ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೨

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

ಮಾರನೆಯ ದಿನ ಜನಾರ್ದನ ಪುರಕ್ಕೆ ಹಿಂದಿರುಗುವ ಮೊದಲು ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿಗಳನ್ನು ಹೊಕ್ಕು ಹೊಗೋಣವೆಂದು ರಂಗಣ್ಣನಿಗೆ ಅನ್ನಿಸಿತು. ಅದನ್ನು ಶಂಕರಪ್ಪನಿಗೆ ತಿಳಿಸಿ, ಜನಾರ್ದನಪುರಕ್ಕೆ ಗೋಪಾಲ ಹಿಂದಿರುಗಲಿ ನಾವು ಆ ಹಳ್ಳಿಗಳ ವ್ಯಾಜ್ಯಗಳನ್ನು ಪರಿಹರಿಸಿ ಅನಂತರ ಊರು ಸೇರೋಣ' ಎಂದು ಹೇಳಿದನು,

'ಸ್ವಾಮಿ ! ಆ ಹಳ್ಳಿಗಳ ವ್ಯಾಜ್ಯ ಬಹಳ ತೊಡಕು. ಬಹಳ ಒರಟು. ಹಿಂದಿನ ಇನ್ ಸ್ಪೆಕ್ಟರು ಬಹಳ ಭಂಗಪಟ್ಟು ಹೋದರು ! ಎಂದು ಶಂಕರಪ್ಪ ಹೇಳಿದನು.

'ಎಲ್ಲವೂ ಸರಿಯೆ. ಆದರೆ ಸಾಹೇಬರು ಹೇಳಿದ್ದಾರಲ್ಲ ! ನಾವು ಸಹ ಆ ವ್ಯಾಜ್ಯಕ್ಕೆ ಏನಾದರೊಂದು ಪರಿಹಾರವನ್ನು ಹುಡುಕಬೇಕಾಗಿದೆಯಲ್ಲ. ಹಾಗೆಯೇ ಬೆಳಸು ವುದು ಚೆನ್ನಾಗಿಲ್ಲ,'

'ತಮ್ಮ ಚಿತ್ತ ಸ್ವಾಮಿ! ಹೋಗೋಣ '

ಹಳ್ಳಿಗಳ ಜಗಳ ಹನುಮಂತನಿಗೂ ಗರುಡನಿಗೂ ಆದ ಯುದ್ಧದ ಮತ್ತು ಗರುಡಗರ್ವಭಂಗದ ಪೌರಾಣಿಕ ಕಥೆಯನ್ನು ನಮ್ಮ ಸ್ಮರಣೆಗೆ ತರಬಹುದು. ಯಾವ ಮಹಾರಾಯರು ಆ ಹಳ್ಳಿಗಳಿಗೆ ಆ ಹೆಸರುಗಳನ್ನು ಇಟ್ಟರೋ ! ಒಂದು ಗ್ರಾಂಟು ಸ್ಕೂಲಿನ ವಿಚಾರದಲ್ಲಿ ಆ ಹಳ್ಳಿಗಳಿಗೆ ಪ್ರಬಲವಾದ ಜಗಳಗಳು ನಡೆಯುತ್ತಿದ್ದುವು. ಗರುಡನ ಹಳ್ಳಿಗೂ ಹನುಮನ ಹಳ್ಳಿಗೂ ಮೂರೇ ಮೂರು ಫರ್ಲಾಂಗು ಅಂತರ. ಒಂದೊಂದರಲ್ಲಿ ಸುಮಾರು ಇನ್ನೂರೈವತ್ತು ಪ್ರಜಾಸ೦ಖ್ಯೆಯಿದ್ದು ಒಟ್ಟಿನಲ್ಲಿ ಐನೂರು ಜನಸಂಖ್ಯೆ ಆ ಪಂಚಾಯತಿಗೆ ದಾಖಲಾಗಿತ್ತು, ಆ ಎರಡು ಹಳ್ಳಿಗಳಿಂದಲೂ ಒಂದೇ ಗ್ರಾಮಪಂಚಾಯತಿ ; ಅರ್ಧ ಸದಸ್ಯರು ಗರುಡನಹಳ್ಳಿಯವರು, ಉಳಿದರ್ಧ ಹನುಮನ ಹಳ್ಳಿಯವರು. ಚೇರಮನ್ನು