ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೆಂಗಳೂರಿನಲ್ಲಿ

೨೪೫

ಬೇಕಾದವರು, ದಿನಾಗಲೂ ಮೇಲಿಂದ ನಿಮ್ಮ ವಿಚಾರದಲ್ಲಿ ಕಾಗದಗಳು ಬರುತ್ತವೆ ! ನಾನೇನು ಸಮಾಧಾನ ಬರೆಯುತ್ತಿರಬೇಕು !~ ಎಂದು ಮುಂತಾಗಿ ನನ್ನನ್ನು ಝಂಕಿಸಿದರು, ನನಗೆ ಕೋಪ ಬಂತು, ಏನು ಸಾರ್ ! ಬದ್ಮಾತುಗಳೆಲ್ಲ ಮುಖಂಡರು ! ಅವರ ಮಾತು ನಿಮಗೆ ಮುಖ್ಯ. ಮನಸ್ಸಾಕ್ಷಿಗನುಸಾರವಾಗಿ ಕಷ್ಟ ಪಟ್ಟು ಕೆಲಸ ಮಾಡುವುದನ್ನು ನೋಡುವುದಿಲ್ಲ. ತಮಗೆ ತೃಪ್ತಿಯಿಲ್ಲದಿದ್ದರೆ ಈ ಕ್ಷಣ ಕೆಲಸಕ್ಕೆ ರಾಜೀನಾಮ ಕೊಟ್ಟು ತೊಲಗಿ ಹೋಗುತ್ತೇನೆ ಎಂದು ಜವಾಬು ಕೊಟ್ಟು ಬಿಟ್ಟೆ. ಅವರು ತಾಳ್ಮೆಗೆಡದೆ- ಉದ್ರೇಕಗೊಳ್ಳ ಬೇಡಿ ರಂಗಣ್ಣ ! ಕಾಲಸ್ಥಿತಿ ತಿಳಿದುಕೊಂಡು ನಾವು ನಡೆದುಕೊಳ್ಳಬೇಕು. ನಮ್ಮಲ್ಲಿ ಮುಖಂಡರ ನೈತಿಕ ಮಟ್ಟ ಬಹಳ ಕಳಕ್ಕಿದೆ ! ಮೇಲಿನವರಿಗೆ ಆ ಮುಖಂಡರ ಬೆಂಬಲ ಮತ್ತು ಓಟುಗಳು ಬೇಕಾಗಿವೆ ! ಸರಿಯಾದ ನೈತಿಕ ವಾತಾವರಣವಿಲ್ಲ, ಗುಣಗ್ರಾಹಿಗಳು ಯಾರೂ ಇಲ್ಲ. ಸ್ವಾರ್ಥ ಪರರ ಕೈವಾಡ ಪ್ರಬಲವಾಗಿದೆ. ನಮ್ಮಂಥವರಿಗೇನೆ ಕಿರುಕುಳಗಳಿವೆ ; ಮರ್ಯಾದೆ ಕೊಡುವುದಿಲ್ಲ, ಆದ್ದರಿಂದ ಟ್ಯಾಕ್ಟ್ ಉಪಯೋಗಿಸಬೇಕು ಎಂದು ನಿಮಗೆ ಬುದ್ಧಿ ಹೇಳಿದೆ- ಎಂದರು. ತಿಮ್ಮರಾಯಪ್ಪ ! ಅದೇನು ಹಾಳು ಟ್ಯಾಕ್ಟೊ ! ಒಬ್ಬರಾದರೂ ಹೀಗೆ ಮಾಡಿದರೆ ಟ್ಯಾಕ್ಟ್ ಎಂದು ತಿಳಿಸಿದವರಿಲ್ಲ, ಆ ಪದವನ್ನು ಕಂಡರೆ ನನಗೆ ಮೈ ಯಲ್ಲಿ ಉರಿದುಹೋಗುತ್ತದೆ ! ನಿಘಂಟಿನಲ್ಲಿ ಆ ಪದವೇ ಇಲ್ಲದಂತೆ ಅದನ್ನು ಹರಿದುಬಿಡೋಣ ಎನ್ನಿಸಿದೆ !'

'ಅಯ್ಯೋ ಶಿವನೇ ! ಇದೇನು ನಿನಗೆ ಹುಚ್ಚು ರಂಗಣ್ಣ ! ನಿನ್ನ ನಿಘಂಟನ್ನು ಹರಿದು ಹಾಕಿಕೊಂಡರೆ ಇಂಗ್ಲಿಷು ಭಾಷೆಯಿಂದ ಅದು ಹಾರಿಹೋಗುತ್ತದೆಯೆ ? ಆಕ್ಸಫರ್ಡ್ ಡಿಕ್ಷನರಿಯಿಂದ ವೆಬ್ ಸ್ಟೆರ್ ಡಿಕ್ಷನರಿಯಿಂದ ವಜಾ ಆಗಿಬಿಡುತ್ತದೆಯೆ ? ನೀನೂ ಟ್ಯಾಕ್ಟ್ ಇರೋ ಮನುಷ್ಯನೇ ! ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಯವನ್ನು ನೀನು ಪರಿಹಾರ ಮಾಡಿದೆಯಲ್ಲ ! ಅದು ಟ್ಯಾಕ್ಟ್ ಅಲ್ಲದೆ ಮತ್ತೆ ಏನು !'

'ಹಾಗಾದರೆ ನನ್ನನ್ನು ಇವರೆಲ್ಲ ಏಕೆ ಟೀಕಿಸುತ್ತಾರೆ ? ಟ್ಯಾಕ್ಸ್ ಉಪಯೋಗಿಸಬೇಕು ಎಂದು ಏಕೆ ಹೇಳುತ್ತಾರೆ.'