ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೧

ರಂಗನಾಥಪುರದಲ್ಲಿ ಸಭೆ

ಮಾರನೆಯ ದಿನ ಬೆಳಗ್ಗೆ ಸಾಹೇಬರು ಒಂಬತ್ತು ಗಂಟೆಗೆ ಬಸ್ಸಿನಲ್ಲಿ ಬಂದಿಳಿದರು. ಅವರಿಗೆ ಗಂಗೇಗೌಡರ ನಾಯಕತ್ವದಲ್ಲಿ ಸಂಭ್ರಮದ ಸ್ವಾಗತ ದೊರೆಯಿತು. ಹೂವಿನ ಹಾರಗಳು, ತಟ್ಟೆಗಳಲ್ಲಿ ಹಣ್ಣು ಹಂಪಲು, ಕೈಗೆ ಕೊಡುವ ನಿಂಬೆಯಹಣ್ಣುಗಳು, ಸ೦ಚಾಯತಿ ಮೆಂಬರುಗಳ ಪರಿಚಯ, ಗುಂಪು ಸೇರಿದ್ದ ಉಪಾಧ್ಯಾಯರ ವಂದನಾರ್ಪಣೆ ಮತ್ತು ಹಳ್ಳಿಯವರ ಜಯಕಾರಗಳೊಡನೆ ಸ್ವಾಗತ ಸಮಾರಂಭ ಕೋಲಾಹಲಕರವಾಗಿತ್ತು. ಸಾಹೇಬರು ಮುಸಾಘರವಾನೆಗೆ ದಯ ಮಾಡಿಸಿ ಕೊಟಡಿಯಲ್ಲಿ ಕುರ್ಚಿಯಮೇಲೆ ಕುಳಿತು ಕೊಂಡರು. ತಿಮ್ಮಣ್ಣ ಭಟ್ಟನ ಓಡಾಟ ಕಾಫಿ ತಿಂಡಿಗಳ ಭರಾಟ ಚೆನ್ನಾಗಿ ಸಾಗಿದುವು. ಗಂಗೇಗೌಡರು ಊಟದ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದರು. ಒಕ್ಕಲಿಗ ಮೇಷ್ಟ್ರುಗಳಿಗೂ ಇತರರಿಗೂ ತಮ್ಮ ಮನೆಯಲ್ಲೇ ಏರ್ಪಾಟುಮಾಡಿದ್ದರು.' ಲಿಂಗಾಯತರು ಮೊದಲಾದವರಿಗೆಲ್ಲ ಆಯಾಯಾ ಜಾತಿಯವರ ಮನೆಗಳಲ್ಲಿ ಆಹ್ವಾನಗಳಿದ್ದು ವು. ಉಳಿದ ಬ್ರಾಹ್ಮಣಾದಿಗಳಿಗೆ ಮುಸಾಫರ ಖಾನೆಯಲ್ಲೇ ಅಡಿಗೆಯಾಗಿತ್ತು. ಹನ್ನೊಂದು ಗಂಟೆಗೆ ಸರಿಯಾಗಿ ಮುಸಾಫರಖಾನೆಯಲ್ಲಿ ಎಲೆಗಳನ್ನು ಹಾಕಿ ಬಡಿಸತೊಡಗಿದರು. ಸಾಹೇಬರು ಬಂದಿದ್ದ ಕಾರಣದಿಂದ ಜಿಲೇಬಿ ಹೆಚ್ಚು ಕಟ್ಟಳೆಯ ಭಕ್ಷ್ಯವಾಗಿತ್ತು. ಆ ದಿನದ ಏರ್ಪಾಟುಗಳನ್ನೆಲ್ಲ ನೋಡಿ ಉಂಡು, ಸಂತೋಷ ಪಟ್ಟ ಸಾಹೇಬರು ಬಹಳ ಪ್ರಸನ್ನರಾಗಿದ್ದರು ! ಬೇಕಾದ ವರವನ್ನು ಕೊಡವವರಾಗಿದ್ದರು !

ಪಾಠಶಾಲೆಯಲ್ಲಿ ಹನ್ನೆರಡು ಗಂಟೆಗೆ ಸರಿಯಾಗಿ ಸಂಘದ ಸಭೆ ಸೇರಿತು. ವೇದಿಕೆಯ ಮೇಲೆ ರಂಗಣ್ಣನೊಂದು ಪಕ್ಕದಲ್ಲಿ ಗಂಗೇಗೌಡರೊಂದು ಪಕ್ಕದಲ್ಲಿ, ಸಾಹೇಬರು ಮಧ್ಯದಲ್ಲಿ ಕುರ್ಚಿಗಳಲ್ಲಿ ಕುಳಿತಿದ್ದರು. ರಂಗಣ್ಣನು ಎದ್ದು ನಿಂತುಕೊಂಡು, " ಈ ದಿನ ಸಾಹೇಬರು ಇಲ್ಲಿಗೆ