ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದಲ್ಲಿ ಸಭೆ

೨೧೯

ನೆಲಸಿ ಅವರ ಡೊಂಕನ್ನು ಸರಿಪಡಿಸಲು ವಿಶ್ವಪ್ರಯತ್ನ ಪಟ್ಟನು. ಏನು ಪ್ರಯತ್ನ ಪಟ್ಟರೂ ಸಾರ್ಥಕವಾಗಲಿಲ್ಲ ! ಅವನೂ ನಿರಾಶನಾಗಿ ದೇವಲೋಕಕ್ಕೆ ಹಿಂದಿರುಗಿದನು.'

“ದೇವತೆಗಳೆಲ್ಲ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಬ್ರಹ್ಮಾವಿಷ್ಣು ಮಹೇಶ್ವರರು ಸಭೆಗೆ ಬಂದರು, ನಾರದರು ಅವರ ಮುಖಭಾವಗಳನ್ನು ನೋಡಿದರು. ಬ್ರಹ್ಮನ ಮುಖ ಮಾತ್ರ ಗೆಲುವಾಗಿತ್ತು ; ಸ್ವಲ್ಪ ಜಂಬದಿಂದಲೂ ಕೂಡಿತ್ತು. ಉಳಿದಿಬ್ಬರು ಖಿನ್ನರಾಗಿದ್ದರು. ವಿಷ್ಣುವು,-ಮೇಷ್ಟರ ಡೊಂಕನ್ನು ಎದುರಿಗಿದ್ದಷ್ಟು ಕಾಲ ತಿದ್ದಬಹುದು ; ಆಮೇಲೆ ಎಂದಿನಂತೆಯೆ ಡೊ೦ಕು ತಲೆಯೆತ್ತುತ್ತದೆ! ಏನು ಮಾಡಲಿ ? ತಿದ್ದಲು ನನ್ನಿಂದ ಸಾಧ್ಯವಾಗಲಿಲ್ಲ! ಎಂದು ನಿಜವನ್ನು ಹೇಳಿಬಿಟ್ಟನು, ಮಹೇಶ್ವರನು- ಹಳ್ಳಿಯವರದು ಹಲವಾರು ಡೊಂಕುಗಳು ! ಒಂದು ಕಡೆ ಒಂದನ್ನು ಸರಿ ಮಾಡಿದರೆ ಮತ್ತೊಂದು ಕಡೆ ಬೇರೊಂದು ಎದ್ದು ಕೊಳ್ಳುತ್ತದೆ ! ನನ್ನ ಕೈಯಲ್ಲಿ ಸರಿ ಪಡಿಸುವುದಕ್ಕೆ ಆಗಲಿಲ್ಲ !-ಎಂದು ನಿಜಾಂಶವನ್ನು ತಿಳಿಸಿ ದನು. ದೇವತೆಗಳು ಬ್ರಹ್ಮನ ಮುಖವನ್ನು ನೋಡಿದರು. ಅನನು ಜಂಬದಿಂದ ತನ್ನ ಕಂಕುಳಲ್ಲಿದ್ದ ನಾಯಿಯ ಮರಿಯನ್ನು ಅವರ ಮುಂದಿಟ್ಯನು ! ಎಲ್ಲರೂ ನೋಡುತ್ತಾರೆ ! ನಾಯಿಯ ಬಾಲ ನೆಟ್ಟ ಗಿದೆ ! ಪರಮಾಶ್ಚರ್ಯವಾಯಿತು ! ಆಗ ನಾರದರು, ವೀಣೆಯ ಅಪಸ್ವರದಂತೆ ಕು೦ಯ್ ಗುಟ್ಟುತ್ತಿದ್ದ ನಾಯಿಯನ್ನು ನೋಡಿ, ಇದೇಕೆ ಕುಂಯ್‌ಗುಟ್ಟುತ್ತಿದೆ ? ನೋಡೋಣ ಎಂದು ನಾಯಿಯ ಬಾಲವನ್ನು ಮುಟ್ಟಿ ಸವರಲು ಕೆಳಗಡೆ ಇದ್ದ ಕಂಬಿ ಕೈಗೆ ಸಿಕ್ಕಿತು ! ಕಟ್ಟಿದ್ದ ಕಂಬಿಯನ್ನು ನಾರದರು ಮೆಲ್ಲಗೆ ತೆಗೆದುಬಿಟ್ಟರು ನಾಯಿ ಕುಂಯ್‌ಗುಟ್ಟುವುದು ನಿಂತು ಹೋಯಿತು ! ಯಥಾ ಪ್ರಕಾರ ನಾಯಿಯ ಬಾಲ ಡೊಂಕಾಗಿ ನಿಂತಿತು ! ದೇವತೆಗಳೆಲ್ಲ ಬ್ರಹ್ಮನನ್ನು ನೋಡಿ ಛೀಮಾರಿ ಮಾಡಿದರು : ನೀನು ಮೋಸಗಾರ ! ಸುಳ್ಳುಗಾರ. ನಿನಗೆ ಲೋಕದಲ್ಲಿ ಪೂಜೆಯಿಲ್ಲದೆ ಹೋಗಲಿ ! ' ಎಂದು ಶಪಿಸಿಬಿಟ್ಟರು. ವಿಷ್ಣುವನ್ನೂ ಮಹೇಶ್ವರನನ್ನೂ ನೋಡಿ, ' ನೀವು ನಿಜ ಹೇಳಿದವರು ! ಲೋಕದಲ್ಲಿ ನಿಮಗೆ ಪೂಜೆ ಸಲ್ಲಲಿ ! ಆಯಾ ಭಕ್ತರ ಭಾವದಂತೆ ಅವರವರಿಗೆ ನೀವು ಲೋಕನಾಯಕರಾಗಿ, ದೇವತಾಸಾರ್ವ