ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

೨೪೪

'ಎಲ್ಲಾರೂ ಚೆನ್ನಾಗಿದ್ದಾರೆ! ಸೌಖ್ಯವಾಗಿದ್ದಾರೆ! ಭೇಟಿಯ ಪರಿಣಾಮ ಏನು ? ಎಂದು ಕೇಳುತ್ತೀಯೆ. ಎಲ್ಲವನ್ನೂ ಕಕ್ಕಿಬಿಡೋಣ ಎಂದು ಇಲ್ಲಿಗೆ ಬಂದಿದ್ದೆನೆ ??

'ಹಾಗೆಯೇ ಮಾಡು ರ೦ ಗ ಣ್ಣ ! ಹೊಟ್ಟೆಯಲ್ಲಿರುವುದನ್ನೆಲ್ಲ ಕಕ್ಕಿಬಿಟ್ಟು ಖಾಲಿ ಮಾಡಿಕೋ ! ಆಮೇಲೆ ಈ ಪೊಟ್ಟೆಗಳನ್ನೆಲ್ಲ ಹೊಟ್ಟೆಗೆ ಭರ್ತಿ ಮಾಡಬಹುದು !' ಎಂದು ತಿಮ್ಮರಾಯಪ್ಪನು ನಗುತ್ತಾ ಚೀಲದಲ್ಲಿದ್ದ ಪೊಟ್ಟಣಗಳನ್ನೆಲ್ಲ ತೆಗೆದು ತಟ್ಟೆಗಳಲ್ಲಿಟ್ಟನು. ಜಿಲೇಬಿ, ಮೈಸೂರು ಪಾಕು, ಸೋನಾಹಲ್ವ, ಉದ್ದಿನ ವಡೆ, ಕಾರದವಲಕ್ಕಿ, ಕಾರದ ಗೋಡಂಬಿ ಬೀಜ- ಅವನು ತಂದಿದ್ದ ತಿಂಡಿಗಳು ! ಅವು ಸಾಲದೆಂದು ಒಳಗೆ ಹೋಗಿ ರಸಬಾಳೆಹಣ್ಣು, ಬಿಸ್ಕತ್ತುಗಳು ಮತ್ತು ಕಾಫಿಯನ್ನು ತಂದು ಮೇಜಿನ ಮೇಲಿಟ್ಟನು.

'ಇದೇನಿದು ತಿಮ್ಮರಾಯಪ್ಪ ! ಈ ಭಾರಿ ಸಮಾರಾಧನೆ ?'

'ಅಹುದಪ್ಪ ! ಡೈರೆಕ್ಟ ರು ತಮ್ಮನ್ನು ಕಾಣುವುದಕ್ಕೆ ಬರಹೇಳಿದ್ದಾರೆ ಎಂದು ನೀವು ಕಾಗದ ಬರೆದಿರಲಿಲ್ಲವೇ ? ನೀನು ನಿನ್ನ ಹೊಟ್ಟೆಯಲ್ಲಿರುವುದನ್ನೆಲ್ಲ ಕಕ್ಕುವುದಕ್ಕೆ ಇಲ್ಲಿಗೆ ಬರುತ್ತೀಯೆಂದು ನನಗೆ ತಿಳಿದಿಲ್ಲವೇ ? ಖಾಲಿ ಹೊಟ್ಟೆಗೆ ಸಮಾರಾಧನೆಯ ಏರ್ಪಾಟನ್ನು ಮಾಡಬೇಡವೆ ?'

'ಕೈಗೆ ನೀರು ಕೊಡು ತಿಮ್ಮರಾಯಪ್ಪ ಕೈ ತೊಳೆದುಕೊಂಡುನನ್ನ ಆಗ್ರಹವನ್ನೆಲ್ಲ ತೀರಿಸಿಕೊಳ್ಳುತ್ತೇನೆ ! ತಿಮ್ಮರಾಯಪ್ಪನು ನೀರನ್ನು ತಂದು ಕೊಟ್ಟನು. ಸ್ನೇಹಿತರಿಬ್ಬರೂ ಕೈ ತೊಳೆದುಕೊಂಡು ಧ್ವಂಸನ ಕಾರ್ಯದಲ್ಲಿ ನಿರತರಾದರು.

'ನೋಡು ತಿಮ್ಮರಾಯಪ್ಪ ! ಇವರಿಗೆಲ್ಲ ಆ ರಾಜಕೀಯ ಮುಖಂಡರ ಪಿಶಾಚಿಗಳು ಬಲವಾಗಿ ಹಿಡಿದುಬಿಟ್ಟಿವೆ! ಹೆದರಿಕೊಂಡು ಸಾಯುತ್ತಾರೆ!- ನನ್ನನ್ನೇ ಅವರು ಲಕ್ಷ್ಯಮಾಡುವುದಿಲ್ಲ; ಇನ್ನು ಜುಜುಬಿ ಇನ್‌ಸ್ಪೆಕ್ಟರನ್ನು ಲೆಕ್ಕದಲ್ಲಿಡುತ್ತಾರೆಯೆ? ನೀವೇಕೆ ಅವರನ್ನೆಲ್ಲ ವಿರೋಧ ಮಾಡಿಕೊಂಡಿರಿ ? ನಿಮ್ಮ ರೆಕಾರ್ಡು ಕಟ್ಟಿಕೊಂಡು ಏನು ? ನಿಮ್ಮ ಕೆಲಸ ಮತ್ತು ದಕ್ಷತೆ ಕಟ್ಟಿಕೊಂಡು ಏನು ? ಆ ಮುಖಂಡರೆಲ್ಲ ದಿವಾನರಿಗೆ