ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

೨೬೭

ಎಂದು ಬುದ್ಧಿವಾದ ಹೇಳಿದನು. ಸಿದ್ಧಪ್ಪನು ಸಹ ಆದೇ ಅಭಿಪ್ರಾಯಪಟ್ಟು, 'ಜನಾರ್ದನಪುರದಲ್ಲಿ ಇರುವುದು ಯಾವ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಹೇಳಿದನು. ರೈಲು ಬಂತು. ರಂಗಣ್ಣನು, ' ತಿಮ್ಮರಾಯಪ್ಪ ! ನಿನ್ನ ಮತ್ತು ಸಿದ್ದಪ್ಪನವರ ಉಪಕಾರವನ್ನು ನಾನು ಮರೆಯುವ ಹಾಗಿಲ್ಲ' ಎಂದನು. ' ಅಯ್ಯೋ ಶಿವನೇ ! ಏನು ಉಪಕಾರ! ಆ ದಿನ ನಿನಗೆ ಆನಂದಭವನದಲ್ಲಿ ತಿಂಡಿ ಕೊಡಿಸಿ ಇನ್ ಸ್ಪೆಕ್ಟರ್‌ಗಿರಿಯ ಹುಚ್ಚು ಹಿಡಿಸಿ ನಾನು ಮಾಡಿದ ಅಪಕಾರವನ್ನು ನಾನು ಮರೆಯುವ ಹಾಗಿಲ್ಲ !' ಎಂದು ನಗುತ್ತ ತಿಮ್ಮರಾಯಪ್ಪನು ಹೇಳಿದನು. ರಂಗಣ್ಣ ಅವರನ್ನು ಬೀಳ್ಕೊಟ್ಟು ಹಿಂದಿರುಗಿದನು. ದೊಡ್ಡ ಬೋರೆಗೌಡರು ಮತ್ತು ಗಂಗೇ ಗೌಡರು ಹೆಚ್ಚಿಗೆ ಎರಡು ದಿನವಿದ್ದು ಅವರೂ ತಂತಮ್ಮ ಹಳ್ಳಿಗಳಿಗೆ ಹಿಂದಿರುಗಿದರು.

ಜನಾರ್ದನಪುರದ ವಾತಾವರಣ ಎಂದಿನಂತೆ ಶಾಂತ ವಾಯಿತು, ಕಾನ್ ಸ್ಟೇಬಲ್ಲುಗಳ ಕಾವಲು ನಿಂತುಹೋಯಿತು, ಉಗ್ರಪ್ಪನಿಗೆ ಸಸ್ಪೆಂಡ್ ಆದ ವಿಚಾರದಲ್ಲಿ ಜನರ ಆಸಕ್ತಿ ಕಡಮೆಯಾಯಿತು. ಆದರೆ ಖಾಸಗಿ ಉಡುಪಿನ ಕಾನ್ ಸ್ಟೇಬಲ್ಲು ಉಗ್ರಪ್ಪನ ಓಡಾಟವನ್ನು ಗಮನಿಸುವುದು ಮಾತ್ರ ತಪ್ಪಲಿಲ್ಲ ಕ್ರಮಕ್ರಮವಾಗಿ ಉಗ್ರಪ್ಪನ ಓಡಾಟಗಳೂ ಕಡಮೆ ಯಾಗಿ ಜನಾರ್ದನ ಪುರದಲ್ಲಿ ಅವನು ಮುಖ ಹಾಕುವುದು ನಿಲ್ಲುತ್ತ ಬಂತು. ಎರಡು ಮೈಲಿ ದೂರದ ಅವನ ಹಳ್ಳಿಯಾಯಿತು, ಅವನಾಯಿತು, ಮೇಲ್ಪಟ್ಟ ಅಧಿಕಾರಿಗಳ ಬಳಿಗೆ ಅಪೀಲು ಹೋಗಬೇಕೆಂಬ ರೋಷವೂ ಅವನಿಗೆ ಇಳಿದುಹೋಯಿತು. ಯಾರಾದರೂ ಮಾತನಾಡಿಸಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ ! ಜೀವನದಲ್ಲಿಯೆ ಜುಗುಪ್ಪೆಯುಂಟಾದಂತೆ ಕಾಣಿಸುತ್ತಿದ್ದನು ; ಒಂದೆರಡು ಮಾತನ್ನು ಹೇಳಿ ಕಳಿಸಿಬಿಡುತ್ತಿದ್ದನು,

ಮೇಲಿನ ಗಲಾಟೆಗಳ ಪ್ರಕರಣದಲ್ಲಿ ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತ್ಸವ ಮುಂದಕ್ಕೆ ಹಾಕಲ್ಪಟ್ಟಿತ್ತು. ಅದಕ್ಕೆ ಸರಿ ಯಾದ ದಿನ ಗೊತ್ತಾದ ಮೇಲೆ ಆ ಹಳ್ಳಿಯಿಂದ ಕರಿಹೈದ ಕಮಾನು ಕಟ್ಟಿದ ತನ್ನ ಗಾಡಿಯನ್ನು ತಂದನು. ನಾಲ್ಕು ತೆಳುಕೋಲುಗಳನ್ನು ಬಗ್ಗಿಸಿ ಮುಕ್ಕಾಲು ಭಾಗಕ್ಕೆ ಮಾತ್ರ ಎರಡು ಹರಕು ಈಚಲು ಚಾಪೆಗಳನ್ನು