ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೬

ರಂಗಣ್ಣನ ಕನಸಿನ ದಿನಗಳು

ಸೀಕಲು ವಾಸನೆ ಇತ್ತು. ರಂಗಣ್ಣನು, 'ಸರಿ ಮೇಷ್ಟೆ ! ಮೊದಲು ತಪ್ಪಲೆ ಕೆಳಗಿಳಿಸಿ ! ಎಲ್ಲ ಬಹಳ ರುಚಿಯಾಗಿದೆ ! ಸಾಹೇಬರಿಗೆ ಈ ತರತೀಪು ಬೇಡ ! ನೀವುಗಳೆಲ್ಲ ಇದನ್ನು ಧ್ವಂಸಮಾಡಿ !' ಎಂದು ಹೇಳಿದನು. ಬಳಿಕ ಕಾಫಿ ಕಷಾಯವನ್ನು ಒಂದು ಲೋಟದಷ್ಟು ಬಗ್ಗಿಸಿಕೊಂಡು, ಹಾಲನ್ನು ಸೇರಿಸಿ, ಸಕ್ಕರೆ ಹಾಕಿ ಕಾಫಿ ಮಾಡಿದನು. ಅಷ್ಟು ಹೊತ್ತಿಗೆ ತಿಮ್ಮಣ್ಣ ಭಟ್ಟ ನು ಸಾಹೇಬರನ್ನು ಕರೆದುಕೊ೦ಡು ಮುಸಾಫರ ಖಾನೆಯ ಬಳಿಗೆ ಬಂದನು , ಗಂಗೇ ಗೌಡರ ಮನೆಯಿಂದ ಬೆಳ್ಳಿಯ ತಟ್ಟೆಗಳನ್ನೂ ಲೋಟಗಳನ್ನೂ ರಂಗಣ್ಣ ತರಿಸಿದನು. ತನ್ನ ತಿಂಡಿ ಯ ಕೈನೆಟ್ಟಗೆಯಿ೦ದ ಮೈಸೂರ ಪಾಕನ್ನೂ ಓಮ ಪುಡಿಯನ್ನೂ ಕೋಡ ಬಳೆಗಳನ್ನೂ ತೆಗೆದು ತಟ್ಟೆಗಳಲ್ಲಿಟ್ಟು, ಬೆಳ್ಳಿಯ ಲೋಟಗಳಲ್ಲಿ ಕಾಫಿಯನ್ನು ಸುರಿದು, ತಿಮ್ಮಣ್ಣ ಭಟ್ಟರ ಕೈಯಲ್ಲಿಯೂ ಗೋಪಾಲನ ಕೈಯಲ್ಲಿ ತೆಗೆಯಿಸಿಕೊಂಡು ಸಾಹೇಬರ ಕೋಣೆಗೆ ಹೋದನು. ಈ ತಿಂಡಿಗಳ ಜೊತೆಗೆ ಬಾಳೆಯಹಣ್ಣು, ಎಳನೀರು ಸಿದ್ಧವಾಗಿದ್ದು ವು.

ಇನ್‌ಸ್ಪೆಕ್ಟರ ಮತ್ತು ಸಾಹೇಬರ ಉಪಾಹಾರ ಮುಗಿಯಿತು. ಅತ್ತ ಮೇಷ್ಟ್ರುಗಳ ಉಪಾಹಾರವೂ ಮುಗಿದು, ಖಾಲಿಯಾಗಿದ್ದ ಕೊಳಗದಪ್ಪಲೆಹೊರಕ್ಕೆ ಬಂದು ಬಿದ್ದಿತ್ತು. ಎಲೆಯಡಕೆಗಳನ್ನು ಹಾಕಿಕೊಂಡು ಎಲ್ಲರೂ ಪಾಠಶಾಲೆಯ ಕಡೆಗೆ ಹೊರಟರು, ಮೇಷ್ಟ್ರರೊಬ್ಬನು ರಂಗಣ್ಣನ ಸಮಾಪಕ್ಕೆ ಬಂದು, ಸಾರ್ !' ಎಂದನು. ರಂಗಣ್ಣನು ಸ್ವಲ್ಪ ಹಿಂದೆ. ಸರಿದು, “ಏನು ಸಮಾಚಾರ ?” ಎಂದು ಕೇಳಿದನು. 'ಕಷ್ಟ ಪಟ್ಟು ಉಪ್ಪಿಟ್ಟು ಮಾಡಿದ್ದೆವು ಸಾರ್ ! ಕೊನೆಕೊನೆಯಲ್ಲಿ ಚೆನ್ನಾಗಿಯೇ ಆಯಿತು ! ಬಹಳ ರುಚಿಯಾಗಿತ್ತು ! ತಾವು ತಿನ್ನಲಿಲ್ಲವಲ್ಲ ಎಂದು ನಮ್ಮಗೆಲ್ಲ ಬಹಳ ವ್ಯಧೆ ! ನಮ್ಮ ಸಂತೋಷದಲ್ಲಿ ಅದೊಂದು ಕೊರತೆಯಾ ಯಿತು. ಸಣ್ಣ ಪಾತ್ರೆಯೊಂದರಲ್ಲಿ ಸ್ವಲ್ಪ ತೆಗೆದಿಟ್ಟು ಗೋಪಾಲನ ಕೈಯಲ್ಲಿ ಕೊಟ್ಟಿದ್ದೇವೆ. ತಾವು ಖಂಡಿತ ರುಚಿ ನೋಡಿ ಸಾರ್ ! ಚೆನ್ನಾಗಿದೆ ! ನೀವೇ ಮೆಚ್ಚಿ ಕೋತೀರಿ' ಎಂದು ಹೇಳಿದನು. ರಂಗಣ್ಣನು ನಗುತ್ತ,ಆಗಲಿ ಮೇಷ್ಟೆ ! ಸಭೆಯಲ್ಲಿ ಮುಗಿದು ಸಾಹೇಬರು ಹೊರಟು ಹೋದೆ ಮೇಲೆ ರುಚಿ ನೋಡುತ್ತೇನೆ' ಎಂದು ಭರವಸೆ ಹೇಳಿದನು.