ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ಸಸ್ ಪೆನ್ ಶನ್

೨೬೧

'ನಮ್ಮ ಇನ್ ಸ್ಪೆಕ್ಟರು ಇದ್ದ ಕಡೆ ತಿಂಡಿ ಸಭೆ ಇದ್ದೆ ಇರುತ್ತೆ !? ಎಂದು ಗಂಗೇಗೌಡರು ಹೇಳಿದರು.

ಆ ಮುಖಂಡರು ಸಿದ್ದಪ್ಪನವರಿಗೆ ಅಪರಿಚಿತರೇನೂ ಅಲ್ಲ. ರಂಗಣ್ಣನೇನೋ ಎಲ್ಲರ ಪರಿಚಯಗಳನ್ನೂ ಪರಸ್ಪರವಾಗಿ ಮಾಡಿಕೊಟ್ಟನು. ಆಮೇಲೆ, 'ಇಂಥ ಮಿತ್ರಗೋಷ್ಠಿ ನನ್ನ ಮನೆಯಲ್ಲಿ ಸೇರುವುದು ಅಪರೂಪ. ಈ ದಿನ ಬೆಂಗಳೂರಿಂದ ಸ್ನೇಹಿತರು ಬಂದಿದ್ದಾರೆ. ಬೋರೇಗೌಡರೂ ಗಂಗೇಗೌಡರೂ ಇಲ್ಲಿಯೇ ಊಟಕ್ಕೆ ನಿಲ್ಲಬೇಕು? ಎಂದು ಹೇಳಿದನು, ಅವರು 'ಆಗಲಿ ಸ್ವಾಮಿ !' ಎಂದು ಒಪ್ಪಿಕೊಂಡರು. ಉಪಾಹಾರ ಮಾಡುತ್ತ ರಂಗಣ್ಣ ಎಲ್ಲ ವಿಷಯಗಳನ್ನೂ ವಿವರವಾಗಿ ತಿಳಿಸಿದನು. ಆ ಮಾತುಗಳು ಮುಗಿದಮೇಲೆ ಸಿದ್ದಪ್ಪ ಎದ್ದು , “ತಿಮ್ಮರಾಯಪ್ಪ ! ನೀನು ಇಲ್ಲೇ ಇರು. ನಾನು ಆ ಕಲ್ಲೇಗೌಡನನ್ನೂ ಕರಿಯಪ್ಪನನ್ನೂ ಕಂಡು ಬರುತ್ತೇನೆ. ನಮ್ಮ ಒಕ್ಕಲಿಗ ಜನಾಂಗಕ್ಕೇನೆ ಕೆಟ್ಟ ಹೆಸರು ತಂದುಬಿಟ್ಟರು ಆ ನೀಚರು!' ಎಂದು ಹೇಳಿ ಹೊರಬಿದ್ದನು.

ದಾರಿಯಲ್ಲಿ ಹೋಗುತ್ತಿದ್ದಾಗ ಚೆನ್ನಪ್ಪನ ಮನೆಯಲ್ಲಿ ಸಭೆ ಮುಗಿಸಿಕೊಂಡು ಆ ಮುಖಂಡರು ಪೇಟೆಯ ಕಡೆಗೆ ಹೊರಟಿದ್ದರು. ಅವರ ಜೊತೆಯಲ್ಲಿ ಚೆನ್ನಪ್ಪನೂ ಉಗ್ರಪ್ಪನೂ ಇದ್ದರು. ದೂರದಿಂದಲೇ ಕರಿಯಪ್ಪ ಸಿದ್ದಪ್ಪನನ್ನು ನೋಡಿ ಗುರುತಿಸಿ, ಕಲ್ಲೇಗೌಡನ ಕಡೆಗೆ ತಿರುಗಿಕೊಂಡು, “ನೋಡಿದೆಯಾ ? ಸಿದ್ದಪ್ಪ ಬಂದಿದ್ದಾನೆ! ಬೆಂಗಳೂರಿಂದ ಬಂದ ಇಬ್ಬರಲ್ಲಿ ಇವನೊಬ್ಬನೆಂದು ಕಾಣುತ್ತದೆ ! ಇನ್ನೊಬ್ಬನು ಯಾವನೋ ? ಇಸ್ಕೂಲ್ ಇನ್ ಸ್ಪೆಕ್ಟರ್ ಆದರೂ ಕೂಡ ಬಹಳ ಪ್ರಚಂಡರಾಗಿದ್ದಾರಲ್ಲ! ಭಾರಿ ಭಾರಿ ಮುಖಂಡರು ಅವರ ಮನೆ ಬಾಗಿಲಿಗೆ ಹೋಗಿ ಸಲಾಮು ಹಾಕುತ್ತಾರಲ್ಲ !' ಎಂದು ಬೆರಗಾಗಿ ಹೇಳಿದನು.

'ಅವರ ಮನೆಗೆ ಯಾರು ಬಂದರೋ ! ಇವನು ಯಾರಲ್ಲಿಗೆ ಬಂದನೋ ! ಇಬ್ಬರಿಗೂ ನೀನೇಕೆ ಗಂಟು ಹಾಕುತ್ತೀಯ? ಅಂತೂ ಈ ಸಂದರ್ಭದಲ್ಲಿ ಇವನು ಜನಾರ್ದನ ಪುರದಲ್ಲಿರುವುದು ಆಶ್ಚರ್ಯವೇ ಸರಿ.'

ಸಿದ್ದಪ್ಪನೂ ಆ ಮುಖಂಡರನ್ನು ದೂರದಿಂದ ನೋಡಿ, 'ಇಲ್ಲಿಯೇ ಸಿಕ್ಕಿದರು, ಒಳ್ಳೆಯದಾಯಿತು' ಎಂದುಕೊಂಡನು. ಒಬ್ಬರನ್ನೊಬ್ಬರು