ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

೨೩೪

ರಿಕಾರ್ಡು ಮಾಡಿಬಿಟ್ಟರು ! ಸರಿಯಾಗಿ ಬರೆದಿರಬಹುದು ಎಂದು ನಾನು ನಂಬಿ ಬೇಹುಷಾರಾಗಿ ರುಜು ಮಾಡಿಬಿಟ್ಟೆ ಸ್ವಾಮಿ ! ನಮ್ಮವರೂ ಹೆಬ್ಬೆಟ್ಟು ಗುರುತು ಒತ್ತಿಬಿಟ್ಟರು. ಆಮೇಲೆ ನಮಗೆ ಶ್ಯಾನುಭೋಗರು ಮಾಡಿದ ಮೋಸ ತಿಳಿಯಿತು ಸ್ವಾಮಿ! ತಾವು ನ್ಯಾಯ ಫೈಸಲ್ ಮಾಡಿ. ನಮ್ಮದು ಅನ್ಯಾಯ ಎಂದು ತೋರಿಸಿಕೊಡಿ ; ತಮ್ಮ ಗುಲಾಮನಾಗ್ತೇನೆ.'

ಗರುಡನ ಹಳ್ಳಿ ಯವರದೇ ತಪ್ಪು ಎಂದ ಖಂಡಿತ ಮಾಡಿಕೊಂಡು “ಬಂದಿದ್ದ ರಂಗಣ್ಣನಿಗೆ ನ್ಯಾಯ ಎತ್ತ ಕಡೆಗಿದೆ ಎನ್ನುವುದು ತಿಳಿಯದೇ ಹೋಯಿತು ಶ್ಯಾನುಭೋಗನು ಕೈ ಕೊಟ್ಟಿದ್ದರೂ ಕೊಟ್ಟಿರಬಹುದು ಎಂದು ಸಂದೇಹಪಟ್ಟನು. ಹೇಗಾದರೂ ಆಗಲಿ, ಈಗ ಒಂದು ಸಮಾಧಾನದ ಮಾರ್ಗವನ್ನು ಹುಡುಕುವುದು ಒಳ್ಳೆಯದು ಎಂದು ನಿರ್ಧರಿಸಿಕೊಂಡು, “ಚೇರ್ಮನ್ನರೇ ! ಈ ಊರಾಚೆಯ ಕಲ್ಲು ಮಂಟಪ ಎಲ್ಲಿದೆ ? ತೋರಿಸಿ, ಅದು ಅನುಕೂಲವಾಗಿದ್ದರೆ ಹನುಮನ ಹಳ್ಳಿಯವರಿಗೆ ಬುದ್ಧಿ ಹೇಳೋಣ' ಎಂದನು. “ಆಗಲಿ ಸ್ವಾಮಿ ! ತೋರಿಸುತ್ತೇನೆ; ನಡೆಯಿರಿ. ನಮ್ಮ ನ್ಯಾಯ ತಾವಾದರೂ ಗ್ರಹಿಸಿಕೊಳ್ಳಿ. ಅಲ್ಲಿ ಇಸ್ಕೂಲ್ ಮಾಡಿದರೆ ಹನುಮನ ಹಳ್ಳಿಯ ಮಕ್ಕಳು ಬರುವುದಕ್ಕೆ ಏನು ಅಡ್ಡಿ ? ತಾವೇ ಎಲ್ಲವನ್ನೂ ನೋಡಿ'- ಎಂದು ಚೇರ್ಮನ್ನು ಹೇಳಿ ಇನ್ ಸ್ಪೆಕ್ಟರನ್ನು ಕರೆದುಕೊಂಡು ಹೊರಟನು. ಹಳ್ಳಿಯ ಆಚೆ ಹನುಮನ ಹಳ್ಳಿಗೆ ಹೋಗುವ ದಾರಿಯಲ್ಲಿ ಕಲ್ಲುಮಂಟಪವಿತ್ತು. ಅದು ಸುಮಾರಾಗಿ ಚೆನ್ನಾಗಿಯೇ ಇತ್ತು. ಮುಂಭಾಗದಲ್ಲಿ ಗೋಡೆ ಹಾಕಿ, ಕಿಟಕಿಗಳನ್ನು ಇಟ್ಟರೆ ಪಾಠ ಶಾಲೆಯನ್ನು ನಡೆಸುವುದಕ್ಕೆ ಅನುಕೂಲವಾಗುವಂತಿತ್ತು. ಅದನ್ನು ನೋಡಿ ರಂಗಣ್ಣನು, 'ನೀವು ಹೇಳಿದ ಮಾತು ನ್ಯಾಯವಾಗಿದೆ, ಆ ಆಲದ ಮರದ ಕೆಳಗೆ ಹನುಮನ ಹಳ್ಳಿಯವರು ಕುಳಿತಿದ್ದಾರೆ. ಆಲ್ಲಿಗೆ ಹೋಗೋಣ, ಈ ದಿನ ಏನಾದರೊಂದನ್ನು ಇತ್ಯರ್ಥ ಮಾಡಿ ಬಿಡೋಣ. ಎಲ್ಲವನ್ನೂ ಮಹಾತ್ಮ ಗಾಂಧಿಯವರ ತತ್ತ್ವದಂತೆ ಅಹಿಂಸೆ ಮತ್ತು ಸತ್ಯಗಳಿಂದಲೇ ಪರಿಹಾರ ಮಾಡಿಬಿಡೋಣ. ನಿಮ್ಮ ಎರಡು ಹಳ್ಳಿಗಳಲ್ಲಿಯೂ ರಾಮರಾಜ್ಯ ಪ್ರತ್ಯಕ್ಷವಾಗಲಿ' ಎಂದು ಹೇಳಿದನು. ಗರುಡನ