ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೩೧

'ಇಬ್ಬರೂ ತಮ್ಮದೇ ನ್ಯಾಯವೆಂದು ಹೊಡೆದಾಡುತ್ತಿದ್ದೀರಲ್ಲ!'

'ಅದು ಹೇಗೆ ಸ್ವಾಮಿ ? ಕಣ್ಣು ಬಿಟ್ಟು ನ್ಯಾಯ ನೋಡಬೇಕು ; ನಮ್ಮ ಪಂಚಾಯತಿ ರೆಜಲ್ಯೂಷನ್ ನೋಡಬೇಕು. ತಾವೇ ಈ ರಿಕಾರ್ಡನ್ನು ನೋಡಿ ಸ್ವಾಮಿ !' ಎಂದು ಹೇಳುತ್ತ ಶ್ಯಾನುಭೋಗನು ಪಂಚಾಯತಿ ಮೀಟಿಂಗ್ ಪುಸ್ತಕವನ್ನು ಕೈಗೆ ಕೊಟ್ಟು, ಹಿಂದೆ ಆದ ಮೀಟಿಂಗಿನ ವರದಿಯಿದ್ದ ಹಾಳೆಯನ್ನು ತೋರಿಸಿದನು. ಅದರಲ್ಲಿ ಹನುಮನ ಹಳ್ಳಿಯಲ್ಲಿ ಸ್ಕೂಲನ್ನು ಮಾಡಬೇಕೆಂದು ತೀರ್ಮಾನವಿತ್ತು.

'ನೋಡಿ ಸ್ವಾಮಿ | ಪಟೇಲನೇ ಚೇರ್ಮನ್ನು, ಸ್ವಹಸ್ತದಿಂದ ರುಜು ಮಾಡಿದ್ದಾನೆ ! ಅಕ್ಷರ ತಿಳಿದ ಇತರರು ರುಜು ಮಾಡಿದ್ದಾರೆ ! ಅಕ್ಷರ ತಿಳಿಯದ ಮೆಂಬರುಗಳು ಹೆಬ್ಬೆಟ್ಟು ಗುರುತು ಹಾಕಿದ್ದಾರೆ. ಅದಕ್ಕೆ ಚೇರ್ಮನ್ನೆ ಬರಹ ಬರೆದಿದ್ದಾನೆ. ಹೀಗಿದ್ದರೂ ಕೂಡ ಈಗ ಗಂಡಾಗುಂಡಿ ವ್ಯಾಜ್ಯ ತೆಗೆಯೋ ಜನಕ್ಕೆ ಛೀಮಾರಿಮಾಡದೆ ಸ್ಕೂಲನ್ನು ಗರುಡನ ಹಳ್ಳಿಗೆ ವರ್ಗಾಯಿಸಿದ್ದೀರಿ?

'ಈ ರಿಕಾರ್ಡುಗಳನ್ನೆಲ್ಲ ತೆಗೆದುಕೊಳ್ಳಿ ಶ್ಯಾನುಭೋಗರೆ ! ಅಲ್ಲಿಗೆ ಹೋಗೋಣ. ನಮ್ಮ ಮರ್ಯಾದೆಗೇನೂ ಕಡಮೆಯಾಗುವುದಿಲ್ಲ'

'ಕ್ಷಮಿಸಬೇಕು ಸ್ವಾಮಿ ! ನಾವು ಈಚೆಗೆ ಆ ಹಳ್ಳಿಗೆ ಹೋಗುತ್ತಾ ಇಲ್ಲ ! ಆ ಹಳ್ಳಿಯವರೂ ಇಲ್ಲಿಗೆ ಬರುತ್ತಾ ಇಲ್ಲ ! ಈಚೆಗೆ ಪಂಚಾಯತಿ ಮೀಟಿಂಗುಗಳನ್ನು ಸಹ ನಾವು ನಡೆಸುತ್ತಾ ಇಲ್ಲ !'

'ಹಾಗಾದರೆ, ಒಂದು ಕೆಲಸ ಮಾಡಿ. ನಿಮ್ಮ ಹಳ್ಳಿ ಯ ಎಲ್ಲೆಯ ಹತ್ತಿರ ಹೋಗೋಣ. ಅವರನ್ನು ಅಲ್ಲಿಗೆ ಬರಮಾಡಿಕೊಳ್ಳೋಣ.'

'ಏನೋ ಸ್ವಾಮಿ ? ತಾವು ಹೇಳುತ್ತೀರಿ. ಮನಸ್ಸಿಲ್ಲದ ಮನಸ್ಸಿನಿಂದ ನಾವು ಒಪ್ಪಿ ಕೊಳ್ಳಬೇಕು. ಗರುಡನ ಹಳ್ಳಿಯ ವರಂತೆ ಒರಟಾಟ ಮಾಡುವುದಕ್ಕೆ ನಮಗೆ ಇಷ್ಟವಿಲ್ಲ.'

ಕಡೆಗೆ ಹನುಮನ ಹಳ್ಳಿಯವರು ಇನ್‌ಸ್ಪೆಕ್ಟರವರ ಜೊತೆಯಲ್ಲಿ ಹೊರಟರು. ಎಲ್ಲೆಯ ಬಳಿ ಬಂದು ಅಲ್ಲಿದ್ದ ಒಂದು ಆಲದ ಮರದ