ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೩

ಬೆಂಗಳೂರಿನಲ್ಲಿ

ಜನಾರ್ದನಪುರದ ಸಬ್ ರಿಜಿಸ್ಟ್ರಾರವರ ಕಚೇರಿಯಲ್ಲಿ ಪತ್ರ ರಿಜಿಸ್ಟರ್ ಆಗಿ ಹನುಮನ ಹಳ್ಳಿಯ ಜಮೀನಿನ ಭಾಗ ಇಲಾಖೆಯವರ ವಶಕ್ಕೆ ಬಂದಿತು. ರಂಗಣ್ಣ ಎಲ್ಲ ಸಮಾಚಾರಗಳನ್ನೂ ತಿಳಿಸಿ ಮೇಲಿನ ಅಧಿಕಾರಿಗಳಿಗೆ ವರದಿಯನ್ನು ಕಳಿಸಿ, ತಾನು ಮಾಡಿದ ಏರ್ಪಾಟಿಗೆ ಮಂಜೂರಾತಿಯನ್ನು ಕೊಡಬೇಕೆಂದು ಕೇಳಿಕೊಂಡನು. ಸಾಹೇಬರಿಂದ ಮಂಜೂರಾತಿಯ ಹುಕುಂ ಬಂದುದೊಂದೇ ಅಲ್ಲ ; ಏರ್ಪಾಟಿನ ಬಗ್ಗೆ ಪ್ರಶಂಸೆಯೂ ಬಂದಿತು, ರಂಗಣ್ಣನಿಗೆ ಪರಮ ಸಂತೋಷವಾಯಿತು. ನಾಗೇನಹಳ್ಳಿಗೊಂದು ಸರಕಾರದ ಸ್ಕೂಲು ಸಹ ಮಂಜೂರಾಯಿತು. ಅಲ್ಲಿಯ ಪಂಚಾಯತಿ ಮೆಂಬರುಗಳು ಜನಾರ್ದನಪುರಕ್ಕೆ ಬಂದು ಇನ್ಸ್ಪೆ ಕ್ಟರ್ ಸಾಹೇಬರಿಗೆ ತಮ್ಮ ಕೃತಜ್ಞತೆಯನ್ನು ಸೂಚಿಸಿದರು. ಅವರ ಜೊತೆಯಲ್ಲಿ ಕರಿಹೈದನೂ ಬಂದಿದ್ದನು. ' ಸೋಮಿ ? ಗಾಡಿಗೆ ಕಮಾನು ಕಟ್ಟಿವ್ನಿ, ತಾವು ಬರೋ ದಿವಸ ಮುಂದಾಗಿ ತಿಳ್ಸಿದ್ರೆ ಗಾಡಿ ತಂದು ಕರಕೊಂಡು ಹೋಗಿ, ಆರಾಮಾಗಿ ಕುಳಿತುಕೊಂಡು ಬರಬೋದು. ಈಗ ನೀರ ಹರವುಗಳ ಕಾಟಾನು ಇಲ್ಲ ಸೋ ಮಿ ! ” ಎಂದು ಹೇಳಿದನು. ರಂಗಣ್ಣನಿಗೆ ತಾನು ಮೊತ್ತ ಮೊದಲು ಕಂಬದಹಳ್ಳಿಗೆ ಭೇಟಿ ಕೊಟ್ಟಿದ್ದರ ಕಥೆಯೆಲ್ಲ ಸ್ಮರಣೆಗೆ ಬಂತು. ಕರಿಹೈದನಿಗೆ ತಾನು ಕೊಟ್ಟಿದ್ದ ಮಾತಿನಂತೆ ನಾಗೇನಹಳ್ಳಿಗೆ ಒಂದು ಸ್ಕೂಲನ್ನು ಕೊಡುವ ಸುಯೋಗ ಉ೦ಟಾಯಿತಲ್ಲ ಎಂದು ರಂಗಣ್ಣನು ಸಂತೋಷ ಪಟ್ಟನು. ಮುಂದಿನ ವಾರ ಪ್ರಾರಂಭೋತ್ಸವ ಇಟ್ಟುಕೊಳ್ಳಿ ; ಕರಿಹೈದ ಗಾಡಿ ತರಲಿ ; ಬರುತ್ತೇನೆ' ಎಂದು ಹೇಳಿ ಅವರನ್ನು ಬೀಳ್ಕೊಟ್ಟನು.

ಮೇಲೆ ಹೇಳಿದ ಸಂತೋಷದ ವಾತಾವರಣ, ಆ ದಿನ ಟಪ್ಪಾಲಿನಲ್ಲಿ ಬಂದ ಒಂದು ಕಾಗದದಿಂದ ಸ್ವಲ್ಪ ಕಲುಷಿತವಾಯಿತು, ಬೆಂಗಳೂರಿನ

16