ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೨೫

ಗಳನ್ನೆಲ್ಲ ದಾಖಲೆಗೆ ತೆಗೆದು ಕೊಂಡಿರುವುದಾಗಿಯೂ ಮೇಷ್ಟು ಇನ್ ಸ್ಪೆಕ್ಟರಿಗೆ ರಿಪೋರ್ಟು ಮಾಡಿದ್ದಾಯಿತು.

ಹೀಗೆ ಗರುಡನ ಹಳ್ಳಿಯಲ್ಲಿ ಸ್ಕೂಲ್ ಸ್ಥಾಪಿತವಾಯಿತೆಂದು ತಿಳಿಯುತ್ತಲೂ ಪಂಚಾಯತಿಯ ಕಾರ್ಯದರ್ಶಿಯಾದ ಶ್ಯಾನುಭೋಗನು ಜನರನ್ನು ಕಟ್ಟಿಕೊಂಡು ಹೋಗಿ ಚೇರ್ಮನ್ನನನ್ನು ಕಂಡು ಪಂಚಾಯತಿಯ ರೆಜಲ್ಯೂಷನ್ನಿನಂತೆ ಸ್ಕೂಲನ್ನು ಹನುಮನ ಹಳ್ಳಿಯಲ್ಲಿ ಸ್ಥಾಪಿಸಬೇಕಲ್ಲದೆ ಗರುಡನ ಹಳ್ಳಿ ಯಲ್ಲಿ ಸ್ಥಾಪಿಸಕೂಡದೆಂದು ಜಗಳ ತೆಗೆದನು. ಆದರೆ ಗರುಡನ ಹಳ್ಳಿಯಲ್ಲಿ ಜನ ಗುಂಪು ಕಟ್ಟಿ, 'ಸ್ಕೂಲು ನಮ್ಮದು ನಿಮ್ಮ ಹುಡುಗರನ್ನು ಇಲ್ಲಿಗೇನೆ ಕಳಿಸಿಕೊಡಿ. ನಮ್ಮ ಆಕ್ಷೇಪಣೆಯಿಲ್ಲ ?

ಎಂದು ಹೇಳಿದರು. ಅದರಮೇಲೆ ಶ್ಯಾನುಭೋಗನು ತನ್ನ ಹಳ್ಳಿಯ ಪಂಚಾಯತಿಯ ಮೆಂಬರುಗಳನ್ನು ಜೊತೆಗೆ ಕಟ್ಟಿ ಕೊಂಡು ಜನಾರ್ದನಪುರಕ್ಕೆ ಹೋಗಿ ಇನಸ್ಪೆಕ್ಟರ್ ಸಾಹೇಬರನ್ನು ಕಂಡು ನಿಂಬೆಯ ಹಣ್ಣುಗಳನ್ನು ಕೈಗೆ ಕೊಟ್ಟು, ತೆಂಗಿನ ಕಾಯಿ ಖರ್ಜೂರ ಬಾದಾಮಿ ಕಲ್ಸಕ್ಕರೆ ಬಾಳೆಹಣ್ಣು ಗಳ ತಟ್ಟೆಗಳನ್ನು ಮೇಜಿನ ಮೇಲಿಟ್ಟು, ಅಹವಾಲನ್ನು ಹೇಳಿಕೊಂಡನು. ಪಂಚಾಯತಿ ಮೆಂಬರುಗಳು, 'ಸ್ವಾಮಿ ! ಹನುಮನಹಳ್ಳಿಯಲ್ಲಿಯೇ ಸ್ಕೂಲ್ ಸ್ಥಾಪಿತವಾಗಬೇಕೆಂದು ಪಂಚಾಯತಿಯ ರೆಜಲ್ಯೂಷನ್ ಆಗಿದೆ. ತಾವು ಸಹ ಹನುಮನ ಹಳ್ಳಿ ಯಲ್ಲಿಯೇ 'ಇಸ್ಕೂಲ್ ಮಾಡು ಎಂದು ಮೇಷ್ಟರಿಗೆ ತಾಕೀತು ಮಾಡಿದ್ದೀರಿ. ಆದರೂ ಚೇರ್ಮನ್ನು ಜುಲುಮಿನಿಂದ ಗರುಡನ ಹಳ್ಳಿಯಲ್ಲೇ ಮೇಷ್ಟರನ್ನು ನಿಲ್ಲಿಸಿಕೊಂಡು ಇಸ್ಕೂಲನ್ನು ಅಲ್ಲೇ ಮಾಡಿಸುತ್ತಿದ್ದಾನೆ. ಈ ಅನ್ಯಾಯವನ್ನು ಪರಿಹರಿಸಬೇಕು' ಎಂದು ಕೈಮುಗಿದು ಕೇಳಿಕೊಂಡರು. ಇನ್ಸ್ಪೆಕ್ಟರು ತಮ್ಮ ಆಜ್ಞೆಯಂತೆ ಮೇಷ್ಟು ನಡೆಯಲಿಲ್ಲವಲ್ಲ ಎಂದು ಕೋಪಗೊಂಡರು; ರೆಜಲ್ಯೂಷನ್ನಿಗೆ ವ್ಯತಿರಿಕ್ತವಾಗಿ ಇನ್ಸ್ಪೆಕ್ಟರು ನಡೆದರೆಂದು ಪಂಚಾಯತಿ ಮೆಂಬರುಗಳು ಎಲ್ಲಿ ಅರ್ಜಿ ಹಾಕುವರೊ ಎಂದು ಹೆದರಿಕೊಂಡರು; ಮತ್ತು ಮೇಜಿನಮೇಲಿದ್ದ ಕಾಣಿಕೆಗಳನ್ನು ನೋಡಿ ಸುಪ್ರೀತರಾದರು, ಅವುಗಳ ಪರಿಣಾಮವಾಗಿ ಮೇಷ್ಟರಿಗೆ, " ಹನುಮನ ಹಳ್ಳಿಗೇನೆ ಸಾಮಾನು ಸಾಗಿಸಿಕೊಂಡು ಹೋಗಿ ಅಲ್ಲಿಯೇ ಪಾಠ ಮಾಡಬೇಕು, ಇಲ್ಲ

15