ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದ ಗಂಗೇಗೌಡರು

೨೦೩

ಮುಂದಕ್ಕೂ ಹೇಳತೊಡಗಿದನು. “ಸ್ವಾಮಿ ಪ್ರತಿವರ್ಷವೂ ನವರಾತ್ರಿಯ ಕಾಲದಲ್ಲಿ ರಾಮಾಯಣವನ್ನು ನನ್ನ ಕೈಯಲ್ಲಿ ಪಾರಾಯಣ ಮಾಡಿಸುತ್ತಾರೆ. ಸಂಭಾವನೆಯಾಗಿ ಇಪ್ಪತ್ತೈದು ರೂಪಾಯಿಗಳನ್ನೂ ಒಂದು ಜೊತೆ ಪಂಚೆಯನ್ನೂ ನನಗೆ ಕೊಡುತ್ತಾರೆ ! ಆ ಹಣ ನನ್ನ ಇತರ ಖರ್ಚಿಗೆ ಆಗುತ್ತೆ. ಹೀಗೆ ಕಾಪಾಡಿಕೊಂಡು ಬರುತ್ತಿದ್ದಾರೆ. ಅವರ ಮಾತನ್ನು ಮೀರಿ ಹೋಗುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ ಸ್ವಾಮಿ ! ಆದ್ದರಿಂದ ತಾವು ಈಗ ನಡೆದುದನ್ನೆಲ್ಲ ಕೃಮಿಸಿಬಿಡಬೇಕು, ಮರೆತು ಬಿಡಬೇಕು'

“ಎಲ್ಲವನ್ನೂ ಕ್ಷಮಿಸಿದ್ದೆನೆ ಭಟ್ಟರೇ! ಏನೊಂದೂ ಆಲೋಚನೆ ನಿಮಗೆ ಬೇಡ. ಅದಕ್ಕೆ ಸಾಕ್ಷಿಯಾಗಿ ಈ ಬಾಳೆಯ ಹಣ್ಣುಗಳನ್ನು ತೆಗೆದುಕೊಳ್ಳುತ್ತೇನೆ ನೋಡಿ ! ನೀವು ಸಹ ಎರಡನ್ನು ಹೊಟ್ಟೆಗೆ ಸೇರಿಸಿ !' ಎಂದು ರಂಗಣ್ಣ ನಗು ತ್ತಾ ಹೇಳಿದನು. ಈ ಪ್ರಕರಣ ಹೀಗೆ ಸಂತೋಷ ದಲ್ಲಿ ಮುಕ್ತಾಯವಾಗುತ್ತಿದ್ದಾಗ ಗಂಗೇಗೌಡರು ಅಲ್ಲಿಗೆ ಬಂದರು. ತಿಮ್ಮಣ್ಣ ಭಟ್ಟ ಇನ್ನು ತಾನಲ್ಲಿರಬಾರದೆಂದು ಮೆಲ್ಲಗೆ ಜಾರಿಕೊಂಡು ಅಡಿಗೆಯ ಏರ್ಪಾಟನ್ನು ವಿಚಾರಿಸಲು ಗೋಪಾಲನ ಹತ್ತಿರಕ್ಕೆ ಹೊರಟನು.

ಗಂಗೇಗೌಡರನ್ನು ಬಹಳ ಆದರದಿಂದ ರಂಗಣ್ಣನು ಬರಮಾಡಿಕೂಂಡನು. ಗೌಡರು ಸುಮಾರಾಗಿ ಕುಳ್ಳಗಿದ್ದರು ; ಸ್ವಲ್ಪ ಸ್ಕೂಲಕಾಯವೆಂದೇ ಹೇಳಬೇಕು. ದೊಡ್ಡ ಸರಿಗೆಯ ರುಮಾಲು, ಸರ್ಜುಕೋಟು ಮತ್ತು ಉತ್ತರೀಯಗಳನ್ನು ಧರಿಸಿದ್ದರು ; ಹಣೆ ಯಲ್ಲಿ ವಿಭೂತಿಯ ಪಟ್ಟಿಗಳಿದ್ದುವು. “ಸ್ವಾಮಿಯವರ ಇಷ್ಟಕ್ಕೆ ವಿರೋಧವಾಗಿ ನಡೆದುಕೊಂಡಿದ್ದೇನೆ. ಕ್ಷಮಿಸಬೇಕು' ಎಂದು ಗೌಡರು ಹೇಳಿದರು.

'ನನ್ನ ಇಷ್ಟಕ್ಕೆ ವಿರೋಧವಾಗಿ ಏನೂ ಅಲ್ಲ. ಆದರೆ ನನ್ನ ಕೋರಿಕೆಗೆ ವಿರೋಧವಾಗಿ ಏರ್ಪಾಟು ಮಾಡಿದ್ದಿರಿ ! ಚಿಂತೆಯಿಲ್ಲ, ತಿಮ್ಮಣ್ಣ ಭಟ್ಟರು ಎಲ್ಲ ಸಮಾಚಾರಗಳನ್ನೂ ತಿಳಿಸಿದ್ದಾರೆ.'

“ ಏನು ಸ್ವಾಮಿ ! ಹತ್ತು ಜನ ಬಡಮೇಷ್ಟರಿಗೆ ಒಪ್ಪೊತ್ತು ಅನ್ನ ಹಾಕಲಾರೆನೇ ನಾನು? ಅವರು ಸಂತೋಷವಾಗಿದ್ದರೆ ನಮಗೂ ಸಂತೋಷ.