ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೬

ರಂಗಣ್ಣನ ಕನಸಿನ ದಿನಗಳು

ವಾದರೆ ಸಂಬಳ ಕೊಡುವುದಿಲ್ಲ,' ಎಂದು ಹುಕುಂ ಮಾಡಿ ಅದರ ನಕಲನ್ನು ಶ್ಯಾನುಭೋಗನ ಕೈಯಲ್ಲಿ ಕೊಟ್ಟು ಕಳುಹಿಸಿದರು.

ಮಾರನೆಯ ದಿನ ಮೇಷ್ಟರಿಗೆ ಹುಕುಂ ತಲುಪಿತು. ಸಾಮಾನನ್ನು ತರಲು ಹನುಮನ ಹಳ್ಳಿಯಿಂದ ಗಾಡಿಯೂ ಹೋಯಿತು, ಗರುಡನಹಳ್ಳಿಯವರು ಸಾಮಾನು ಕೊಡಲಿಲ್ಲ ; ಮೇಷ್ಟರು ಹೋಗುವುದಕ್ಕೂ ಅವಕಾಶಕೊಡದೆ ತಡೆದು ಬಿಟ್ಟರು. ಹನುಮನ ಹಳ್ಳಿಯವರಿಗೆ ರೇಗಿಹೋಯಿತು. ದೊಣ್ಣೆಗಳನ್ನೆತ್ತಿಕೊಂಡು ಹೊರಟು ಗರುಡನ ಹಳ್ಳಿಗೆ ಮುತ್ತಿಗೆ ಹಾಕಿದರು ! ಗರುಡನ ಹಳ್ಳಿ ಯವರು ತಮ್ಮಲ್ಲ ದೊಣ್ಣೆಗಳುಂಟೆಂದು ತೋರಿಸುತ್ತ ಕದನಕ್ಕೆ ಸಿದ್ಧರಾದರು ! ಸ್ವಲ್ಪ ಮಾರಾಮಾರಿ ಆಯಿತು! ಅಷ್ಟರಲ್ಲಿ ಶ್ಯಾನುಭೋಗನಿಂದ ಪೊಲೀಸಿಗೆ ಯಾದಿಹೋಯಿತು. ಇದನ್ನು ತಿಳಿದು ಕೊಂಡು ಜನ ಸ್ವಲ್ಪ ಚದರಿದರು. ಸ್ವಲ್ಪ ಹೊತ್ತಿನ ಮೇಲೆ ಸಮಾಧಾನ ಸ್ಥಿತಿ ಏರ್ಪಟ್ಟಿತು.

ಮಾರನೆಯ ದಿನ ಮೇಷ್ಟ್ರು ಹನುಮನ ಹಳ್ಳಿಗೆ ಹೋಗಿ ಶ್ಯಾನುಭೋಗನನ್ನು ಕಂಡನು. ಆತನು ಪಂಚಾಯತಿ ಹಾಲಿನಲ್ಲಿ ಹುಡುಗರನ್ನು ಜಮಾಯಿಸಿ ಕೊಟ್ಟು ಪಾಠಶಾಲೆಯನ್ನು ಅಲ್ಲಿ ನಡೆಸುವಂತೆ ಹೇಳಿದನು. ಇದರ ಫಲವಾಗಿ ದಾಖಲೆಗಳೂ ಸಾಮಾನುಗಳೂ ಗರುಡನ ಹಳ್ಳಿಯಲ್ಲಿ ಉಳಿದು ಕೊಂಡುವು ; ಮೇಷ್ಟು ಮಾತ್ರ ಹನುಮನ ಹಳ್ಳಿಯಲ್ಲಿ ಹುಡುಗರಿಗೆ ಪಾಠ ಹೇಳುತ್ತ ಕಾಲ ಕಳೆದನು. ಇನ್ಸ್ಪೆಕ್ಟರವರ ಹುಕುಮಿನಂತೆ ಅವನು ನಡೆದುಕೊಂಡದ್ದರಿಂದ ಸಂಬಳವೇನೋ ತಿಂಗಳು ತಿಂಗಳಿಗೆ ತಪ್ಪದೆ ಬರುತ್ತಿತ್ತು. ಶ್ಯಾನುಭೋಗನ ಬೆಂಚು, ಬೋರ್ಡು ಮೊದಲಾದ ಸಾಮಾನುಗಳ ನ್ಯೂ ಹಾಜರಿ ರಿಜಿಸ್ಟರ್ ಮೊದಲಾದ ದಾಖಲೆಗಳನ್ನೂ ಗರುಡನ ಹಳ್ಳಿಯಿಂದ ತರಿಸಿಕೊಡಬೇಕೆಂದು ಅಮಲ್ದಾರರಿಗೂ, ಸ್ಕೂಲ್ ಇನ್ಸ್ಪೆಕ್ಟರಿಗೂ ಅರ್ಜಿಗಳನ್ನು ಗುಜರಾಯಿಸಿದನು. ಸ್ಕೂಲ್ ಇನ್ ಸ್ಪೆಕ್ಟರವರು ಪೊಲೀಸ್ ಇನ್ಸ್ಪೆಕ್ಟರಿಗೂ ಅಮಲ್ದಾರರಿಗೂ ಕಾಗದಗಳನ್ನು ಬರೆದು ಅವರ ಕುಮ್ಮಕ್ಕಿನಿಂದ ದಾಖಲೆಗಳನ್ನೂ ಸಾಮಾನುಗಳನ್ನೂ ಹನುಮನ ಹಳ್ಳಿಗೆ ವರ್ಗಾಯಿಸಿದರು. ಈ ಬಲಾತ್ಕಾರ ಪ್ರಯೋಗದಿಂದ ಹನುಮನ ಹಳ್ಳಿ ಯವರಿಗೂ ಗರುಡನ ಹಳ್ಳಿಯವರಿಗೂ