಕೊಳ್ಳುತ್ತ ಹೋಳಿಗೆ ಪಾಯಸಗಳಿಗೆ ಖರ್ಚು ಮಾಡಿಬಿಡುತ್ತೀರಿ. ಈ ಸಂಬಳದ ಹಣ ನನ್ನಲ್ಲಿರಲಿ~ ಎಂದು ಹೇಳಿದರು. ನಾನೂ ಸುಮ್ಮನಾದೆ. ಈಗ್ಗೆ ನಾಲ್ಕು ವರ್ಷಗಳ ಹಿಂದೆ, ಒಳ್ಳೆಯ ಜಾಗದಲ್ಲಿ ನಾಲ್ಕು ಎಕರೆ ಹೊಲವನ್ನು ನನಗೆ ಮಾಡಿಸಿ ಕೊಟ್ಟರು ! ಹೋದ ವರ್ಷ ಒಂದು ಏಕರೆ ಗದ್ದೆಯನ್ನು ಸುಲಭ ಬೆಲೆಗೆ ಒಬ್ಬ ರೈತನಿಂದ ಕೊಡಿಸಿಕೊಟ್ಟ ರು ! ಈಗ ಮನೆಗೆ ಪ್ರತಿವರ್ಷ ಬತ್ತ, ರಾಗಿ, ಅವರೆ, ನವಣೆ, ಮೊದಲಾದ ಬೆಳೆಯೆಲ್ಲ ಬರುತ್ತಾ ಇದೆ ಸ್ವಾಮಿ ! ಮುಂದಿನ ವರ್ಷ ಇನ್ನು ಸ್ವಲ್ಪ ಜಮೀನು ಕೊಂಡು ಕೊಳ್ಳೋಣ ಎಂದು ಹೇಳಿದ್ದಾರೆ, ಈ ದಿನವೇ ನನಗೆ ಪಿಂಚಿನ್ ಆದರೂ ನಾನು ಉಪವಾಸ ಇರುವುದಿಲ್ಲ ; ಸುಖವಾಗಿ ಜೀವನ ನಡೆಸಬಲ್ಲೆ ಸ್ವಾಮಿ! ಗಂಗೇಗೌಡರು ಹೀಗೆ ಉಪಕಾರ ಮಾಡಿದ್ದಾರೆ !'

ರಂಗಣ್ಣನಿಗೆ ಮನಸ್ಸು ಕೃತಜ್ಞತಾಭಾವದಿಂದ ತುಂಬಿ ಹೋಯಿತು. ಮೇಷ್ಟರ ವಿಚಾರದಲ್ಲಿ ಇಂಥ ಉಪಕಾರ ಮಾಡತಕ್ಕ ಮಹನೀಯರು ನಮ್ಮ ದೇಶದಲ್ಲಿದ್ದಾರಲ್ಲ ! ನಮ್ಮ ದೇಶದ ಸೌಭಾಗ್ಯಕ್ಕೆ ಎಣೆಯುಂಟೇ ? ಎಂದು ಹೇಳಿಕೊಂಡನು. ಗಂಗೇಗೌಡರ ವಿಚಾರದಲ್ಲಿ ಬಹಳ ಗೌರವವೂ ವಿಶ್ವಾಸವೂ ಉಂಟಾದುವು. ತಿಮ್ಮಣ್ಣ ಭಟ್ಟನು ತನ್ನ ಕಥೆಯನ್ನು