ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೪

ರಂಗಣ್ಣನ ಕನಸಿನ ದಿನಗಳು

ನಿಮ್ಮ ಬಾಳು ! ನೀಚತನ ಅಲ್ಲವೇನು ? ಕಷ್ಟ ಪಟ್ಟು ಕೆಲಸ ಮಾಡುತ್ತಿರುವ ಆ ಇನ್ಸ್ಪೆಕ್ಟರಿಗೆ ಬೆಂಬಲಿಗರಾಗಿ ನಿಂತು, ಮಕ್ಕಳಲ್ಲಿ ವಿದ್ಯಾಭಿವೃದ್ಧಿಯುಂಟಾಗುವಂತೆ ಸಹಾಯ ಮತ್ತು ಪ್ರೋತ್ಸಾಹಗಳನ್ನು ಮಾಡುವ ಬದಲು, ಒಂಟಿಯಾಗಿ ಸಿಕ್ಕಾಗ ಅವರನ್ನು ಕಡಿದು ಹಾಕಿಬಿಡೋಣವೆಂದು ಹಂಚಿಕೆ ಮಾಡುತ್ತಿರುವ ಪಾಪಿಗಳು ನೀವು ! ನಿಮ್ಮಲ್ಲಿ ಒಂದು ದೊಡ್ಡ ಗುಣ ಹೇಳಿ.'

ಕಲ್ಲೇಗೌಡನೂ ಕರಿಯಪ್ಪನೂ ಮಾತೇ ಆಡಲಿಲ್ಲ. ಸ್ವಲ್ಪ ಹೊತ್ತಾದ ಸಿದ್ಧಪ್ಪನು,

“ನಾನು ಎಲ್ಲ ವಿಚಾರಗಳನ್ನೂ ಕೌನ್ಸಿಲರಿಗೆ, ದಿವಾನರಿಗೆ ತಿಳಿಸಿದ್ದೇನೆ! ನಾಳೆ ಬೆಂಗಳೂರಿಗೆ ಹೋಗಿ ಅವರನ್ನು ನೀವು ಕಂಡರೆ, ನಿಮಗೆ ತಕ್ಕ ಮರ್ಯಾದೆ ಮಾಡುತ್ತಾರೆ! ನಾಳೆ, ನ್ಯಾಯಯವಿಧಾಯಕ ಸಭೆ ಸೇರಿದಾಗ ನಾನೇ ಸರಕಾರಕ್ಕೆ ನಿಮ್ಮ ವಿಚಾರಗಳಲ್ಲಿ ಪ್ರಶ್ನೆಗಳನ್ನು ಹಾಕಬೇಕೆಂದಿದ್ದೇನೆ.'

'ಸಿದ್ದಪ್ಪ ! ಆ ಕೆಲಸ ಮಾತ್ರ ಮಾಡಬೇಡ !'

ತನ್ನ ಮುಖಂಡರ ದೈನ್ಯಾವಸ್ಥೆಯನ್ನು ಉಗ್ರಪ್ಪ ನೋಡಿದನು. ಅವರ ಬೆಂಬಲ ತನಗಿದೆಯೆಂದು, ಅವರ ಪ್ರೇರಣೆಯಿಂದ ತಾನು ಧೂರ್ತನಾಗಿ ನಡೆದುಕೊಂಡೆನಲ್ಲ ! ಊರಲ್ಲೆಲ್ಲ ಅಪಮಾನ ಪಟ್ಟೆನಲ್ಲ ! ಎಂದು ವ್ಯಸನಪಟ್ಟನು.

'ಸಿದ್ದಪ್ಪ ! ಈಗ ನೀನು ಬಂದಿದ್ದೀಯೆ. ನಿನಗೆ ಇನ್ಸ್ಪೆಕ್ಟರು ಬೇಕಾದವರು, ಅವರಿಗೆ ಹೇಳಿ ಈ ಉಗ್ರಪ್ಪನ ಸಪ್ಪೆ ನ್ಷನ್ ವಜಾ ಮಾಡಿಸು.

'ಈ ಮೇಷ್ಟು ಕ್ಷಮಾಪಣೆ ಕಾಗದವನ್ನು ಬರೆದು ನನ್ನ ಕೈಗೆ ಕೊಡಲಿ ! ನನ್ನೊಡನೆ ಬಂದು ಇನ್ ಸ್ಪೆಕ್ಟರ ಕಾಲಿಗೆ ಬೀಳಲಿ ! ವಜಾ ಮಾಡಿಸುತ್ತೇನೆ. ನೀವೂ ಬನ್ನಿರಿ; ದ್ವೇಷ ಬಿಟ್ಟು ಅವರ ಸ್ನೇಹ ಸಂಪಾದನೆ ಮಾಡಿಕೊಳ್ಳಿ.'