ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೮

ರಂಗಣ್ಣನ ಕನಸಿನ ದಿನಗಳು

ಅತ್ತ ಕಡೆ ಗಂಗೇಗೌಡರು, ದೊಡ್ಡ ಬೋರೇಗೌಡರು, ಮತ್ತು ಬೊಮ್ಮನಹಳ್ಳಿ, ಗರುಡನ ಹಳ್ಳಿ, ಭ ರಮಂಗಲ, ಕೆಂಪಾಪುರ, ಗುಂಡೇನಹಳ್ಳಿ ಮೊದಲಾದ ಕಡೆಗಳಿಂದ ಚೇರ್ಮನ್ನರುಗಳು ಜನಾರ್ದನಪುರಕ್ಕೆ ಬಂದರು. ಹೀಗೆ ಎಂದೂ ಕಾಣದ ಮುಖಂಡರುಗಳ ಆಗಮನ ಸಮಾರಂಭಗಳು ಜನಾರ್ದನಪುರದ ಜನರನ್ನು ಆಕರ್ಷಿಸಿದುವು. ಬೆಂಗಳೂರಿ೦ದ ತಿಮ್ಮರಾಯಪ್ಪ ನು ಸಿದ್ದಪ್ಪನನ್ನು ಜೊತೆಗೆ ಕರೆದುಕೊಂಡು ರೈಲಿನಲ್ಲಿ ಬಂದಿಳಿದನು ! ಒಬ್ಬ ಮೇಷ್ಟ್ರ ಸಸ್ಪೆನ್ಷನ್ನಿನ ಪ್ರಕರಣದಲ್ಲಿ. ಮದುವೆಗೆ ಬರುವ ಬಂಧು ಬಳಗದಂತೆ ಇಷ್ಟಮಿತ್ರರು ಬಂದಿಳಿಯುತ್ತಿದ್ದರು ! ಯಾವ ಬೀದಿಯಲ್ಲಿ ನೋಡಲಿ, ಹೊರಗಿಂದ ಬಂದ ಮುಖಂಡರಲ್ಲಿ ಇಬ್ಬರು ಮೂವರು ಜನರ ಕಣ್ಣಿಗೆ ಬೀಳುತ್ತಲೇ ಇದ್ದರು ! ಈ ಸಂಭ್ರಮಗಳ ಜೊತೆಗೆ ಪ್ರೈಮರಿ ಸ್ಕೂಲಿನ ಮುಂದುಗಡೆಯ ಚೌಕದಲ್ಲಿ, ಸ್ಕೂಲ್ ಇನ್ಸ್ಪೆಕ್ಟರವರ ಕಚೇರಿಯ ಮುಂಭಾಗದಲ್ಲಿ, ರಂಗಣ್ಣನ ಮನೆಯ ಎದುರು ಜಗಲಿಯ ಮೇಲೆ ಹಿಂದೆ ಎಂದೂ ಕಾಣದಿದ್ದ ಕಾನ್ ಸ್ಟೇಬಲ್ಲುಗಳು ! ಗಳಿಗೆ ಗಳಿಗೆಗೂ ಕಬ್ಬೇಗೌಡನಿಗೂ ಕರಿಯಪ್ಪನಿಗೂ ವರ್ತಮಾನವನ್ನು ತಂದು ಹೇಳುತ್ತಿದ್ದ ಅವರ ಗುಪ್ತಚಾರರ ಓಡಾಟ ! ಹಲವು ಹಳ್ಳಿಗಳಿಂದ ಪಂಚಾಯತಿ ಚೇರ್ಮನ್ನರು ಮೊದಲಾದವರು ಇಸ್ ಸ್ಪೆಕ್ಟರ ಮನೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಹೊರಟುಬಂದರೆಂಬ ವರ್ತಮಾನ ಕೊಟ್ಟವನೊಬ್ಬ ! ಬೆಂಗಳೂರಿಂದ ಯಾರೋ ಇಬ್ಬರು ರೈಲಿಳಿದು ಇನ್ಸ್ಪೆಕ್ಟರ ಮನೆಗೆ ಹೋದರೆಂದು ವರ್ತಮಾನ ತಂದವನು ಮತ್ತೊಬ್ಬ ! ಆವಲಹಳ್ಳಿಯ ದೊಡ್ಡ ಬೋರೇಗೌಡರು ಇನ್ ಸ್ಪೆಕ್ಟರ ಮನೆಯಲ್ಲಿದ್ದಾರೆಂದು ವರ್ತಮಾನ ತಂದವನು ಮಗದೊಬ್ಬ! ರಂಗನಾಥಪುರದ ಗಂಗೇಗೌಡರೂ ಸಹ ಅಲ್ಲಿಗೆ ಹೋದರೆಂದು ಹೇಳುತ್ತಿದ್ದವನು ಒಬ್ಬ ! ಕಲ್ಲೇಗೌಡನೂ ಕರಿಯಪ್ಪನೂ ರುಜು ಮಾಡಿದ ಟೆಲಿಗ್ರಾಮುಗಳನ್ನು ದಿವಾನರಿಗೂ ಮಹಾರಾಜರಿಗೂ ರವಾನಿಸಿ ಹಿಂದಿರುಗಿದ ಬಂಟನೊಬ್ಬ ! ಚೆನ್ನಪ್ಪನ ಮನೆಯಲ್ಲಿ ಸಭೆ ವಿದ್ಯುದಾವೇಗಭರಿತವಾಗಿತ್ತು ! ಮಧ್ಯೆ ಮಧ್ಯೆ ಸ್ಫೋಟಗಳಾಗುತ್ತಿದ್ದುವು !