ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ಸಸ್ ಪೆನ್ ಶನ್

೨೫೫

ಭಕ್ತಾದಿಗಳಿಗೂ ಪೂಜಾರಿಗಳಿಗೂ ಆ ಸಮಾಚಾರ ಮುಟ್ಟಿತು; ಅಮಲ್ದಾರರ ಕಚೇರಿ ಮತ್ತು ಕೋರ್ಟುಗಳ ಹತ್ತಿರ ಸೇರಿದ್ದ ಜನರಿಗೆಲ್ಲ ಆ ಸಮಾಚಾರ ಮುಟ್ಟಿತು. ಜನರು ವಿಧವಿಧವಾಗಿ ಆಡಿಕೊಳ್ಳುತ್ತಿದ್ದರು. ದಿಣ್ಣೆಗಳ ಮೇಲೆ, ಕಟ್ಟೆಗಳ ಮೇಲೆ ಹೆಂಗಸರೂ ಗಂಡಸರೂ ನಿಂತುಕೊಂಡು ಆ ಮೆರವಣಿಗೆಯನ್ನು ನೋಡುತ್ತಿದ್ದರು. ಇನ್ ಸ್ಪೆಕ್ಟರ ಮನೆಯ ಹತ್ತಿರಕ್ಕೆ ಚೆನ್ನಪ್ಪನೂ ಉಗ್ರಪ್ಪನೂ ಬಂದರು. ರಂಗಣ್ಣ ಆ ಜನವನ್ನೂ, ಆ ಇಬ್ಬರನ್ನೂ ಕಿಟಕಿಯ ಮೂಲಕ ನೋಡಿದನು. ಹೊರಕ್ಕೆ ಬಂದು, ಮನೆಯ ಹತ್ತಿರ ನಾನು ಯಾರಿಗೂ ಭೇಟಿ ಕೊಡುವುದಿಲ್ಲ; ಕಚೇರಿಗೆ ಬಂದು ಅಹವಾಲನ್ನು ಹೇಳಿಕೊಳ್ಳಬಹುದು ; ಈಗ ಇಲ್ಲಿ ನಿಲ್ಲದೆ ಹೊರಟು ಹೊಗಿ ” ಎಂದು ಹೇಳಿದನು.

'ಸ್ವಾಮಿ ? ಒಂದು ನಿಮಿಷ, ಒಂದೇ ನಿಮಿಷ ನಾನು ಹೇಳುವುದನ್ನು ಕೇಳಿ ' ಎಂದು ಚೆನ್ನಪ್ಪನು ಹೇಳಿದನು,

'ಇಲ್ಲಿ ಆಗುವುದಿಲ್ಲ ಚೆನ್ನಪ್ಪ ನವರೇ ? ಕಚೇರಿಯ ಹತ್ತಿರ ದಯವಿಟ್ಟು ಬನ್ನಿ, ನೀವು ಹೇಳುವುದನ್ನೆಲ್ಲ ನಾನು ಸಾವಧಾನವಾಗಿ ಕೇಳುತ್ತೇನೆ' ಎಂದು ಉತ್ತರ ಕೊಟ್ಟು ರಂಗಣ್ಣನು ಹಿಂದಿರುಗಿದನು. ಎತ್ತ ಕಡೆಯಿಂದಲೋ ಇಬ್ಬರು ಕಾನ್‌ಸ್ಟೆಬಲ್ಲುಗಳು ಮುಂದೆ ಬಂದು, ಇನ್ ಸ್ಪೆಕ್ಟರ್ ಸಾಹೇಬರು ಹೇಳಿದಂತೆ ಮಾಡಿ, ಇಲ್ಲಿ ನಿಂತು ಕೊಳ್ಳಬೇಡಿ, ಹೋಗಿ ” ಎಂದು ಹೇಳಿ ಎದುರಿಗೆ ನಿಂತುಕೊಂಡರು, ಚೆನ್ನಪ್ಪನೂ ಉಗ್ರಪ್ಪನೂ ಬಹಳ ಅಪಮಾನ ಪಟ್ಟು ಕೊಂಡು ಹಿಂದಿರುಗಬೇಕಾಯಿತು. ಜನ ಸಂದಣಿ ಕ್ರಮಕ್ರಮವಾಗಿ ಕರಗಿ ಹೋಯಿತು

ಚೆನ್ನಪ್ಪನೂ ಉಗ್ರಪ್ಪನೂ ಹಿಂದಿರುಗಿ ಬರುತ್ತ ತಂತಮ್ಮಲ್ಲಿ ಆಲೋಚನೆ ಮಾಡತೊಡಗಿದರು. ಉಗ್ರಪ್ಪನು, ' ಈ ಇನ್ಸ್ಪೆಕ್ಟರಿಗೆ ಸಸ್ಪೆಂಡ್ ಮಾಡುವ ಅಧಿಕಾರವೇ ಇಲ್ಲ, ಅದು ಹೇಗೆ ಮಾಡಿದರು ? ಸಾಹೇಬರನ್ನು ಕಂಡು ಬರೋಣ, ನಡೆ. ಈ ಇನ್ ಸ್ಪೆಕ್ಟರ ಆರ್ಡರ್ ರದ್ದು ಮಾಡಿಸಿ ಆಮೇಲೆ ಮುಯ್ಯಿ ತೀರಿಸಿಕೊಳ್ಳೋಣ ” ಎಂದು ಹೇಳಿದನು. ಚೆನ್ನಪ್ಪನಿಗೆ ಆದು ಯುಕ್ತವಾಗಿ ತೋರಿತು. ಸಾಹೇಬರ ಬಳಿ ಇನ್ಸ್ಪೆಕ್ಟರ ಮೇಲೆ ಚಾಡಿ ಹೇಳಿ ಅವರ ಮನಸ್ಸನ್ನು ಕೆಡಿಸುವುದಕ್ಕೂ