ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದ ಗಂಗೇಗೌಡರು

೨೦೭

ಅದು ಜ್ಞಾಪಕಕ್ಕೆ ಬರುತ್ತೆ ಸ್ವಾಮಿ ! ಮುಂದೆ ಸರದಿಯಮೇಲೆ ದಿನಕ್ಕೊಬ್ಲೊಬ್ಬ ಗಂಡ ನಾನು ತಾನು ಎಂದು ನೂರಾರು ಜನ ಕಚ್ಚಾಡ್ತಾರೆ ! ?

ಗಂಗೇಗೌಡರು ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲದಿದ್ದರೂ ಪದವೀಧರರಲ್ಲದಿದ್ದರೂ ಎಷ್ಟು ಚೆನ್ನಾಗಿ ತಿಳಿವಳಿಕೆ ಪಡೆದಿದ್ದಾರೆ ! ಎಂಬುದನ್ನು ನೋಡಿ ರಂಗಣ್ಣನಿಗೆ ಆಶ್ಚರ್ಯವಾಯಿತು. ದೇಶದಲ್ಲಿ ಸತ್ಯ ಬೇಕಾದಷ್ಟಿದೆ, ದೇಶದ ಆರೋಗ್ಯವೂ ಚೆನ್ನಾಗಿದೆ ; ಆದ್ದರಿಂದ ಭವಿಷ್ಯ ಆಶಾದಾಯಕವಾಗಿದೆ ಎಂದು ರಂಗಣ್ಣನಿಗೆ ಬಹಳ ಸಂತೋಷವಾಯಿತು. ಮಾರನೆಯ ದಿನದ ಏರ್ಪಾಡುಗಳನ್ನು ಮಾತನಾಡುತ್ತಿದ್ದಾಗ ತಿಮ್ಮಣ್ಣ ಭಟ್ಟ ಲೋಟಗಳಲ್ಲಿ ಕಾಫಿ ತಂದು ಮುಂದಿಟ್ಟನು. 'ಹೆಡ್‌ಮೇಷ್ಟೆ! ಇನ್ ಸ್ಪೆಕ್ಟರವರ ಊಟಕ್ಕೆ ಏನು ಏರ್ನಾಟು ಮಾಡಿದ್ದೀರಿ ? ' ಎಂದು ಗಂಗೇಗೌಡರು ಕೇಳಿದರು.

'ಎಲ್ಲ ಏರ್ಪಾಟುಗಳನ್ನು ಅವರು ಮಾಡಿಕೊಂಡು ಬಂದಿದ್ದಾರೆ ನಮ್ಮ ಸಹಾಯದ ನಿರೀಕ್ಷಣೆಯನ್ನು ಅವರು ಇಟ್ಟು ಕೊಂಡಿಲ್ಲ.'

'ಹಾಗುಂಟೆ ! ತರಕಾರಿ, ಹಾಲು ಮೊಸರು- ಇವುಗಳನ್ನಾದರೂ ತಂದು ಕೊಟ್ಟಿದ್ದೀರೋ ಇಲ್ಲವೋ ? '

ಅವುಗಳನ್ನೆಲ್ಲ ಒದಗಿಸಿದ್ದೇನೆ. '

ರಂಗಣ್ಣನು ಆ ರಾತ್ರಿ ಊಟಕ್ಕೆ ತನ್ನ ಬಿಡಾರಕ್ಕೇನೆ ಬರಬೇಕೆಂದು ಗಂಗೇಗೌಡರಿಗೆ ಆ ಆ ಹ್ವಾನ ಕೊಟ್ಟನು.

'ಏನು ಸ್ವಾಮಿ ! ನೀವು ಬ್ರಾಹ್ಮಣರೇ ! '

'ಈ ದಿವಸ ನಿಮ್ಮನ್ನೂ ಬ್ರಾಹ್ಮಣನನ್ನಾಗಿ ಮಾಡುತ್ತೇನೆ ಬನ್ನಿ ! ಎಲ್ಲರೂ ಬ್ರಾಹ್ಮಣರಾಗಿ ಹೋದರೆ ಬಹಳ ಒಳ್ಳೆಯದು ' ಎಂದು ರಂಗಣ್ಣನು ನಗುತ್ತಾ ಹೇಳಿದನು.