ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ಸಸ್ ಪೆನ್ ಶನ್

೨೫೭

'ನಾವು ಅಪೀಲು ಮಾಡಿಕೊಳ್ಳಬಾರದೇ ಸ್ವಾಮಿ ?' ಎಂದು ಉಗ್ರಪ್ಪ ಕೇಳಿದನು.

'ಅಗತ್ಯವಾಗಿ ಅಪೀಲು ಮಾಡಿಕೊಳ್ಳಿ. ಅರ್ಜಿಯನ್ನು ಕೊಡಿ ಎಂದು ಹೇಳಿದೆನಲ್ಲ! ಅದನ್ನು ಇನ್ ಸ್ಪೆಕ್ಟರಿಗೆ ಕಳಿಸಿ ವಿವರಗಳನ್ನು ಕೇಳುತ್ತೇನೆ. ಅವರು ಮಾಡಿರುವುದು ನ್ಯಾಯವಾಗಿದ್ದರೆ ದಂಡನೆ ಸ್ಥಿರಪಡುತ್ತದೆ.”

'ಇನ್ ಸ್ಪೆಕ್ಟರಿಗೆ ನಮ್ಮ ಅರ್ಜಿಯನ್ನು ಕಳಿಸದೆ ನೀವೇ ವರದಿಯನ್ನು ತರಿಸಿಕೊಳ್ಳಲಾಗುವುದಿಲ್ಲವೇ ಸ್ವಾಮಿ ?”

'ಕೈಯಲ್ಲಿ ಕಾಗದವಿಲ್ಲದೆ ನಾನೇನನ್ನೂ ಮಾಡುವುದಿಲ್ಲ,

'ಒಳ್ಳೆಯದು ಸ್ವಾಮಿ | ಅರ್ಜಿಯನ್ನು ಕೊಟ್ಟು ಹೋಗುತ್ತೇನೆ' ಎಂದು ಹೇಳಿ ಉಗ್ರಪ್ಪ ನು ಒಂದನ್ನು ಬರೆದು ಸಾಹೇಬರ ಕೈಗೆ ಕೊಟ್ಟನು. ತರುವಾಯ ಚೆನ್ನಪ್ಪನೂ ಉಗ್ರಪ್ಪ ನೂ ಸಾಹೇಬರ ಕೊಟಡಿಯಿಂದ ಹೊರಬಿದ್ದ ರು.

ಎರಡು ಮೂರು ದಿನಗಳೊಳಗಾಗಿ ರೇ೦ಜಿನ ಮೂಲೆಮೂಲೆಗಳಲ್ಲಿ ಉಗ್ರಪ್ಪನ ಸಸ್ಪೆಂಡು ವರ್ತಮಾನ ಡಂಗುರವಾಗಿ ಹೋಯಿತು. ಕರಿಯಪ್ಪ ಮತ್ತು ಕಲ್ಲೇಗೌಡರ ಕಡೆಯವರಾಗಿ ಸ್ವಲ್ಪ ತುಂಟಾಟ ಮಾಡುತಿದ್ದ ಮೂರು ನಾಲ್ಕು ಜನ ಉಪಾಧ್ಯಾಯರು ಪಾತಾಳಕ್ಕೆ ಇಳಿದು ಹೋದರು. ಉಳಿದ ಸಾಮಾನ್ಯ ಉಪಾಧ್ಯಾಯರಲ್ಲಿ ಹಲವರು ಆ ದಂಡನೆಯನ್ನು ಮೆಚ್ಚಿಕೊಂಡು, “ಭಾರಿ ಹುಲಿಯ ಷಿಕಾರಿ ಮಾಡಿ ಬಿಟ್ಟರು ಇನ್ ಸ್ಪೆಕ್ಟರು!' ಎಂದು ಹೊಗಳುತ್ತಿದ್ದರು. ಆದರೆ ಅವರೂ ಸ್ವಲ್ಪ ಭಯಗ್ರಸ್ತ ರಾದರು. ಭೀರುಗಳಾಗಿದ್ದ ಉಪಾಧ್ಯಾಯರಂತೂ ತಲ್ಲಣಿಸಿಹೋದರು. ಒಟ್ಟಿನಲ್ಲಿ ಇನ್ಸ್ಪೆಕ್ಟರನ್ನು ಕಂಡರೆ ಹಿಂದೆ ಇದ್ದ ವಿಶ್ವಾಸ ಮತ್ತು ಸಲಿಗೆಗಳು ಗೌರವ ಮತ್ತು ಭಯಗಳಿಗೆ ಪರಿವರ್ತನವಾದುವು. ವಿವರಗಳನ್ನು ತಿಳಿದು ಕೊಳ್ಳುವುದಕ್ಕಾಗಿ ಜನಾರ್ದನ ಪುರಕ್ಕೆ ಕೆಲವರು ಉಪಾಧ್ಯಾಯರು ಬಂದು ಹೋದರು; ಆದರೆ ಇನ್ ಸ್ಪೆಕ್ಟರಿಗೆ ಕಾಣಿಸಿ ಕೊಳ್ಳಲಿಲ್ಲ.

ನಡೆದ ಸಂಗತಿಯನ್ನು ತಿಳಿದು ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನ ಪುರಕ್ಕೆ ಆಗಮಿಸಿ ಚೆನ್ನಪ್ಪನ ಮನೆಯಲ್ಲಿ ಸಭೆ ಸೇರಿದ್ದರು.

17