ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೦

ರಂಗಣ್ಣನ ಕನಸಿನ ದಿನಗಳು

ನಡೆಯುತ್ತ, ಇನ್ ಸ್ಪೆಕ್ಟರವರ ಪಾಂಡಿತ್ಯದ ಮತ್ತು ಅನುಭವಗಳ ಪರೀಕ್ಷೆ ಮೇಷ್ಟ್ರುಗಳಿಂದ ನಡೆಯುತ್ತಿತ್ತು !

ಒಬ್ಬ ಉಪಾಧ್ಯಾಯನು, ಸ್ವಾಮಿ | ರೀಡರುಗಳಲ್ಲಿ ಮಧ್ಯೆ ಮಧ್ಯೆ ಚಿತ್ರಗಳನ್ನು ಮುದ್ರಿಸಿದ್ದಾರೆ. ಅವುಗಳಿಂದ ಪಾಠಗಳಿಗೆ ತೊಂದರೆಯೇ ವಿನಾ ಸಹಾಯವಿಲ್ಲ. ಪಾಠಮಾಡುವ ಕಾಲದಲ್ಲಿ ಮಕ್ಕಳ ಗಮನವೆಲ್ಲ ಚಿತ್ರದ ಕಡೆಗೆ ಇರುತ್ತದೆ ; ವಾಕ್ಯಗಳ ಮೇಲೆ ಇರುವುದಿಲ್ಲ. ಚಿತ್ರಗಳನ್ನು ಮುದ್ರಿಸದಿದ್ದರೆ ಒಳ್ಳೆಯದಲ್ಲವೇ ? ' ಎಂದು ಕೇಳಿದನು.

'ಮೇಷ್ಟೇ ! ನೀವು ಬಹಳ ಶ್ರದ್ಧೆಯಿಂದ ವಾಠಗಳನ್ನು ಮಾಡುತಿದ್ದೀರಿ ಎನ್ನುವುದು ಸ್ಪಷ್ಟಪಟ್ಟಿತು. ನನಗೆ ಆ ವಿಚಾರದಲ್ಲಿ ಬಹಳ ಸಂತೋಷ. ಎಲ್ಲ ಉಪಾಧ್ಯಾಯರೂ ನಿಮ್ಮಂತೆಯೇ ಶ್ರದ್ಧೆ ವಹಿಸಿದರೆ ವಿದ್ಯಾ ಭಿವೃದ್ಧಿ ಚೆನ್ನಾಗಿ ಆಗುತ್ತದೆ. ಆದರೆ, ನೀವು ಕೇಳಿರುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ನೋಡಿ ಮೇಷ್ಟೆ ! ಮೂಗಿದೆ, ಸಿಂಬಳ ಸುರಿಯುತ್ತದೆ; ; ಆದ್ದರಿಂದ ಮೂಗನ್ನು ಕೊಯ್ದು ಹಾಕಿಬಿಡೋಣ ! ಎನ್ನು ವುದಕ್ಕಾಗುತ್ತದೆಯೇ ? ಮೂಗಿದ್ದರೆ ಮುಖಕ್ಕೆ ಶೃಂಗಾರ ! ಚಿತ್ರವಿದ್ದರೆ ಪಾಠಕ್ಕೆ ಅಲಂಕಾರ ! ” ಎಂದು ರಂಗಣ್ಣನು ಹೇಳಿದನು. ಸಾಹೇಬರಿಗೆ ಪರಮಾನಂದವಾಗಿ ಅವರು ಚಪ್ಪಾಳೆ ತಟ್ಟಿದರು. ಸಭೆಯಲ್ಲೆಲ್ಲ ಕರತಾಡನಗಳೂ ನಗುವಿನ ಹೊನಲುಗಳೂ ತುಂಬಿ ಹೊದುವು.

'ಮೇಷ್ಟೇ ! ಇತರ ಕಡೆಗಳಿಗೆ ಮಕ್ಕಳ ಗಮನ ಹರಿಯದೆ ಪುಸ್ತಕದಲ್ಲಿರುವ ಚಿತ್ರದ ಕಡೆಗೆ ಹರಿಯುವುದು ಒಂದು ವಿಚಾರಕ್ಕೆ ಒಳ್ಳೆಯದಲ್ಲವೇ ?

'ಹೌದು ಸ್ವಾಮಿ.

'ಮಕ್ಕಳಿಗೆ ಚಿತ್ರದಲ್ಲಿ ಆಸಕ್ತಿಯಿರುವುದರಿಂದ ಉಪಾಧ್ಯಾಯರು ಅದನ್ನು ಉಪಯೋಗಿಸಿಕೊಂಡು, ಆ ಚಿತ್ರವನ್ನೆ ಪಾಠಕ್ಕೆ ಪೀಠಿಕೆಯಾಗಿ ಮಾಡಿಕೊಳ್ಳಬೇಕು. ಮೊದಮೊದಲಿನಲ್ಲಿ ಮಕ್ಕಳಿಗೆ ಹಾಗೆ ಚಿತ್ರದಲ್ಲಿ ತೀವ್ರವಾದ ಆಸಕ್ತಿ ಇರುತ್ತದೆ. ಆದರೆ ಅದು ಬಹುಕಾಲ ಇರುವುದಿಲ್ಲ. ಸ್ವಲ್ಪ ಕಾಲದಮೇಲೆ ಆ ಚಿತ್ರವನ್ನು ವಿರೂಪ ಮಾಡಿ ಬಿಡುತ್ತಾರೆ ; ಕಡೆಗೆ