ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದಲ್ಲಿ ಸಭೆ

೨೧೩

ಪಾಠಶಾಲೆಯ ಕೊಟಡಿಯೊಂದರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರದರ್ಶನವೊಂದು ಏರ್ಪಾಟಾಗಿತ್ತು. ರಂಗಣ್ಣನು ಸಾಹೇಬರನ್ನು ಅಲ್ಲಿಗೆ ಕರೆದುಕೊಂಡು ಹೋದನು. ರಂಗನಾಧಪುರದ ಪ್ರೈಮರಿ ಸ್ಕೂಲಿನ ಉಪಾಧ್ಯಾಯರು ಶ್ರೀರಂಗಪಟ್ಟಣದ ಕೋಟೆ, ನಾಲ್ಕನೆಯ ಮೈಸೂರು ಯುದ್ಧ, ಟಿಪುವಿನ ಮರಣ ಮೊದಲಾದುವನ್ನು ತೋರಿಸುವ ರಟ್ಟಿನ ಮಾದರಿಯೊಂದನ್ನು ತಯಾರುಮಾಡಿ ಇಟ್ಟಿದ್ದರು, ಅದು ಬಹಳ ಚೆನ್ನಾಗಿತ್ತು. ಬೆಂಡಿನಲ್ಲಿ ಸಿಪಾಯಿಗಳನ್ನೂ ಫಿರಂಗಿಗಳನ್ನೂ ರಚಿಸಿದ್ದರು. ಕಾವೇರಿ ನದಿಯನ್ನೂ ಅದನ್ನು ದಾಟುತ್ತಿದ್ದ ಸೈನ್ಯವನ್ನೂ ತೋರಿಸಿದ್ದರು. ಸಾಹೇಬರು ಅದನ್ನು ನೋಡಿ ಬಹಳ ಮೆಚ್ಚಿದರು. ಹಲವು ಪಾಠಗಳಿಗೆ ಬಣ್ಣದ ಚಿತ್ರಗಳನ್ನು ಉಪಾಧ್ಯಾಯ ಯರು ಬರೆದು ಪ್ರದರ್ಶನದಲ್ಲಿಟ್ಟಿದ್ದರು ; ಪ್ರಕೃತಿ ಸಾರಕ್ಕೆ ಸಂಬಂಧ ಪಟ್ಟ ಚಿತ್ರಗಳೂ ಇದ್ದು ವು. ತಂ ತಮ್ಮ ಪ್ರಾಂತಗಳಲ್ಲಿ ದೊರೆಯುವ ಶಿಲೆಗಳನ್ನೂ , ಕಾಗೆ ಬಂಗಾರ ಮೊದಲಾದುವನ್ನೂ ಉಪಾಧ್ಯಾಯರು ಅಲ್ಲಿ ಇಟ್ಟಿದ್ದರು ಕೆಲವು ಹಳೆಯ ನಾಣ್ಯಗಳು, ಕೈಕೆಲಸದ ಮಾದರಿಗಳು, ಪಾರಗಳ ಟಿಪ್ಪಣಿಗಳು ಸಹ ಅಲ್ಲಿದ್ದುವು. ಅವುಗಳನ್ನೆಲ್ಲ ಸಾಹೇಬರು ನೋಡಿ, ' ರಂಗಣ್ಣನವರೇ ! ನಿಮ್ಮ ಉಪಾಧ್ಯಾಯರ ಸಂಘದ ಸಭೆ ಸಂಸ್ಥಾನಕ್ಕೆ ಮಾದರಿಯಾಗಿದೆ. ನನ್ನ ಸರ್ವಿಸ್ಸಿನಲ್ಲಿ ಇಂತಹ ಸಭೆಯನ್ನು ನಾನು ನೋಡಿಯೇ ಇಲ್ಲ ' - ಎಂದು ಪ್ರಶಂಸೆ ಮಾಡಿದರು. ಅದಕ್ಕೆ ರಂಗಣ್ಣ, ' ಸಾರ್ ! ಇದರ ಕೀರ್ತಿಯೆಲ್ಲ ಉಪಾಧ್ಯಾಯರದು. ನನ್ನದೇನಿದೆ ? ನಾನೇ ಉಪಾಧ್ಯಾಯರಿಂದ ಹಲವು ವಿಷಯಗಳನ್ನು ಗ್ರಹಿಸಿದ್ದೇನೆ. ಉತ್ಸಾಹದಿಂದ ಅವರು ಕೆಲಸ ಮಾಡಿ ಕೊಂಡು ಹೋಗುತ್ತಿದಾರೆ, ಇವುಗಳೆಲ್ಲ ಅವರ ಶ್ರಮದ ಫಲ ! ಇಲಾಖೆಯವರು ದಯಾ ಕಟಾಕ್ಷದಿಂದ ನೋಡಿ ಉಪಾಧ್ಯಾಯರ ಸ್ಥಿತಿಗತಿಗಳನ್ನು ಉತ್ತಮ ಪಡಿಸಬೇಕು' ಎಂದು ಹೇಳಿದನು, ಬಳಿಕ ತನ್ನ ಗಡಿಯಾರ ವನ್ನು ನೋಡಿಕೊಂಡನು. ಗಂಟೆ ಮೂರೂವರೆ ಆಗುತ್ತ ಬಂದಿದ್ದರೂ ಉಪಾಹಾರದ ಸುಳಿವು ಕಾಣಿಸಲಿಲ್ಲ, ಏರ್ಪಾಟು ಏನು ನಡೆದಿದೆಯೋ ನೋಡೋಣವೆಂದು ತಿಮ್ಮಣ್ಣ ಭಟ್ಟನನ್ನು ಕರೆದು, ಸಾಹೇಬರಿಗೆ