ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೪

ರಂಗಣ್ಣನ ಕನಸಿನ ದಿನಗಳು

ಪ್ರದರ್ಶನದ ವಿಷಯಗಳನ್ನೆಲ್ಲ ವಿವರಿಸುವಂತೆ ಹೇಳಿ ತಾನು ಮುಸಾಫರ ಖಾನೆಯ ಕಡೆಗೆ ಹೊರಟನು.

ಮುಸಾಫರಖಾನೆಯ ಅಡಿಗೆಯ ಮನೆಯಲ್ಲಿಯೂ, ಪಕ್ಕದ ಊಟದ ಕೋಣೆಯಲ್ಲಿಯೂ ಉಪಾಧ್ಯಾಯರು ತುಂಬಿ ಹೋಗಿದ್ದರು. ಹೊಗೆ ಬಾಗಿಲುಗಳಲ್ಲಿಯೂ ಕಿಟಕಿಗಳಲ್ಲಿಯೂ ತೂರಿಬರುತ್ತಿತ್ತು. ರಂಗಣ್ಣ ಒಳಗೆ ಕಾಲಿಡುತ್ತಲೂ ಉಪಾಧ್ಯಾಯರುಗಳು ಗಲಾಟೆ ನಿಲ್ಲಿಸಿ, ದಾರಿಬಿಟ್ಟು ಕೊಟ್ಟರು. ಅಡಿಗೆಯ ಮನೆಯಲ್ಲಿ ನಾಲ್ಕಾರು ಮೇಷ್ಟ್ರುಗಳು ಸೇರಿಬಿಟ್ಟಿದ್ದಾರೆ ! ತಂತಮ್ಮ ಷರ್ಟುಗಳನ್ನೆಲ್ಲ ಬಿಚ್ಚಿ ಬಿಟ್ಟು, ಪಂಚೆಗಳನ್ನು ಮೊಣಕಾಲ ಮೇಲಕ್ಕೆ ಸೆಳೆದು ಬಿಗಿಯಾಗಿ ಕಟ್ಟಿಕೊಂಡಿದ್ದಾರೆ ! ಕೂದಲ ಗಂಟುಗಳು ಬಿಚ್ಚಿ ಹೋಗಿವೆ ! ಒಲೆಯಲ್ಲಿ ಕಟ್ಟಿಗೆಗಳನ್ನು ಹೇರಿ ಧಗಧಗ ಎಂದು ಉರಿಯುವಂತೆ ಮಾಡಿದ್ದಾರೆ, ಉರಿ ರಭಸವಾಗಿ ಎರಡಡಿಮೇಲಕ್ಕೆ ಹಾರುತ್ತಿದೆ ! ಹತ್ತಿರ ನಿಲ್ಲಲಾಗದು. ಒಲೆಯ ಮೇಲೆ ದೊಡ್ಡ ದೊಂದು ಕೊಳಗದಪ್ಪಲೆ ! ಇಬ್ಬರು ಮೇಷ್ಟ್ರುಗಳು ಗೋಣಿ ಚೀಲಗಳನ್ನು ಒದ್ದೆ ಮಾಡಿಕೊಂಡು ಕೊಳಗ ಪಾತ್ರೆಯನ್ನು ಅದುಮಿ ಹಿಡಿದುಕೊಂಡಿದ್ದಾರೆ. ಇನ್ನಿಬ್ಬರು ಮೇಷ್ಟ್ರುಗಳು ಉದ್ದ ನಾದ ಸರ್ವೆ ಕಟ್ಟಿಗೆಗಳಿಂದ ಪಾತ್ರೆಯೋಳಗಿರುವ ಪದಾರ್ಥವನ್ನು ಕಲಿಸಲು ಪ್ರಯತ್ನಿಸುತ್ತಿದ್ದಾರೆ ! ಮೇ ಷ್ಟುಗಳ ಮೈಯಿಂದ ಬೆವರು ಸುರಿದು ಹೋಗುತ್ತಿದೆ ! ಇನ್ನಿಬ್ಬರು ಮೇಷ್ಟು ಗಳು ಬೀಸಣಿಗೆಗಳಿಂದ ಅವರಿಗೆಲ್ಲ ಗಾಳಿ ಬೀಸುತ್ತಿದಾರೆ ! ಹೊರಗಿದ್ದ ಈ ಉಪಾಧ್ಯಾಯರು, " ಹೊತ್ತಾಗಿ ಹೋಯಿತು ! ಮೂರುವರೆ ಗಂಟೆ ! ಇನ್ ಸ್ಪೆಕ್ಟರು ಬಂದರು. ಎಂದು ಕೂಗಿ ಹೇಳುತ್ತಿದಾರೆ. ಒಳಗಿ೦ದ, “ ಆಯಿತು ತಾಳಿರಯ್ಯ ! ಇನ್ನೆನು ಹದಕ್ಕೆ ಬರುತ್ತಿದೆ ! ತೆಂಗಿನಕಾಯಿ ತುರಿ ತನ್ನಿ ! ಯಾರಾದರೂ ಆ ಗೋಣೀ ತಟ್ಟು ಹಿಡಿದು ಕಾಫಿ ಶೋಧಿಸಿ ! ಎಂದು ಉತ್ತರ ಕೊಡುತ್ತಿದಾರೆ. ರಂಗಣ್ಣ ಎಲ್ಲವನ್ನೂ ನೋಡಿ, ' ಇದೇನು ದೊಡ್ಡ ಅವಾಂತರ! ಒಂದು ಉಪ್ಪಿಟ್ಟು ಮಾಡುವುದಕ್ಕೆ ಇಷ್ಟು ಜನವೇ ? ಸರ್ವೆ ಕಟ್ಟಿಗೆಯಿಂದ ತಿರುವೋದು ಏತಕ್ಕೆ ? ಅಷ್ಟೊಂದು ಉರಿ ಏತಕ್ಕೆ ? ಚೆನ್ನಾಯಿತು ! ತೆಗೆಯಿರಿ ಉರಿಯನ್ನೆಲ್ಲ ! ಎಲ್ಲವೂ ಸೀದಿ ಇದ್ದ ಲಾಯಿತೋ ಏನೋ !' ಎಂದು