ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೨

ರಂಗಣ್ಣನ ಕನಸಿನ ದಿನಗಳು

ಸಮೀಪಿಸಿದ ಮೇಲೆ, 'ಏನು ಸಿದ್ದಪ್ಪ ! ಆರೋಗ್ಯವಾಗಿದ್ದೀಯಾ ? ಏನಿದು ಅಪರೂಪವಾಗಿ ಜನಾರ್ದನಪುರಕ್ಕೆ ಭೇಟಿ?” ಎಂದು ಕಲ್ಲೇಗೌಡ ಕೇಳಿದನು.

'ಕೆಲಸವಿತ್ತಪ್ಪ ! ಬಂದಿದ್ದೇನೆ. ಬಂದ ಮೇಲೆ ನೀವೂ ಈ ಊರಿಗೆ ಬಂದಿದ್ದೀರಿ ಎಂದು ಗೊತ್ತಾಯಿತು. ಭೇಟಿ ಮಾಡೋಣ ಎಂದು ಹೊರಟುಬರುತ್ತಿದ್ದೆ.'

'ಇಲ್ಲಿ ಎಲ್ಲಿ ಇಳಿದುಕೊಂಡಿದ್ದೀಯೆ ?'

'ಇನ್‌ಸ್ಪೆಕ್ಟರ್ ರಂಗಣ್ಣನವರ ಮನೆಯಲ್ಲಿ. ಅವರು ನನಗೆ ತಿಳಿದವರು ! ಬೇಕಾದವರು !'

ಕಲ್ಲೇಗೌಡನೂ ಕರಿಯಪ್ಪನೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ತಮಗೆ ಎದುರು ಕಕ್ಷಿಯಾಗಿ ಸಿದ್ದಪ್ಪ ! ದಿವಾನರ ಹತ್ತಿರ ಸಲಿಗೆಯಿಂದ ಓಡಾಡುವ, ಮುಖಂಡರಲ್ಲಿ ಹೆಸರು ವಾಸಿಯಾದ, ನ್ಯಾಯ ವಿಧಾಯಕ ಸಭೆಯ ಸದಸ್ಯನಾದ ಸಿದ್ಧಪ್ಪ ! ಇಬ್ಬರ ಮುಖಗಳೂ .ಸ್ವಲ್ಪ ಕಳೆಗುಂದಿದುವು. 'ನೀನು ಬಂದದ್ದು ಒಳ್ಳೆಯದೇ ಆಯಿತು. ಬಾ ! ಚೆನ್ನಪ್ಪನ ಮನೆಗೆ ಹೋಗೋಣ. ಬೀದಿಯಲ್ಲೇನು ಮಾತು ! ಚೆನ್ನಪ್ಪನ ಮನೆಯಲ್ಲಿ ಊಟ ಮಾಡುವಿಯಂತೆ.

'ಊಟಕ್ಕೆ ನಾನು ಇನ್‌ಸ್ಪೆಕ್ಟರ ಮನೆಗೇನೆ ಹೋಗಬೇಕು. ಅಲ್ಲಿ ಅವಲಹಳ್ಳಿ ಯ ಗೌಡರು, ರಂಗನಾಥಪುರದ ಗೌಡರು ಇದ್ದಾರೆ !'

'ಎಲ್ಲರೂ ಸೇರಿ ಮೀಟಿಂಗ್ ನಡೆಸುತ್ತಿದ್ದೀರೇನೋ ! ಒಕ್ಕಲಿಗ ಮೇಷ್ಟರುಗಳನ್ನು ಸಸ್ಪೆಂಡ್ ಮಾಡಿಸಿ, ನೀವುಗಳು- ಒಕ್ಕಲಿಗ ಮುಖಂಡರು-ಆ ಇನ್ ಸ್ಪೆಕ್ಟರ ಮನೆಯಲ್ಲಿ ಔತಣದ ಭೋಜನ ಮಾಡುತ್ತೀರೋ ಸಂತೋಷದಿಂದ ನಲಿಯುತ್ತಿರೋ !'

'ಕಲ್ಲೇಗೌಡ ! ನಿನಗೆ ಈ ಕೋಮುವಾರು ಭಾವನೆ ಬಿಟ್ಟು ಬೇರೆ ಸದ್ಭಾವನೆ ಏನೂ ಇಲ್ಲವೇ ? ಈಗ ರೇಂಜಿನಲ್ಲಿ ನೂರಾರು ಜನ ಒಕ್ಕಲಿಗ ಮೇಷ್ಟರುಗಳಿದ್ದಾರಲ್ಲ. ಎಷ್ಟು ಜನಕ್ಕೆ ಸಸ್ಪೆಂಡ್ ಆಗಿದೆ ? ನೂರಾರು ಜನ ಒಕ್ಕಲಿಗರು ಗ್ರಾಮ ಪಂಚಾಯತಿ ಚೇರ್ಮನ್ನರುಗಳಾಗಿದ್ದಾರಲ್ಲ ! ಯಾರು ನಿನ್ನ ಹಾಗೆ ಇನ್‌ಸ್ಪೆಕ್ಟರನ್ನು ದೂರುತ್ತಾರೆ? ಎಲ್ಲರೂ ಅವರನ್ನು