ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೮

ರಂಗಣ್ಣನ ಕನಸಿನ ದಿನಗಳು

ಇರುವುದೆಂದು ತೀರ್ಮಾನಿಸಿಕೊಂಡು, ಆ ಸ್ಕೂಲು ಸಂಬಂಧವಾದ ಕಡತವನ್ನು ತರಿಸಿಕೊಂಡು ಹುಕುಂ ಮಾಡಿದರು ; “ ಇನ್ಸ್ಪೆಕ್ಟರು ಪಂಚಾಯತಿಯ ರೆಜಲ್ಯೂಷನ್ನಿನಂತೆ ಸರಿಯಾಗಿ ಏರ್ಪಾಟು ಮಾಡಿದ್ದರು. ಡಿ. ಇ. ಓ. ಸಾಹೇಬರು ಅದನ್ನು ಬದಲಾಯಿಸಿ ಸ್ಕೂಲನ್ನು ಗರುಡನ ಹಳ್ಳಿಗೆ ವರ್ಗಾಯಿಸಿದ್ದು ಶುದ್ಧ ತಪ್ಪು. ಈಗ ಮೊದಲಿನಂತೆಯೇ ಸ್ಕೂಲನ್ನು ಹನುಮನ ಹಳ್ಳಿಯಲ್ಲಿ ನಡೆಸಬೇಕು. ಆ ಬಗ್ಗೆ ರಿಪೋರ್ಟು ಮಾಡಬೇಕು ” ಎಂದು ಹುಕುಮಿನಲ್ಲಿತ್ತು. ಅದರ ನಕಲನ್ನು ನೇರವಾಗಿ ಇನ್ ಸ್ಪೆಕ್ಟರ್ ಅವರಿಗೂ ಕಳಿಸಿಬಿಟ್ಟು, ಕೂಡಲೇ ರಿಪೋರ್ಟು ಮಾಡಬೇಕೆಂದು ತಿಳಿಸಿದರು. ತಾನು ಮಾಡಿದ್ದ ಏರ್ಪಾಟನ್ನೆ ಡೆಪ್ಯುಟ ಡೈರೆಕ್ಟರ್ ಸಾಹೇಬರು ಮಂಜೂರ್ ಮಾಡಿದ್ದನ್ನು ನೋಡಿ ಡಿ,ಇ, ಓ ಸಾಹೇಬರ ಹುಕುಮನ್ನು ರದ್ದು ಪಡಿಸಿದ್ದನ್ನೂ ನೋಡಿ ಇನ್ ಸ್ಪೆಕ್ಟರಿಗೆ ಬಹಳ ಸಂತೋಷವಾಯಿತು. ಆ ಹುಕುಮಿನಂತೆ ತಾವು ಮೇಷ್ಟರಿಗೆ ತಾಕೀತು ಮಾಡಿ, ಆ 'ವಿಚಾರವನ್ನು ಮೇಲ್ಪಟ್ಟ ಇಬ್ಬರು ಅಧಿಕಾರಿಗಳಿಗೂ ತಿಳಿಸಿದರು. ಪಾಪ ! ಆ ಮೇಷ್ಟು ಹುಕುಮನ್ನು ನೋಡಿಕೊಂಡು ಪುನಃ ಹನುಮನಹಳ್ಳಿಗೆ ಹೊರಟುಹೋದನು !

ಮೇಲೆ ಹೇಳಿದ ವರ್ಗಾವರ್ಗಿಗಳ ಗಲಾಟೆಯಿಂದ ಸ್ಕೂಲ್ ಕೆಲಸ ಎಲ್ಲಿಯೂ ಚೆನ್ನಾಗಿ ನಡೆಯಲಿಲ್ಲ. ಆದರೆ ವರ್ಷಕ್ಕೊಂದು ಬಾರಿ ಪದ್ಧತಿ ಯಂತೆ ಮಾಡಬೇಕಾದ ತನಿಖೆಗಾಗಿ ಇನ್ ಸ್ಪೆಕ್ಟರು ಹನುಮನ ಹಳ್ಳಿಗೆ ಹೋದರು. ಹೀಗೆ ಅವರು ತನಿಖೆಗಾಗಿ ಬಂದಿರುವ ಸಮಾಚಾರ ಗರುಡನ ಹಳ್ಳಿಗೆ ಮುಟ್ಟಿತು. ಪಂಚಾಯತಿ ಚೇರ್ಮನ್ನು, ಇತರ ಮೆಂಬರುಗಳು, ಮತ್ತು ಜನ ಗರುಡನ ಹಳ್ಳಿಯಿಂದ ಹನುಮನ ಹಳ್ಳಿಗೆ ಹೋದರು, ತಮ್ಮ ಹಟವೇ ಗೆದ್ದ ಉತ್ಸಾಹದಲ್ಲಿ ಇನ್ಸ್ಪೆಕ್ಟರು ಆ ಜನರನ್ನು ಎದುರು ಹಾಕಿಕೊಂಡರು. ಆ ಒರಟು ಜನ ಒರಟು ಮಾತುಗಳಲ್ಲಿ ಇನ್ಸ್ಪೆಕ್ಟರನ್ನು ಬೈದರು ; ಅವರನ್ನು ಹೊಡೆಯುವುದಕ್ಕೂ ಹೋದರು. ಹನುಮನ ಹಳ್ಳಿ ಯವರು ಅಡ್ಡ ಬಂದು ಆ ಇನ್ ಸ್ಪೆಕ್ಟರನ್ನು ರಕ್ಷಿಸಿ ಕಡೆಗೆ ಅವರನ್ನು ಜನಾರ್ದನಪುರಕ್ಕೆ ಕ್ಷೇಮವಾಗಿ ಸೇರಿಸಿದರು.

ಮೇಲಿನ ವ್ಯಾಜ್ಯ ಅಷ್ಟರಲ್ಲಿ ಮುಗಿಯಲಿಲ್ಲ. ಗರುಡನ ಹಳ್ಳಿ,