ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದಲ್ಲಿ ಸಭೆ

೨೦೯

ದಯಮಾಡಿಸಿರುವುದು ನಮ್ಮ ಭಾಗ್ಯ. ಅವರು ಬಹಳ ದಕ್ಷರೂ ಆನುಭವಿಗಳೂ ಆದ ಅಧಿಕಾರಿಗಳು, ವಿದ್ಯಾಭಿವೃದ್ಧಿಯ ವಿಚಾರದಲ್ಲಿ ಬಹಳ ಆಸಕ್ತರಾದವರು. ಉಪಾಧ್ಯಾಯರ ವಿಚಾರದಲ್ಲಿ ಬಹಳ ಕರುಣಾ ಪೂರ್ಣರು. ಅವರ ಅಮೋಘವಾದ ಸಲಹೆಗಳನ್ನು ನಾವುಗಳೆಲ್ಲ ನಿರೀಕ್ಷಿಸುತ್ತಿರುವುದು ಸಹಜವೇ ಆಗಿದೆ ಈ ದಿನ ಸಾಹೇಬರು ಅಧ್ಯಕ್ಷಪೀಠವನ್ನಲಂಕರಿಸಿ ಕಾರ್ಯ ಕ್ರಮಗಳನ್ನೆಲ್ಲ ನೆರವೇರಿಸಿ ಕೊಡ ಬೇಕೆಂದೂ ಗ್ರಾಮಸ್ಥರ ಕೋರಿಕೆಗಳನ್ನು ಈಡೇರಿಸಿಕೊಡಬೇಕೆಂದೂ ಪ್ರಾರ್ಥಿಸುತ್ತೇನೆ' ಎಂದು ಹೇಳಿದನು, ಪದ್ಧತಿಯಂತೆ ದೇವತಾ ಪ್ರಾರ್ಥನೆಯಾಯಿತು ; ಹುಡುಗಿಯರಿಂದ ಸ್ವಾಗತ ಗೀತೆಗಳ ಹಾಡುಗಾರಿಕೆಯೂ ಆಯಿತು ಅನಂತರ ಸಾಹೇಬರು ಎದ್ದು ನಿಂತುಕೊಂಡು, ತಾವು ರಂಗನಾಥಪುರಕ್ಕೆ ಭೇಟಿ ಕೊಡುವ ಅವಕಾಶವನ್ನು ಗ್ರಾಮಸ್ಥರು ಕಲ್ಪಿಸಿ ಕೊಟ್ಟು ದ ಕಾಗಿ ಅವರಿಗೆ ಕೃತಜ್ಞರಾಗಿರುವುದಾಗಿಯೂ, ಅಲ್ಲಿಯ ಏರ್ಪಾಟುಗಳನ್ನು ನೋಡಿ ಸಂತೋಷ ವಾಯಿತೆಂದೂ, ತಮ್ಮ ಸಲಹೆಗಳನ್ನು ಸಭೆಯ ಮುಕ್ತಾಯದಲ್ಲಿ ತಿಳಿಸುವುದಾಗಿಯೂ ಹೇಳಿ ಕಾರ್ಯಕ್ರಮದ ಪಟ್ಟಿ ಯನ್ನು ಕೈಗೆ ತೆಗೆದುಕೊಂಡರು. ಅದರಲ್ಲಿದ್ದಂತೆ ವ್ಯಾಕರಣ ಪಾಠ, ಗದ್ಯ ಪಾಠ, ಭೂಗೋಳ ಮತ್ತು ಗಣಿತ ಪಾಠಗಳ ಬೋಧನಕ್ರಮಗಳನ್ನು ಆಯಾ ಉಪಾಧ್ಯಾಯರು ವಿವರಿಸಿದರು ; ಒ೦ದೆರಡು ಭಾಷಣಗಳಾದುವು. ಕಡೆಯಲ್ಲಿ ಬೋಧನೆಯಲ್ಲಿ ಬರುವ ತೊಡಕುಗಳ ಚರ್ಚೆ ನಡೆಯಿತು. ಸಾಹೇಬರು ಅದನ್ನು ಬಹಳ ಕುತೂಹಲದಿಂದ ಗಮನಿಸುತ್ತಿದ್ದ ರು. ಆ ತೊಡಕುಗಳಿಗೆಲ್ಲ ಪರಿಹಾರವನ್ನು ರಂಗಣ್ಣನೇ ಹೇಳುತ್ತಿದ್ದನು. ಸಮಯಾನುಸಾರ ಕಪ್ಪು ಹಲಗೆಯ ಹತ್ತಿರ ಹೋಗಿ, ಅದರ ಮೇಲೆ ಬರೆದು ವಿವರಿಸುತ್ತಲೂ ಇದ್ದನು. ಸಾಹೇಬರು ಹಿಂದೆ ಹಲವು ಕಡೆಗಳಲ್ಲಿ ಉಪಾಧ್ಯಾಯರ ಸಭೆಗಳನ್ನು ನೋಡಿದವರು.

ಒಂದು ಮಾದರಿಪಾಠ, ಒ೦ದು ಭಾಷಣ ಮತ್ತು ಸಂಗೀತದಲ್ಲಿ ಅವು ಮುಕ್ತಾಯವಾಗುತ್ತಿದ್ದು ವು ; ಇನ್ ಸ್ಪೆಕ್ಟರವರು ಅಲಂಕಾರಕ್ಕಾಗಿ ಕುಳಿತುಕೊಂಡಿದ್ದು ಅಲಂಕಾರ ಭಾಷಣ ಮಾಡುವವರಾಗಿರುತ್ತಿದ್ದರು. ಆದರೆ ಇಲ್ಲಿಯ ಸಭೆಯಲ್ಲಿ ಚರ್ಚೆಗಳು ಸಲಿಗೆಯಿಂದ

14