ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೆಂಗಳೂರಿನಲ್ಲಿ

೨೪೭

ನನ್ನ ಕಾಲದವನ್ನೆಲ್ಲ ನಾನು ತಿದ್ದಿದ್ದೇನೆ. ಹಿಂದಿನದನ್ನು ಕ್ರಮವಾಗಿ ಅವಕಾಶವಾದಾಗ ತಿದ್ದುತ್ತೇನೆ ಎಂದು ಸಮಜಾಯಿಷಿ ಹೇಳಿದನು. ಸಾಹೇಬರು ಸುಮ್ಮನೇ ಇದ್ದು ಎರಡು ತಿಂಗಳ ನಂತರ ರಿಪೋರ್ಟು ಕಳಿಸಿದಾಗ ಅದರಲ್ಲಿ ಆ ಹೊಸ ಮೇಷ್ಟರಿಗೆ ಗೂಟಗಳನ್ನು ಹಾಕಿ ರೋದೇ ! ಹಿಂದಿನ ಅಭ್ಯಾಸಗಳನ್ನು ಏಕೆ ತಿದ್ದಲಿಲ್ಲ? ಆ ಹೊಸ ಮೇಷ್ಟರಿಗೆ ದಂಡನೆ ಏಕೆ ಮಾಡಬಾರದು? ಎಂಬ ಬಗ್ಗೆ ಸಮಜಾಯಿಷಿ ತೆಗೆದು ಕಳಿಸಬೇಕೆಂದು ಹೆಡ್'ಮೇಷ್ಟರಿಗೆ ತಾಕೀತು ಕೊಡೋದೇ ! ಯಾರು ಮಾಡಿದ ತಪ್ಪಿಗೆ ಯಾರಿಂದ ಸಮಜಾಯಿಷಿ ? ಯಾರಿಗೆ ದಂಡನೆ ? ಆತ ನನ್ನ ಸ್ನೇಹಿತ. ನನ್ನ ಹತ್ತಿರ ಬಂದು ಹೇಳಿಕೊಂಡನು. ಇದೆಂತಹ ಹುಚ್ಚು ಆಡಳಿತ !?

'ಚೆನ್ನಾಗಿದೆ | ನಮ್ಮ ಇಲಾಖೆ ಬಹಳ ಸುಧಾರಿಸಬೇಕು ರಂಗಣ್ಣ!?

'ಈಗ ನಿನ್ನನ್ನೊ೦ದು ಸಲಹೆ ಕೇಳಬೇಕು ನೋಡು !

'ಕೇಳಪ್ಪ ಕೇಳು ! ಮತ್ತೆ ಯಾವನಾದರೂ ತಿರುಗಿ ಬಿದ್ದಿದ್ದಾನೋ? ಅಲ್ಲಿ ಇರುವವರು ಇಬ್ಬರು. ಮೂರನೆಯವನು ಯಾವನೂ ಇಲ್ಲವಲ್ಲ !?

'ಮೂರನೆಯವನು ಆ ಇಬ್ಬರ ಏಜೆಂಟು ? ಒಬ್ಬ ಮೇಷ್ಟು! ಹಿಂದೆ ಡೆಪ್ಯುಟಿ ಕಮಿಷನರ್ ಸಾಹೇಬರನ್ನೆ ಲಕ್ಷ್ಯಮಾಡದೆ ಒರಟು ಜವಾಬು ಕೊಟ್ಟ ಸಿಪಾಯಿ !!

'ಏನು ಅವನ ವಿಚಾರ ??

'ಅವನನ್ನು ಸಸ್ಪೆಂಡ್ ಮಾಡಿ ಬಿಡೋಣವೆಂದಿದ್ದೇನೆ.'

'ಅಯ್ಯೋ ಶಿವನೇ! ಏಕ್ ದಂ ಸಸ್ಪೆಂಡ್ ಮಾಡುತ್ತೀಯಾ? ಒಳ್ಳೆಯದಲ್ಲವಲ್ಲ ! ಜುಲ್ಮಾನೆ ಗಿಲ್ಮಾನೆ ಹಾಕಿ ನೋಡು.”

'ಅಷ್ಟಕ್ಕೆಲ್ಲ ಸಗ್ಗುವ ಮನುಷ್ಯನಲ್ಲ. ನೀನು ಎಂದರೆ ನಿಮ್ಮಪ್ಪ ಎನ್ನುವ ಗಟ್ಟಿ ಪಿಂಡ !?

'ಉಪಾಯದಲ್ಲಿ ವರ್ಗಮಾಡಿಸಿಬಿಡು.”

'ಹಿಂದೆ ಎರಡು ಬಾರಿ ವರ್ಗ ಆಗಿದ್ದು, ಸಾಹೇಬರುಗಳ ಹತ್ತಿರ ನಿಮ್ಮ ಮುಖಂಡರು ಹೋಗಿ ಅದನ್ನು ರದ್ದು ಮಾಡಿಸಿದರು. ಅವನು ತಲೆಯೆತ್ತಿಕೊಂಡು ಮೆರೆಯುತ್ತಿದ್ದಾನೆ. ಒಂದು ವೇಳೆ ಈಗ ಮೇಲಿನವರಿಗೆ ಹೇಳಿ ವರ್ಗ ಮಾಡಿಸಿದೆ ಅನ್ನು, ಅವನು ರಜಾ ತೆಗೆದುಕೊಂಡು