ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದಲ್ಲಿ ಸಭೆ

೨೧೫

ಛೀಮಾರಿ ಮಾಡುತ್ತ ಒಳಹೊಕ್ಕು ನೋಡಿದನು. ಉಪ್ಪಿಟ್ಟಿಲ್ಲ ಒಂದು ದೊಡ್ಡ ಅಂಟು ಮುದ್ದೆ ಯಾಗಿ ಕುಳಿತುಬಿಟ್ಟಿದೆ ! ಬಂಕಬಂಕೆಯಾಗಿ ಕಟ್ಟಿಗೆಗಳಿಗೂ ಬದಿಗಳಿಗೂ ಮೆತ್ತಿಕೊಂಡಿದೆ! ರಂಗಣ್ಣನಿಗೆ ನಗು ಒಂದು ಕಡೆ ; ಹೀಗೆ ಏರ್ಪಾ ಡೆಲ್ಲ ಭಂಗವಾಯಿತಲ್ಲ ಎಂದು ವ್ಯಸನವೊಂದು ಕಡೆ, 'ಗೋಪಾಲ ! ಏನು ಮುಟ್ಟಾಳ ಕೆಲಸ ಇದು ? ನಿನಗೆ ಉಪ್ಪಿಟ್ಟು ಮಾಡುವುದು ಗೊತ್ತಿಲ್ಲವೆ? ಎಷ್ಟು ಸಲ ನೀನು ಮಾಡಿಲ್ಲ ? ಸಾಹೇಬರು ಬಂದ ಹೊತ್ತಿನಲ್ಲಿ ಹಿಗೆ ಆ ಭಾಸ ಮಾಡಬಹುದೇ ?' ಎಂದು ಗದರಿಸಿದನು.

'ನನ್ನದು ತಪ್ಪಿಲ್ಲ ಸ್ವಾಮಿ ! ನಾನು ಹೇಳಿದರೆ ಮೇಷ್ಟುಗಳು ಕೇಳಲಿಲ್ಲ. ನೀನೆಲ್ಲೋ ಒಂದು ಪಾವು ರವೆ ಹಾಕಿ ಇನ್ ಸ್ಪೆಕ್ಟರಿಗೆ ಉಪ್ಪಿಟ್ಟು ಮಾಡೊವನು ! ಹತ್ತು ಹನ್ನೆರಡು ಸೇರು ರವೆ ಹಾಕಿ ಮಾಡೋದು ನಿನಗೇನು ಗೊತ್ತು ? ಎಂದು ನನ್ನನ್ನು ದಬಾಯಿಸಿಬಿಟ್ಟು ಅವರವರೇ ಪಾರುಪತ್ಯ ವಹಿಸಿಕೊಂಡರು. ರವೆಯನ್ನು ಹುರಿದಿಟ್ಟುಕೊಳ್ಳಿ ; ನೀರು ಚೆನ್ನಾಗಿ ಮರಳಲಿ ಎಂದು ನಾನು ಹೇಳಿದರೆ ಕೇಳಲಿಲ್ಲ.'

'ಮೇಷ್ಟೇ ! ಇದೇನು, ಎಲ್ಲವನ್ನೂ ಹಾಳುಮಾಡಿದಿರಲ್ಲ? ಏನನ್ನು ಮಾಡಿಟ್ಟಿರಿ ?' ಎಂದು ರಂಗಣ್ಣ ಉಪ್ಪಿಟ್ಟು ಮಾಡುತ್ತಿದ್ದವರನ್ನು ಕೇಳಿದನು. ಆವರು, “ಸಾರ್ ! ಕೊಳಗದಪ್ಪಲೆಯಲ್ಲಿ ಒಗ್ಗರಣೆ ಹಾಕಿದೆವು. ಅದು ಚಟಪಟಗುಟ್ಟ ಘಮ ಘಮಾಯಿ ಸುತ್ತಿರುವಾಗ ರವೆ ಯನ್ನು ಸುರಿದೆವು. ಸೌಟಿನಿಂದ ಎರಡು ಬಾರಿ ತಿರುವಿ ಎರಡು ಕೊಡ ನೀರನ್ನು ಹೋಯ್ತು, ಕೆಳಗೆ ಉರಿ ಏರಿಸಿದೆವು ! ರವೆಯೇಕೆ ನೀರನ್ನು ಹೀರಿಕೊಂಡು ಅ೦ಟುಮುದ್ದೆ ಯಾಗಿ ಹೋಯಿತು ! ಈಗೆಲ್ಲ ಸರಿ ಮಾಡುತ್ತಿದ್ದೇವೆ. ಇನ್ನೆಲ್ಲ ಐದು ನಿಮಿಷ ! ಐದೇ ನಿಮಿಷ ಸಾ !” ಅ೦ಟುಮುದ್ದೆ ಯಾದರೂ ರುಚಿಯಾಗಿದೆ ನೋಡಿ ಸಾರ್ !' ಎಂದು ಹೇಳುತ್ತ ಸರ್ವೆಕಟ್ಟಿಗೆಗೆ ಮೆತ್ತಿ ಕೊಂಡಿದ್ದ ಬಂಕೆಯನ್ನು ನಿಂಬೇ ಹಣ್ಣು ಗಾತ್ರ ಉಂಡೆ ಮಾಡಿ ಕೈಗೆ ಹಾಕಿದರು. ಅದು ಉಪ್ಪು ಪ್ಪಾಗಿ ಕಾರ ಕಾರವಾಗಿ, ಒಂದು ಕಡೆ ಬೆಂದು, ಇನ್ನೊಂದು ಕಡೆ ಬೇಯದೆ ಕೆಟ್ಟು ಹೋಗಿತ್ತು ; ಜತೆಗೆ