ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದಲ್ಲಿ ಸಭೆ

೨೧೧

ಅದನ್ನು ಹರಿದು ಹಾಕುವುದೂ ಉಂಟು. ಹಾಗೆ ಮಾಡುವುದನ್ನು ನೀವು ನೋಡಿದ್ದೀರಾ ಮೇಷ್ಟೆ !'

'ನೋಡಿದ್ದೇನೆ ಸ್ವಾಮಿ !'

'ಒಳ್ಳೆಯದು ಮೇಷ್ಟೆ ! ಚಿತ್ರದಲ್ಲಿ ನೆಟ್ಟಿರುವ ಗಮನವನ್ನು ಕ್ರಮವಾಗಿ ಪಾಠಕ್ಕೆ ತಿರುಗಿಸಿಕೊಳ್ಳಬೇಕು. ಮೊದಲಿನಲ್ಲೇ ಚಿತ್ರದ ವಿಷಯವನ್ನು ಪ್ರಸ್ತಾಪಮಾಡಿ, ಕೆಲವು ಪ್ರಶ್ನೆಗಳನ್ನು ಕೇಳಬೇಕು. ಮಕ್ಕಳು ಚಿತ್ರವನ್ನು ಚೆನ್ನಾಗಿ ನೋಡಿಯೇ ಉತ್ತರ ಕೊಡಲಿ. ಅಲ್ಲಿಗೆ ಅವರ ಆಸಕ್ತಿ ಕೇವಲ ಚಿತ್ರದಲ್ಲಿ ಕಡಮೆಯಾಗುತ್ತದೆ. ಆಮೇಲೆ- ಚಿತ್ರದ ವಿಚಾರವನ್ನು ಹೆಚ್ಚಾಗಿ ಪಾಠದಲ್ಲಿ ಹೇಳಿದೆ. ಓದಿ ತಿಳಿದುಕೊಳ್ಳೋಣ ಎಂದು ಉಪಾಯದಿಂದ ಓದುವುದರ ಕಡೆಗೆ ಮಕ್ಕಳ ಆಸಕ್ತಿಯನ್ನು ತಿರುಗಿಸಬೇಕು. ಚಿತ್ರವಿದ್ದರೆ ಉಪಾಧ್ಯಾಯರಿಗೆ ಶ್ರಮ ಅರ್ಧಕಡಮೆಯಾಗುತ್ತದೆ ; ವಿಷಯಗಳನ್ನು ತಿಳಿಸುವುದು ಸುಲಭವಾಗುತ್ತದೆ; ಮಕ್ಕಳ ಕಲ್ಪನಾಶಕ್ತಿ ವಿಕಾಸವಾಗುತ್ತದೆ' ಕಿವಿಯಲ್ಲಿ ಎಷ್ಟು ಕೇಳಿದರೇನು ? ಕಣ್ಣಿಂದ ನೋಡಿದ್ದು ಸ್ಪಷ್ಟವಾಗಿ ಮನಸ್ಸಿನಲ್ಲಿ ನಿಲ್ಲುತ್ತದೆಯಲ್ಲವೆ ? ಉಪಾಧ್ಯಾಯರು ಕಪ್ಪು ಹಲಗೆಯ ಮೇಲೆ ದೊಡ್ಡದಾಗಿ ಆ ಚಿತ್ರವನ್ನು ಬರೆದು ವಿವರಿಸಿದರೆ ಪಾಠಕ್ಕೆ ಕಳೆ ಕಟ್ಟುತ್ತದೆ. ಈಗ ಹೇಳಿ ಮೇಷ್ಟೇ ! ರೀಡರುಗಳಲ್ಲಿ ಚಿತ್ರಗಳಿರಬೇಕೇ ಬೇಡವೇ ??

'ಇರಬೇಕು ಸ್ವಾಮಿ !?

'ಮಧ್ಯೆ ಮಧ್ಯೆ ಮಕ್ಕಳ ಗಮನ ವಾಕ್ಯಗಳ ಮೇಲೆ ಇಲ್ಲದಿದ್ದರೆ ಉಪಾಧ್ಯಾಯರು ಅಂಥ ಹುಡುಗರನ್ನು ಗಮನಿಸುತ್ತ, ಥಟ್ಟನೆ ಮುಂದಕ್ಕೆ ನೀನು ಓದು- ಎಂದು ಆ ಹುಡುಗರನ್ನು ಎಚ್ಚರಿಸಿ ಓದಿಸಬೇಕು?

'ತಿಳಿಯಿತು ಸ್ವಾಮಿ !' ಎಂದು ಹೇಳುತ್ತ ಆ ಮೇಷ್ಟು ಕುಳಿತುಕೊಂಡನು.

ಮತ್ತೊಬ್ಬ ಉಪಾಧ್ಯಾಯನದ್ದು, 'ಸ್ವಾಮಿ ! ನಾವು ನರಿಯ ಚಿತ್ರವನ್ನು ಬರೆಯಹೋದರೆ ಅದು ನಾಯಿಯ ಚಿತ್ರವೇ ಆಗಿ ಹೋಗುತ್ತದೆ