ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೦

ರಂಗಣ್ಣನ ಕನಸಿನ ದಿನಗಳು

ಭೌಮರಾಗಿ ಕಾಣಿಸಿಕೊಳ್ಳಿರಿ! – ಎಂದು ಹೇಳಿದರು. ಹೀಗೆ ಪುರಾಣದ ಕಥೆ.

ಸಭೆ ನಗುವಿನಲ್ಲಿ ಮುಳುಗಿ ಹೋಯಿತು ಸಾಹೇಬರೂ ನಗುತ್ತಾ, ರಂಗಣ್ಣನವರೇ ! ಇದು ಯಾವ ಪುರಾಣದಲ್ಲಿದೆ ? ಕಥೆ ಚೆನ್ನಾಗಿದೆಯಲ್ಲ !' ಎಂದು ಕೇಳಿದರು, ರಂಗಣ್ಣ, ಇಂಥವೆಲ್ಲ ನಮ್ಮ ಬ್ರಹ್ಮಾಂಡ ಪುರಾಣದಲ್ಲಿ ಬಹಳ ಇವೆ ಸಾರ್ !' ಎಂದು ನಗುತ್ತಾ ಉತ್ತರ ಕೊಟ್ಟನು. ಬಳಿಕ ಭಾಷಣವನ್ನು ಮುಂದುವರಿಸಿ ' ಆದ್ದರಿಂದ ನಮ್ಮದು ಎಷ್ಟು ಪ್ರಯಾಸದ ಕೆಲಸ ನೋಡಿ ! ಒಂದು ಕಡೆ ಮೇಷ್ಟರುಗಳನ್ನು ತಿದ್ದಿಕೊಳ್ಳುವುದಕ್ಕಾಗಿಯೂ ಇನ್ನೊಂದು ಕಡೆ ಹಳ್ಳಿಯವರಿಗೆ ತಿಳಿವಳಿಕೆ ಕೊಟ್ಟು ಅವರನ್ನು ತಿದ್ದಿಕೊಳ್ಳುವುದಕ್ಕಾಗಿಯೂ, ಎಲ್ಲರಲ್ಲಿಯೂ ಪರಸ್ಪರ ಸೌಹಾರ್ದ ಮತ್ತು ಸಾಮರಸ್ಯಗಳನ್ನುಂಟು ಮಾಡುವುದಕ್ಕಾಗಿಯೂ, ಈ ಉಪಾಧ್ಯಾಯರ ಸಂಘಗಳ ಸಭೆಗಳನ್ನು ಗ್ರಾಮಾಂತರಗಳಲ್ಲಿ ಏರ್ಪಾಡು ಮಾಡುತ್ತಿದೇವೆ – ಎಂದು ರಂಗಣ್ಣ ಹೇಳಿ ಗಂಗೇಗೌಡರ ಔದಾರವನ್ನು ಪ್ರಶಂಸೆಮಾಡಿ ತನ್ನ ಭಾಷಣವನ್ನು ಮುಕ್ತಾಯ ಮಾಡಿ ದನು.

ತರುವಾಯ ಗಂಗೇಗೌಡರು ಗ್ರಾಮಸ್ಥರ ಅಹವಾಲನ್ನು ಹೇಳಿಕೊಳ್ಳುವುದಕ್ಕಾಗಿ ಎದ್ದು ನಿಂತರು. ' ಸ್ವಾಮಿ ! ನನಗೆ ಈ ಸಭೆಯಲ್ಲಿ ಎದ್ದು ಮಾತನಾಡುವುದಕ್ಕೆ ಹೆದರಿಕೆಯಾಗುತ್ತದೆ. ನಮ್ಮ ಇನ್ ಸ್ಪೆಕ್ಟರ್‌ ಸಾಹೇಬರು ದೊಡ್ಡ ವಿದ್ವಾಂಸರು ! ಈಗ ತಾನೆ ಪುರಾಣದ ಕಥೆ ಹೇಳಿ ಹಳ್ಳಿಯವರಲ್ಲಿ ಹಲವು ಡೊಂಕುಗಳಿವೆ ! ಒಂದನ್ನು ಒಂದು ಕಡೆ ಸರಿಪಡಿಸಿದರೆ ಮತ್ತೊಂದು ಬೇರೊಂದು ಕಡೆ ಎದ್ದು ಕೊಳ್ಳುತ್ತದೆ ! ಎಂದು ತಿಳಿಸಿದರು ' ಎಂದು ನಗುತ್ತ ಹೇಳಿದರು. ಸಭೆಯಲ್ಲಿ ಚಪ್ಪಾಳೆ ಧ್ವನಿ ತುಂಬಿ ಹೋಯಿತು. ' ನಾನೊಬ್ಬ ಹಳ್ಳಿಗ ! ನಮ್ಮ ಡೊಂಕುಗಳಿಗೆಲ್ಲ ಮದ್ದು ವಿದ್ಯೆ ! ವಿದ್ಯೆ ನಮ್ಮಲ್ಲಿ ಚೆನ್ನಾಗಿ ಹರಡುತ್ತ ಬಂದು, ಜನರಲ್ಲಿ ಉತ್ಪಾದನ ಶಕ್ತಿ ಬೆಳೆದು, ಹೊಟ್ಟೆ ತುಂಬ ಹಿಟ್ಟು ದೊರೆತರೆ ಡೊಂಕುಗಳು ಮಾಯ ವಾಗುತ್ತವೆ ಸ್ವಾಮಿ ! ಒಳ್ಳೆಯ ವಿದ್ಯೆ, ಒಳ್ಳೆಯ ಊಟ, ಒಳ್ಳೆಯ ನಡತೆ- ಇವುಗಳಿಂದ ನಾವು ಮಾದರಿ ಪ್ರಜೆಗಳಾಗಬಹುದು ; ನಮ್ಮ ದೇಶ ಮಾದರಿ ದೇಶವಾಗಬಹುದು. ಈ ಗ್ರಾಮ ಬಹಳ ದೊಡ್ಡದು. ಪ್ರೈಮರಿ