ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ಸಸ್ ಪೆನ್ ಶನ್

೨೫೯

ಇತ್ತ ರಂಗಣ್ಣನ ಮನೆಗೆ ಸ೦ಚಾಯತಿ ಚೇರ್ಮನ್ನರುಗಳು ಹಲವರು ಬಂದು, ' ತಾವು ಮಾಡಿದ್ದು ಭೇಷಾಯಿತು ಸ್ವಾಮಿ ! ತುಂಟರನ್ನ ಮಟ್ಟಾ, ಹಾಕಬೇಕು. ನಾವೆಲ್ಲ ತಮ್ಮ ಬೆಂಬಲಕ್ಕಿದ್ದೇವೆ. ಈ ಊರಲ್ಲೇ ಇನ್ನೂ ಒಂದು ವಾರ ನಾವುಗಳು ಇದ್ದು ತಮಗೆ ಧೈರ್ಯ ಕೊಡುತ್ತೇವೆ? ಎಂದು ಮುಂತಾಗಿ ಭರವಸೆಗಳನ್ನು ನೀಡಿದರು. ಅವರ ಭರವಸೆಗಳಿಗೆ ಕೃತಜ್ಞತೆಯನ್ನು ಯಥಾಶಕ್ತಿ ಅವರಿಗೆ ಕಾಫಿ ತಿಂಡಿಗಳ ಉಪಚಾರಮಾಡಿ ರಂಗಣ್ಣ ಕಳಿಸಿಕೊಟ್ಟನು. ಬಳಿಕ ತಿಮ್ಮರಾಯಪ್ಪ ಸಂಗಡಿಗನೊಬ್ಬನೊಡನೆ ಮತ್ತು ಹಾಸಿಗೆಗಳನ್ನು ಹೊತ್ತುಕೊಂಡು ಬಂದ ಕೂಲಿಯವನೊಡನೆ, ಗೇಟು ತೆಗೆದು ಒಳಕ್ಕೆ ಬರುತ್ತಿದ್ದುದು ರಂಗಣ್ಣನ ದೃಷ್ಟಿಗೆ ಬಿತ್ತು. ಒಡನೆಯೆ ಸರಸರನೆ ಹೋಗಿ, ' ಇದೇನು ತಿಮ್ಮರಾಯಪ್ಪ ! ಹೇಳದೇ ಕೇಳದೇ ಏಕದಂ ಬಂದಿಳಿದು ಬಿಟ್ಟಿದ್ದೀಯೆ ? ಇವರು ಯಾರು ? ಕಾಗದ ಬರೆದಿದ್ದರೆ ನಾನೇ ಸ್ಟೇಷನ್ನಿಗೆ ಬರುತಿದ್ದೆನಲ್ಲ ! ನನ್ನ ಮನೆ ಹೇಗೆ ಗೊತ್ತಾಯಿತು ? ಎಂದು ಬಹಳ ಸಂಭ್ರಮದಿಂದ ಕೇಳಿದನು.

'ಈತನೇ ಸಿದ್ದಪ್ಪ ! ಇವರೇ ನನ್ನ ಸ್ನೇಹಿತರು ರಂಗಣ್ಣ !” ಎಂದು ತಿಮ್ಮರಾಯಪ್ಪ ಪರಸ್ಪರ ಪರಿಚಯ ಮಾಡಿಕೊಟ್ಟನು ರಂಗಣ್ಣನು ಸಿದ್ದಪ್ಪನವರ ಕೈ ಕುಲುಕಿ, ' ಬಹಳ ಸಂತೋಷ ನೀವು ಬಂದದ್ದು ' ಎಂದು ಉಪಚಾರೋಕ್ತಿಯನ್ನಾಡಿ ಇಬ್ಬರನ್ನೂ ಒಳಕ್ಕೆ ಕರೆದುಕೊಂಡು ಹೋದನು. ತನ್ನ ಕೊಟಡಿಯಲ್ಲಿ ಅವರಿಗೆಲ್ಲ ಸ್ಥಳ ಮಾಡಿಕೊಟ್ಟನು, ಕೂಲಿಯವನಿಗೆ ದುಡ್ಡು ಕೊಟ್ಟು ಕಳಿಸಿದನಂತರ, ' ತಿಮ್ಮರಾಯಪ್ಪ ! ಈ ದಿನ ನನಗೆ ಆಗಿರುವ ಸಂತೋಷವನ್ನು ಮಾತಿನಲ್ಲಿ ವರ್ಣಿಸಲಾರೆ' ಎಂದನು.

'ನೋಡು ರಂಗಣ್ಣ! ನೀನು ಆ ದಿನ ಸಾಯಂಕಾಲ ನನ್ನನ್ನು ಬಿಟ್ಟು ಹೋದಮೇಲೆ ರಾತ್ರಿಯಲ್ಲಿ ನಿನ್ನ ಯೋಚನೆಯೇ ಯೋಚನೆ! ಕಣ್ಣು ಮುಚ್ಚಿದ್ದರೆ ಶಿವನಾಣೆ ! ಈ ಎರಡು ಮೂರು ದಿನ ನನ್ನ ಪೇಚಾಟ ವನ್ನು ವರ್ಣಿಸಲಾರೆ ! ನಿನ್ನ ಕಾಗದ ಕೈಸೇರಿತು. ಒಡನೆಯೇ ಸಿದ್ದಪ್ಪನಲ್ಲಿಗೆ ಹೋಗಿ,- ಹೊರಡು, ಈ ಕ್ಷಣ ಇದ್ದಂತೆಯೇ ಹೂರಡು, ಮಾತುಗೀತು ಆಮೇಲೆ- ಎಂದು ಒತ್ತಾಯಮಾಡಿ ಹೊರಡಿಸಿಕೊಂಡು ಬಂದು