ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ರಂಗಣ್ಣನ ಕನಸಿನ ದಿನಗಳು

ಕೊಂಡು, ' ಐದು ನಿಮಿಷ ವಿರಾಮಕೊಡು ಮಹಾರಾಯ ! ಊಟ ಮಾಡಿಕೊಂಡು ಬರುತ್ತೇನೆ. ನೀನು ಸ್ವಲ್ಪ ಹಾಲು ಹಣ್ಣನ್ನಾದರೂ ತೆಗೆದುಕೊ, ನೀನು ನಮ್ಮಲ್ಲಿ ಊಟ ಮಾಡುವುದಿಲ್ಲ ' - ಎಂದು ಹೇಳಿ ಒಳಕ್ಕೆ ಹೋದನು. ಕೆಲವು ನಿಮಿಷಗಳಲ್ಲಿ ಹಿಂದಿರುಗಿ ಬಂದು ಬೆಳ್ಳಿಯ ಲೋಟದ ತುಂಬ ಹದವಾದ ಹಾಲು, ಬೆಳ್ಳಿಯ ತಟ್ಟೆಯಲ್ಲಿ ಬಾಳೆಯ ಹಣ್ಣು ಮತ್ತು ಕಿತ್ತಳೆ ಹಣ್ಣುಗಳನ್ನು ತಂದಿಟ್ಟು, ಇದನ್ನು ಊಟ ಮಾಡು ' ಎಂದು ನಗುತ್ತ ಹೇಳಿದನು.

'ನಿನ್ನ ಮನೆಯಲ್ಲಿ ಊಟ ಮಾಡುವ ಕಾಲವೂ ನಿನ್ನ ಮಗಳನ್ನು ನನ್ನ ಮಗನಿಗೆ ಕೊಟ್ಟು ಮದುವೆ ಮಾಡುವ ಕಾಲವೂ ಬಂದಾಗ ನಮ್ಮ ದೇಶ ಉದ್ಧಾರವಾಗುತ್ತದೆ. ಏನೋ ಹಿಂದಿನವರು ಮಾಡಿಟ್ಟ ಆಚಾರ ವ್ಯವಹಾರ. ಅ೦ತೂ ಸವೆದ ಹಾದಿಯಲ್ಲೇ ಹೋಗುತ್ತಿದ್ದೇವೆ. '

ಶಿವನಿದಾನೆ ಬಿಡು ! ಅವನು ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ' ಎಂದು ಹೇಳಿ ತಿಮ್ಮರಾಯಪ್ಪ ಊಟಕ್ಕೆ ಹೋದನು. ರಂಗಣ್ಣನು ತಟ್ಟಿ ಯಲ್ಲಿದ್ದುದನ್ನೂ ಲೋಟದಲ್ಲಿದ್ದುದನ್ನೂ ಚೆನ್ನಾಗಿಯೇ ಊಟ ಮಾಡಿದನು. ಹದಿನೈದು ನಿಮಿಷಗಳ ತರುವಾಯ ತಿಮ್ಮರಾಯಪ್ಪ ಹಿಂದಿರುಗಿದನು. ಗಂಡ ಹೆಂಡರಿಗೆ ಏನೋ ಮಾತು ಬೆಳೆದ ಹಾಗಿತ್ತು. ಆಕೆ ಹಿಂದೆಯೇ ಬರುತ್ತ, ನಾನು ಆ ದಿನದಿಂದಲೂ ಹೇಳುತ್ತಿದ್ದೇನೆ. ನಮಗೆ ಬಿಲ್ ಕೊಲ್ ಈ ಹಾಳು ಕೆಲಸ ಬೇಡ. ಹಿಂದಿನ ಕೆಲಸಕ್ಕೆನೆ ಹೊರಟು ಹೋಗೋಣ, ಈಗ ನಿಮ್ಮ ಸ್ನೇಹಿತರಿಗೆ ಎಷ್ಟು ಸುಲಭದಲ್ಲಿ ಇನ್ಸ್ಪೆಕ್ಟರ್ ಕೆಲಸ ಆಯಿತು. ನೀವೇ ನೋಡಿ --- ಎಂದು ರೇಗಾಡಿದಳು. ಋಣಾನುಬಂಧ ಇರುವವರೆಗೂ ನಡೆಯಲಿ, ಬಿಟ್ಟು ಹೋಗುವಾಗ ಬಿಟ್ಟು ಹೋಗಲಿ. ನೀನೇಕೆ ರೇಗಾಡುತ್ತೀಯೆ ? ಹೋಗಿ ಮಲಗಿಕೋ ? ಎಂದು ಹೇಳುತ್ತ ತಿಮ್ಮರಾಯಪ್ಪ ಕೊಟಡಿಯೊಳಕ್ಕೆ ಬಂದನು.

ಪುನಃ ಸ್ನೇಹಿತರಿಬ್ಬರೂ ಮಾತನಾಡಲಾರಂಭಿಸಿದರು. ಹತ್ತು ಗಂಟೆ ಹೊಡೆಯಿತು. ಹೊತ್ತಾಯಿತೆಂದು ರಂಗಣ್ಣ ಎದ್ದನು. ತಿಮ್ಮರಾಯಪ್ಪ ಜೊತೆಯಲ್ಲಿ ಎದ್ದು, ' ಸರಿ, ಹೊರಡು, ಬೇಗನೆಯೆ ಹೋಗಿ ಕೆಲಸಕ್ಕೆ ಸೇರಿಕೊ, ನಾನು ಹೇಳಿದ ಮಾತುಗಳನ್ನು ಮಾತ್ರ ಮರೆಯ