ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೨

ರಂಗಣ್ಣನ ಕನಸಿನ ದಿನಗಳು

ಯಲ್ಲ ! ಅದಕ್ಕೇನು ಮಾಡಬೇಕು ಸ್ವಾಮಿ ? ಈ ನರಿ ನಾಯಿಗಳಿಗೆ ಭೇದ ತೋರಿಸುವುದು ಹೇಗೆ ?” ಎಂದು ಕೇಳಿದನು. ರಂಗಣ್ಣನು, 'ಮೇಷ್ಟೇ! ನರಿಯ ಮೂತಿ ಯಾವಾಗಲೂ ಸ್ವಲ್ಪ ಚೂಪಾಗಿರುತ್ತದೆ ; ನಾಯಿಯದು ಅಷ್ಟು ಚೂಪಾಗಿರುವುದಿಲ್ಲ. ಎರಡನೆಯದಾಗಿ, ನಾಯಿಯ ಬಾಲ ಡೊಂಕು, ಸಾಮಾನ್ಯವಾಗಿ ತೆಳುವು ; ನರಿಯ ಬಾಲ ಪೊದರು, ಪೊರಕೆ ಇದ್ದ ಹಾಗೆ ; ಮತ್ತು ಯಾವಾಗಲೂ ಕೆಳಮುಖವಾಗಿಯೇ ಇರುತ್ತದೆ. ವ್ಯತ್ಯಾಸವನ್ನು ನೋಡಿ' ಎಂದು ಹೇಳಿ ಕಪ್ಪು ಹಲಗೆಯ ಮೇಲೆ ಬರೆದು ತೋರಿಸಿದನು. ಆಮೇಲೆ 'ಕುರಿಯ ಬಾಲ ಹೇಗಿರುತ್ತದೆ ? ಮೇಕೆಯ ಬಾಲ ಹೇಗಿರುತ್ತದೆ ? ಹೇಳಿ ಮೇಷ್ಟೇ ನೋಡೋಣ ? ಎಂದು ಕೇಳಿದನು.

'ನಾನು ಗಮನಿಸಿ ನೋಡಿಲ್ಲ ಸ್ವಾಮಿ |' ಎಂದು ಉಪಾಧ್ಯಾಯನು ಹೇಳಿದನು.

ಸಾಹೇಬರು ಮುಗುಳುನಗೆ ನಗುತ್ತ, “ಏನು ವ್ಯತ್ಯಾಸವಿದೆ ರಂಗಣ್ಣನವರೇ ?' ಎಂದು ಕೇಳಿದರು.

'ವ್ಯತ್ಯಾಸವಿದೆ ಸಾರ್ ! ಅವುಗಳನ್ನೆಲ್ಲ ನಾವು ಗಮನಿಸಬೇಕು' ಎಂದು ರಂಗಣ್ಣ ಹೇಳಿ, ಕಪ್ಪು ಹಲಗೆಯ ಮೇಲೆ ಆ ಬಾಲಗಳ ಚಿತ್ರಗಳನ್ನು ಬರೆದು, 'ಎರಡರ ಬಾಲಗಳೂ ಮೊಟಕು ; ಆದರೆ ಕುರಿಯ ದುಕೆಳಕ್ಕೆ ಬಗ್ಗಿ ರುತ್ತವೆ, ಮೇಕೆಯದು ಮೇಲಕ್ಕೆ ಬಗ್ಗಿರುತ್ತದೆ ! ಎಂದು ವಿವರಿಸಿದನು.

ಹಿಗೆ ಚರ್ಚೆಗಳಲ್ಲಿ ವಿನೋದವೂ ಶಿಕ್ಷಣವೂ ಬೆರೆತುಕೊಂಡು ಸಭೆಯ ವಾತಾವರಣ ಬಹಳ ಮನೋರಂಜಕವಾಗಿತ್ತು. ಹಲವು ವಿಷಯಗಳನ್ನು ಪ್ರಸ್ತಾಪಮಾಡಿದಮೇಲೆ ಮಧ್ಯಾಹ್ನ ಮೂರು ಗಂಟೆಯಾಯಿತೆಂದೂ, ಮುಂದೆ ಅರ್ಧ ಗಂಟೆ ವಿರಾಮವಿರುವುದೆಂದೂ, ಆ ವಿರಾಮಕಾಲದಲ್ಲಿ ಉಪಾಧ್ಯಾಯರು ಪ್ರದರ್ಶನವನ್ನು ನೋಡಿಕೊಂಡು ಉಪಾಹಾರ ಸ್ವೀಕಾರಕ್ಕೆ ಸಿದ್ಧರಾಗಬೇಕೆಂದೂ, ಅನಂತರ ನಾಲ್ಕು ಗಂಟೆಗೆ ಮತ್ತೆ ಸಭೆ ಸೇರುವುದೆಂದೂ ರಂಗಣ್ಣನು ಹೇಳಿದನು. ಅದರಂತೆ ಆಗ ಸಭೆ ಮುಗಿಯಿತು.