ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ಸಸ್ ಪೆನ್ ಶನ್

೨೬೫

'ನಾನು ಕ್ಷಮಾಪಣೆ ಪತ್ರ ಬರೆದು ಕೊಡುವುದಿಲ್ಲ' ಎಂದು ಉಗ್ರಪ್ಪ ಹೇಳಿಬಿಟ್ಟನು. 'ನಮಗೆ " ಆ ಇನ್ ಸ್ಪೆಕ್ಟರ ಸ್ನೇಹ ಗೀಹ ಬೇಕಾಗಿಲ್ಲ. ಅವರಲ್ಲಿಗೆ ಬರುವುದಿಲ್ಲ' ಎಂದು ಮುಖಂಡರು ಹೇಳಿಬಿಟ್ಟರು.

'ಹಾಗಾದರೆ ಮುಂದಕ್ಕೂ ದ್ವೇಷವನ್ನೇ ಸಾಧಿಸುತ್ತೀರೋ ?'

'ಮುಂದೆ ಏನು ಮಾಡುತ್ತೇವೆಯೋ ಹೇಳಲಾರೆವು ! ಅಂತೂ ಈಗ ನೀನು ನನಗೆ ಎದುರು ಕಕ್ಷಿ ಎಂಬುದನ್ನು ತಿಳಿದುಕೊಂಡಿದ್ದೇವೆ ! ಇನ್‌ಸ್ಪೆಕ್ಟರಿಗೂ ಜನಕಟ್ಟು ಇದೆ ; ಆದ್ದರಿಂದಲೇ ಅವರು ಹೀಗೆ ನಮಗೆ ಸವಾಲ್ ಹಾಕುತ್ತಿದಾರೆ ! ಎಂಬುದನ್ನು ತಿಳಿದು ಕೊಂಡಿದ್ದೇವೆ' ಎಂದು ಕಲ್ಲೇಗೌಡ ಹೇಳಿದನು.

'ತಿಳಿದುಕೊಂಡಿದ್ದರೆ ವಿವೇಕದಿಂದ ನಡೆದುಕೊಳ್ಳಿ' ಎಂದು ಹೇಳಿ ಸಿದ್ದಪ್ಪ ರಂಗಣ್ಣನ ಮನೆಗೆ ಹಿಂದಿರುಗಿದನು.