ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

೨೪೨

ದೊಡ್ಡ ಸಾಹೇಬರು - ಡೈರೆಕ್ಟರ್ ಸಾಹೇಬರು – ರಂಗಣ್ಣನನ್ನು ಕೆಲವು ರಿಕಾರ್ಡುಗಳೊಂದಿಗೆ ಕೂಡಲೇ ಬಂದು ತಮ್ಮನ್ನು ಕಾಣಬೇಕೆಂದೂ ಕೆಲವು ವಿಚಾರಗಳಿಗೆ ನೇರಾಗಿ ಸಮಜಾಯಿಷಿಗಳನ್ನು ಕೊಡಬೇಕೆಂದೂ ಕಾಗದ ಬರೆದಿದ್ದರು. ದೊಡ್ಡ ಬೋರೇಗೌಡರು ತನಗೆ ಹೇಳಿದ ವಿಷಯಗಳೆಲ್ಲ ರಂಗಣ್ಣನಿಗೆ ಜ್ಞಾಪಕಕ್ಕೆ ಬಂದುವು. ಅವನು ಚಿಂತಾಭರಿತನಾಗಿ ಆಲೋಚಿಸುತ್ತಿ ದ್ದಾ ಗ ಜನಾರ್ದನ ಪುರದ ಫೈಮರಿ ಸ್ಕೂಲಿನ ಹೆಡ್ಮೇಷ್ಟು ಬಂದು ಕೈ ಮುಗಿದನು

'ಏನು ಹೆಡ್ ಮೇಷ್ಟೆ ! ಈಗ ಸ್ಥಿತಿ ಹೇಗಿದೆ ? ಆ ಮನುಷ್ಯ ದಾರಿಗೆ ಬಂದಿದಾನೆಯೋ ? ' ಎಂದು ರಂಗಣ್ಣ ಕೇಳಿದನು.

'ಸ್ವಾಮಿ ! ಆ ಮನುಷ್ಯ ಬಾರಿಗೆ ಬರುವುದೆಂದರೇನು ? ಆತನಿಗೆ ಯಾರೂ ಲಕ್ಷ ವಿಲ್ಲ. ತಮ್ಮನ್ನೂ ಇಲಾಖೆಯ ಎಲ್ಲ ಅಧಿಕಾರಿಗಳನ್ನೂ ಬಾಯಿಗೆ ಬಂದ ಹಾಗೆ ಬಯ್ಯುತ್ತ - ಇವರಿಗೆಲ್ಲ ಕೆಲವು ದಿನಗಳಲ್ಲೇ ಮಾಡ್ತೇನೆ ; ಬಿಸಿ ಮುಟ್ಟಿಸ್ತೇನೆ - ಎಂದು ಹೇಳಿಕೊಳ್ಳುತ್ತಿದಾನೆ. ಪಾಠ ಶಾಲೆಯಲ್ಲಿ ಮನಸ್ಸು ಬಂದಾಗ ಒಂದಿಷ್ಟು ಪಾಠಮಾಡುತ್ತಾನೆ ; ಮನಸ್ಸಿಲ್ಲದಾಗ ಹುಡುಗರನ್ನು ಹೊರಕ್ಕೆ ಬಿಟ್ಟು ತಾನು ಬೆಂಚುಗಳನ್ನು ಜೋಡಿಸಿಕೊಂಡು ಮಲಗಿಬಿಡುತ್ತಾನೆ !'

'ಆತನಿಂದ ಏನಾದರೂ ಸಮಜಾಯಿಷಿ ಕೇಳಿದ್ದೀರಾ ? ಬರೆವಣಿಗೆಯಲ್ಲಿ ಏನಾದರೂ ಕೊಟ್ಟಿದ್ದಾನೆಯೇ ? '

'ಮೆಮೋ ಮಾಡಿ ಕಳಿಸಿದೆ ಸ್ವಾಮಿ ! ಸಮಜಾಯಿಷಿ ಕೊಡಲಿಲ್ಲ, ಮೆಮೋ ಪುಸ್ತಕವನ್ನೇ ಕಿತ್ತಿಟ್ಟು ಕೊಂಡು ಜವಾನನನ್ನು ವಾಪಸು ಕಳಿಸಿ ಬಿಟ್ಟಿದ್ದಾನೆ! ಈಗ ಮೆಮೊ ಮಾಡುವುದಕ್ಕೆ ಪುಸ್ತಕವೇ ನನಗಿಲ್ಲ ! '

'ನನ್ನನ್ನು ಕಾಣಬೇಕೆಂದು ನೀವು ಆತನಿಗೆ ಹೇಳಲಿಲ್ಲವೇ ? '

'ಹೇಳಿದೆ ಸ್ವಾಮಿ !- ನಾನೇಕೆ ಹೋಗಲಿ ಅವರನ್ನು ಕಾಣುವುದಕ್ಕೆ ! ಕಾಲಿಗೆ ಬೀಳೋದಕ್ಕೆ ಬೇಕಾಗಿದ್ದರೆ ಅವರೇ ನನ್ನನ್ನು ಬಂದು ಕಾಣಲಿ ! ಭೇಟಿ ಕೊಡುತ್ತೇನೆ !~ ಎಂದು ಜವಾಬು ಹೇಳಿದನು.'

'ಒಳ್ಳೆಯದು ಹೆಡ ಮೇಷ್ಟೆ ! ನಿಮ್ಮ ರಿಪೋರ್ಟಿನ ಮೇಲೆಯೇ ನಾನೇನನ್ನೂ ಮಾಡುವುದಕ್ಕಾಗುವುದಿಲ್ಲ. ನಾನು ಆತನ ಸಮಜಾಯಿಷಿ