ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೨೯

ಯವರು ಡೈರೆಕ್ಟರ್ ಸಾಹೇಬರಲ್ಲಿ ಅಪೀಲುಹೋಗಿ ಮನವಿ ಮಾಡಿಕೊಂಡರು ; ಬೆಂಗಳೂರಿನಲ್ಲಿ ತಮಗೆ ಬೇಕಾದ ಕೆಲವರು ಮುಖಂಡರ ಸಹಾಯವನ್ನು ಪಡೆದುಕೊಂಡರು. ಒಂದು ವಾರದವರೆಗೂ ಡೈರೆಕ್ಟರ್ ಸಾಹೇಬರ ಕಚೇರಿಗೆ ಮುತ್ತಿಗೆ ಹಾಕಿ ಕಡೆಯಲ್ಲಿ ತಮ್ಮ ಪರವಾಗಿ ಹುಕುಮನ್ನು ಮಾಡಿಸಿದರು ; ' ಗರುಡನ ಹಳ್ಳಿಯಲ್ಲಿ ನಡೆಯುತ್ತಿದ್ದ ಪಾಠಶಾಲೆಯನ್ನು ಅಲ್ಲಿಂದ ಬದಲಾಯಿಸಿದ್ದು ಶುದ್ಧ ತಪ್ಪ, ಇನ್ ಸ್ಪೆಕ್ಟರೂ ಡೆಪ್ಯುಟಿ ಡೈರೆಕ್ಟರೂ ವಿವೇಚನೆಯನ್ನು ಉಪಯೋಗಿಸಲಿಲ್ಲ. ಇಷ್ಟೆಲ್ಲ ಗಲಭೆಗೆ ಅವರೇ ಕಾರಣರು. ಈಗ ಪ್ರಾರಂಭದಲ್ಲಿದ್ದಂತೆಯೇ ಗರುಡನ ಹಳ್ಳಿಯಲ್ಲಿ ಪಾಠ ಶಾಲೆ ನಡೆಯಬೇಕು ” ಎಂದು ಕೆಳಗಿನವರಿಗೆ ತಾಕೀತು ಆಯಿತು. ಆದರ ನಕಲನ್ನು ನೇರವಾಗಿ ಇನ್ ಸ್ಪೆಕ್ಟರಿಗೆ ಕಳಿಸಿಕೊಟ್ಟರು !

ಹೀಗೆ ಒಂದು ಬಾರಿ ಗರುಡನ ಹಳ್ಳಿ ಯವರಿಗೆ ಜಯ, ಒ೦ದು ಬಾರಿ ಹನುಮನ ಹಳ್ಳಿಯವರಿಗೆ ಜಯ ಕೈಗೂಡಿ, ಆ ಯುದ್ಧ ಸಮುದ್ರ ತರಂಗದಂತೆ ಹಿಂದಕ್ಕೂ ಮುಂದಕ್ಕೂ ಆಂದೋಲನವಾಗುತ್ತಿತ್ತು. ಹನುಮನ ಹಳ್ಳಿಯವರು ತಮಗಾದ ಅಪಜಯವನ್ನು ನೋಡಿ, 'ಹೊಳೆಯ ತನಕ ಓಟ, ದೊರೆಯ ತನಕ ದೂರು ” ಎನ್ನುವ ಗಾದೆಯನ್ನು ಜ್ಞಾಪಕಕ್ಕೆ ತಂದುಕೊಂಡು, ಧೈರ್ಯಗುಂದದೆ, ಈ ಯುದ್ಧದಲ್ಲಿ ಗರುಡ ಗರ್ವಭಂಗವೇ ಆಗಿ ಪರಮ ಭಕ್ತ ನಾದ ಹನುಮನ ಹಳ್ಳಿಗೇನೆ ಜಯ ಸಿದ್ಧಿಸುವುದೆಂದು ಹುರುಪುಗೊಂಡು ಸರ್ಕಾರಕ್ಕೆ ಅರ್ಜಿಯನ್ನು ಗುಜರಾಯಿಸಿ, ಕೌನ್ಸಿಲರ್ ಸಾಹೇಬರನ್ನು ಅಠಾರಾ ಕಚೇರಿಯಲ್ಲಿ ಕಂಡು ಅಹವಾಲು ಗಳನ್ನು ಹೇಳಿಕೊಂಡರು. ಸರ್ಕಾರದವರು ಆ ಅರ್ಜಿಯನ್ನು ರಿಪೋರ್ಟು ಬಗ್ಗೆ ಡೈರೆಕ್ಟರ್ ಸಾಹೇಬರಿಗೆ ಕೊಟ್ಟು ಕಳಿಸಿದರು. ಅದು ಆ ಕಚೇರಿಯಿಂದ ಪದ್ಧತಿಯಂತೆ ಡೆಪ್ಯುಟಿ ಡೈರೆಕ್ಟರವರ ಕಚೇರಿಗೂ ಅಲ್ಲಿಂದ ಡಿ' ಇ. ಓ. ಸಾಹೇಬರ ಕಚೇರಿಗೂ ಇಳಿದು ಬಂದು, ಕಟ್ಟ ಕಡೆಯಲ್ಲಿ ವಿವರವಾದ ವರದಿಯನ್ನು ಕಳಿಸುವ ಬಗ್ಗೆ ಇನ್ ಸ್ಪೆಕ್ಟರ್ ರಂಗಣ್ಣನ ಕಚೇರಿಗೆ ಬಂದು ಸೇರಿತು ! ಈ ಮಧ್ಯದಲ್ಲಿ ಡೈರೆಕ್ಟರ್ ಸಾಹೇಬರಿಂದ ಡಿ. ಇ, ಓ, ಸಾಹೇಬರಿಗೆ ಬೇಗ ವರದಿ ಕಳಿಸಬೇಕೆಂದೂ ಸರ್ಕಾರಕ್ಕೆ ರಿಪೋರ್ಟು ಮಾಡುವುದು ತಡವಾಗುತ್ತಿರುವುದೆಂದೂ ಖಾಸಗಿ ಪತ್ರ