ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ಸಸ್ ಪೆನ್ ಶನ್

೨೬೩

ಪ್ರಶಂಸೆ ಮಾಡುತ್ತಾರಲ್ಲ ! ನೀವಿಬ್ಬರು ಮಾತ್ರ ನಮ್ಮ ಜನಾಂಗಕ್ಕೆ ಕಳಂಕ ತಂದಿದ್ದೀರಿ. ಯಾರ ಬಾಯಲ್ಲಿ ನೋಡಲಿ ನಿಮ್ಮ ನೀಚತನದ ಮಾತೇ ಆಗಿದೆ !'

'ಏನು ಹೆಚ್ಚು ಮಾತನಾಡುತ್ತೀ ಸಿದ್ದಪ್ಪ ನೀನೇನು ನಮ್ಮ ನೀಚತನ ಕಂಡದ್ದು ?

'ಲೇ ಕರಿಯಪ್ಪ ! ಹುಷಾರಾಗಿರು ! ಕಂಡಿದ್ದೀನಿ ನಿಮ್ಮ ಬಂಡವಾಳವನ್ನೆಲ್ಲ ! ಹಿಂದೆ ನೀವಿಬ್ಬರೂ ಸೇರಿಕೊಂಡು ದಿವಾನರಿಗೆ ಔತಣ ಏರ್ಪಾಟುಮಾಡಿ ಹಳ್ಳಿಯವರ ಹತ್ತಿರವೆಲ್ಲ ಚಂದಾ ವಸೂಲುಮಾಡಿ ಅರ್ಧ ಹಣ ಜೇಬಿಗಿಳಿಸಿ, ನಿಮ್ಮ ಕೈಯಿಂದ ಔತಣ ಮಾಡಿಸಿದ ಹಾಗೆ ದಿವಾನರಿಗೆ ಭ್ರಾಂತಿ ಹುಟ್ಟಿಸಿದಿರಲ್ಲ ! ಅದೇನು ನೀಚತನ ಅಲ್ಲವೇ ? ನಿನ್ನ ಅಣ್ಣ ಬಡವ, ಗ್ಯಾಂಗ್ ಕೂಲಿ ಎಂದು ಸುಳ್ಳು ಸರ್ಟಿಫಿಕೇಟು ಬರೆದು, ಆ ಅಣ್ಣನ ಮಗನಿಗೆ ಫೇಲಾದ ಹುಡುಗನಿಗೆ- ಸ್ಟಾಲರ್ ಷಿಪ್ಪು ಕೊಡಿಸಿದೆಯಲ್ಲ ! ಬಡವನಾದ ಒಕ್ಕಲಮಗನಿಗೆ - ಪಾಸಾದವನಿಗೆ - ಸ್ಕಾಲರ್ ಷಿಪ್ ತಪ್ಪಿಸಿದೆಯಲ್ಲ ! ನಾಚಿಕೆಯಿಲ್ಲ ನಿನಗೆ? ಆ ಸೂಳೆ ಮುಂಡೆ ಯಾವಳೋ ಒಬ್ಬಳಿಗೆ ಜನಾರ್ದನಪುರಕ್ಕೆ ಪುನಃ ವರ್ಗ ಮಾಡಿಸಿಕೊಡ ಬೇಕು ಅಂತ ಶಿಫಾರಸ್ ಪತ್ರ ಕೊಟ್ಟಿದ್ದಲ್ಲದೆ ಅವಳನ್ನ ಇನ್ ಸ್ಪೆಕ್ಟರ ಮೇಲೆ ಎತ್ತಿ ಕಟ್ಟಿ ಡೈರೆಕ್ಟರ ಹತ್ತಿರ ಕರೆದು ಕೊಂಡು ಹೋಗಿ ಹಾಡಿ ಹೇಳಿಸಿದೆಯಲ್ಲ ! ಯಾವ ಚಂಡಾಲ ಮಾಡೋ ಕೆಲಸ ಅದು ? ಕಟ್ಟಡವನ್ನು ಸ್ಕೂಲಿಗೆ ಬಾಡಿಗೆಗೆ ತೆಗೆದುಕೊಂಡರೆ ಆ ಶಿಕಸ್ತು ಕಟ್ಟಡವನ್ನು ದುರಸ್ತು ಮಾಡದೆ ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತಾ ಜಬರ್ದಸ್ತಿ ಮಾಡಿ ದಿವಾನರಿಗೆ ಕಾಗದ ಬರೆದನಲ್ಲ ಈ ಕಲ್ಲೇಗೌಡ ! ಪುಂಡ ಮೇಷ್ಟರು ಪೋಕರಿ ಮೇಷ್ಟರುಗಳನ್ನೆಲ್ಲ ಏಜೆಂಟರನ್ನಾಗಿ ಮಾಡಿಕೊಂಡು, ಅವರನ್ನೆಲ್ಲ ಇನ್ ಸ್ಪೆಕ್ಟರಮೇಲೆ ಎತ್ತಿಕಟ್ಟಿ, ಸ್ಕೂಲು ಕೆಲಸಗಳೇ ನಡೆಯದಂತೆ ಬದ್ಮಾಷ್ ಕೆಲಸ ಮಾಡಿದ್ದೀರಲ್ಲ ! ನಮ್ಮ ಜನಾಂಗದ ಮುಖಂಡರು, ದೇಶೋದ್ಧಾರಕರು ಎಂದು ಓಟಿನ ಬೇಟೆಗೆ ಹೊರಡುತ್ತೀರಿ! ಸುಳ್ಳು ಸುಳ್ಳು, ಅರ್ಜಿಗಳನ್ನು ದಿವಾನರಿಗೆ ಬರೆಯುತ್ತೀರಿ ! ದಿನ ಬೆಳಗಾದರೆ ಅವರ ಮನೆ ಬಾಗಿಲು ಕಾಯುತ್ತ ಚಾಡಿಗಳನ್ನು ಹೇಳುತ್ತೀರಿ! ಏನು