ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೨೭

ಬಲವಾದ ದ್ವೇಷ ಬೆಳೆದು ಪರಸ್ಪರವಾಗಿ ಜನರು ಹೋಗಿ ಬರುವುದು ನಿಂತುಹೋಯಿತು. ಜೊತೆಗೆ ಗರುಡನ ಹಳ್ಳಿಯವರಿಗೆ ಛಲಹುಟ್ಟಿ, ಅವರು ಪಂಚಾಯತಿ ಚೇರ್ಮನ್ ಮತ್ತು ತಮ್ಮ ಹಳ್ಳಿಯಲ್ಲಿದ್ದ ಪಂಚಾಯತಿ ಮೆಂಬರುಗಳನ್ನು ಮುಂದುಮಾಡಿಕೊಂಡು ಮೇಲ್ಪಟ್ಟ ಸಾಹೇಬರಲ್ಲಿಗೆ ಹೋದರು. ನಿಂಬೆಯ ಹಣ್ಣುಗಳು, ಒಂದು ಗೊನೆ ರಸಬಾಳೆಹಣ್ಣು, ಎರಡು ಹಲಸಿನಹಣ್ಣುಗಳು, ಎಳನೀರು ಮೊದಲಾದ ಕಾಣಿಕೆಗಳನ್ನು ತೆಗೆದುಕೊಂಡು ಹೋಗಿ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡು ಅಹವಾಲನ್ನು ಹೇಳಿಕೊಂಡರು ಸಾಹೇಬರು ಸಾವಧಾನವಾಗಿ ಎಲ್ಲವನ್ನೂ ಕೇಳಿ ಇನ್ಸ್ಪೆಕ್ಟರ್ ಮಾಡಿದ್ದು ತಪ್ಪೆಂದು ತೀರ್ಮಾನಿಸಿಕೊಂಡು, ಪಾಠಶಾಲೆಯನ್ನು ಗರುಡನ ಹಳ್ಳಿಗೆ ವರ್ಗಾಯಿಸಿ ಹುಕುಂ ಮಾಡಿದರು. ಮಧ್ಯಾಹ್ನ ಗರುಡನ ಹಳ್ಳಿಯವರು ಆ ಹುಕುಮಿನ ನಕಲನ್ನು ತೆಗೆದುಕೊಂಡು ಜಯಘೋಷ ಮಾಡುತ್ತ ಕಚೇರಿಯಿಂದ ಹೊರಟು ತಮ್ಮ ಹಳ್ಳಿಯನ್ನು ಸೇರಿದರು, ಇನ್ ಸ್ಪೆಕ್ಟರಿಗೂ ಹುಕುಮಿನ ನಕಲುಹೋಯಿತು. ಅವರು ಆ ಹುಕುಮಿನಂತೆ ಹನುಮನ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಮೇಷ್ಟರಿಗೆ ತಾಕೀತು ಮಾಡಿದರು. ಪುನಃ ಅವನು ಗರುಡನ ಹಳ್ಳಿಗೆ ಹೋಗಿ ಕೆಲಸಮಾಡತೊಡಗಿದನು !

ಹನುಮನ ಹಳ್ಳಿಯವರು ಶ್ಯಾನುಭೋಗನ ಮುಖಂಡತನದಲ್ಲಿ ಪಂಚಾಯತಿ ಹಾಲಿನಲ್ಲಿ ಸಭೆ ಸೇರಿದರು. ತಮಗೆ ಅಪಜಯವಾದುದಕ್ಕೆ ಖಿನ್ನರಾದರು. ಯುದ್ಧದಲ್ಲಿ ಜಯಾಪಜಯಗಳು ದೈವ ಯೋಗದಿಂದ ಉಂಟಾಗತಕ್ಕುವು. ಆದರೂ ಮನುಷ್ಯನು ಕಾರ್ಯ ಸಾಧನೆಯ ಪ್ರಯತ್ನ ವನ್ನು ಬಿಡಬಾರದು ” ಎಂದು ಶ್ಯಾನುಭೋಗನು ಅವರಿಗೆಲ್ಲ ಸಮಾಧಾನ ಹೇಳಿ ಊರ ಜನರನ್ನು ಕಟ್ಟಿಕೊಂಡು, ಎರಡು ಗೊನೆ ರಸಬಾಳೆಹಣ್ಣು, ಒಂದು ಮಣ ಒಳ್ಳೆಯ ತುಪ್ಪ, ಹಲಸಿನಹಣ್ಣುಗಳು, ದ್ರಾಕ್ಷಿ, ಖರ್ಜೂರ ಬಾದಾಮಿ- ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಒಬ್ಬರು ಮುಖಂಡರನ್ನು ಮುಂದುಮಾಡಿಕೊಂಡು ಡೆಪ್ಯುಟಿ ಡೈರೆಕ್ಟರ್ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡನು ; ಕಾಣಿಕೆಗಳನ್ನು ಒಪ್ಪಿಸಿದನು. ಆ ದೊಡ್ಡ ಗುಂಪನ್ನು ಆ ಸಾಹೇಬರು ನೋಡಿ ನ್ಯಾಯ ಅವರ ಕಡೆಯೇ