ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೩೭

'ಈಗ ಆ ಜಮೀನಿನಲ್ಲಿ ಸ್ಕೂಲಿಗೆ ಬೇಕಾದಷ್ಟು ಜಾಗವನ್ನು ಹನುಮನ ಹಳ್ಳಿಯವರು ಮುಫತ್ತಾಗಿ ಕೊಡಲಿ. ಆ ರೈತನಿಗೆ ಹೇಳಿ ಅದನ್ನು ಕೊಡಿಸುವ ಜವಾಬ್ದಾರಿ ಶ್ಯಾನುಭೋಗರದು. ಆ ಜಾಗದಲ್ಲಿ ಗರುಡನ ಹಳ್ಳಿಯವರು ಕಟ್ಟಡ ಮುಫತ್ತಾಗಿ ಕಟ್ಟಿ ಕೊಡಲಿ, ಎಂತಿದ್ದರೂ ಕಲ್ಲುಗಳನ್ನೂ ಮರವನ್ನೂ ಶೇಖರಿಸಿಟ್ಟು ಕೊಂಡಿದ್ದಾರೆ. ಆ ಮಂಟಪವನ್ನು ಸರಿಪಡಿಸುವುದಕ್ಕೆ ಬದಲು ಅದೇ ಸಾಮಾನುಗಳಿಂದ ಇಲ್ಲಿ ಕಟ್ಟಡ ಎಬ್ಬಿಸಬಹುದು. ಇದರ ಜವಾಬ್ದಾರಿ ಚೇರ್ಮನ್ನರದು. ನನ್ನ ಜವಾಬ್ದಾರಿ: ಆ ಕಟ್ಟಡದಲ್ಲಿ ಇಬ್ಬರು ಮೇಷ್ಟರಿರುವ ಪಕ್ಕ ಸರಕಾರಿ ಸ್ಕೂಲನ್ನು ಸ್ಥಾಪಿಸುವದು. ಹೀಗೆ ನಾವು ಮೂವರೂ ನಮ್ಮ ನಮ್ಮ ಭಾಗದ ಕೆಲಸಗಳನ್ನು ಮಾಡಿ ಕೊಟ್ಟರೆ ಎರಡು ಹಳ್ಳಿಯ ಮಕ್ಕಳೂ ಉದ್ಧಾರವಾಗುತ್ತಾರೆ! ಏನು ಹೇಳುತ್ತಿರಿ ? ನೀವು ಒಪ್ಪಿದರೆ ಒಂದು ವಾರದೊಳಗಾಗಿ ಸರಕಾರಿ ಸ್ಕೂಲನ್ನು ಮಂಜೂರ್‌ ಮಾಡಿ ಕೊಡುತ್ತೇನೆ. ಅಷ್ಟರೊಳಗಾಗಿ ನೀವು ಮುಚ್ಚಳಿಕೆಗಳನ್ನು ಬರೆದು ಕೊಡಬೇಕು. ಜಮೀನಿನ ವಿಚಾರದಲ್ಲಿ ಛಾಫಾ ಕಾಗದದಲ್ಲಿ ಬರೆದು ರಿಜಿಸ್ಟರ್ ಮಾಡಿಸಿ ಇಲಾಖೆಗೆ ವಹಿಸಿಬಿಡಬೇಕು, ನನಗೆ ಜವಾಬು ಕೊಡಿ”-ಎಂದು ರಂಗಣ್ಣನು ಹೇಳಿದನು,

ಎರಡು ನಿಮಿಷಗಳ ಕಾಲ ಯಾರೂ ಮಾತನಾಡಲಿಲ್ಲ. ಶ್ಯಾನುಭೋಗನು ಜಮಾನಿನ ರೈತನನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಏನನ್ನೊ ಬೋಧಿಸಿದನು. ಸ್ವಲ್ಪ ಹೊತ್ತಿನಮೇಲೆ ಅವರಿಬ್ಬರೂ ಹಿಂದಿರು ಗಿದರು. 'ಸ್ವಾಮಿ | ರೈತನು ಹತ್ತು ಗುಂಟೆ ಜಮಾನನ್ನು ಮುಫತ್ತಾಗಿ ಕೊಡಲು ಒಪ್ಪಿದ್ದಾನೆ. ಈಗಲೇ ಬರಿ ಕಾಗದದಲ್ಲಿ ಮುಚ್ಚಳಿಕೆ ಬರೆದು ಕೊಡುತ್ತಾನೆ. ನಾಳಿ ಜನಾರ್ದನಪುರಕ್ಕೆ ಬಂದು ಛಾಪಾ ಕಾಗದದಲ್ಲಿ ಬರೆಯಿಸಿ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ರಿಜಿಸ್ಟರ್ ಮಾಡಿಸಿಕೊಡುತ್ತಾನೆ, ಆದರೆ ಈಗಿರುವ ಬೆಳೆಯನ್ನು ರೈತ ತೆಗೆದುಕೊಳ್ಳುವುದಕ್ಕೆ ಮಾತ್ರ ಆವಕಾಶ ಕೊಡಿ.. ಇನ್ನು ಒಂದು ತಿಂಗಳಿಗೆ ಕೊಯ್ಲು ಆಗುತ್ತದೆ ಎಂದು ಶ್ಯಾನುಭೋಗರು ಹೇಳಿದನು. ರೈತನು ಅನುಮೋದಿಸಿದನು, ರಂಗಣ್ಣನೂ ಒಪ್ಪಿಕೊಂಡನು. ಚೇರ್ಮನ್ನು, 'ಸ್ವಾಮಿ ! ತಮ್ಮ ಇರಾದೆ