ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೮

ರಂಗಣ್ಣನ ಕನಸಿನ ದಿನಗಳು

ಮೇಲೆ ಕಟ್ಟಿ ಬಿಸಿಲು ತಾಕದಂತೆ ಮರೆಮಾಡಿದ್ದ ಕಮಾನಿನ ಆಭಾಸ! ಆದರೆ ರಂಗಣ್ಣನಿಗೆ ಕರಿಹೈದನ ಭಕ್ತಿ ವಿಶ್ವಾಸಗಳಿಂದ ಅದು ನಕ್ಷತ್ರ ಖಚಿತವಾದ ನೀಲಿ ಪಟ ರಂಜಿತವಾದ ಗಗನದ ಕಮಾನಿನಂತೆ ಸುಂದರ ವಾಗಿಯೂ ಹೃದಯಾಕರ್ಷಕವಾಗಿ ಯ ಕಂಡಿತು. ಕುಳಿತುಕೊಳ್ಳುವು ದಕ್ಕೆ ಮೆತ್ತಗಿರಲೆಂದು ಕರಿಹೈದ ಒಣಹುಲ್ಲನ್ನು ಗಾಡಿಯಲ್ಲಿ ಹಾಕಿಕೊಂಡು ಬಂದಿದ್ದನು. ಗಾಡಿಯ ಜೊತೆಯಲ್ಲಿ ಹಳ್ಳಿಯಿಂದ ಆರು ಜನ ರೈತರು ಕೈ ದೊಣ್ಣೆಗಳನ್ನು ಹಿಡಿದುಕೊಂಡು ಬಂದಿದ್ದರು! ಆ ಗಾಡಿಯನ್ನು ನೋಡಿ ರಂಗಣ್ಣನ ಮಕ್ಕಳು ತಾವು ಕೂಡ ಸರ್ಕೀಟು ಬರುವುದಾಗಿ ಹಟ ಮಾಡಿ ದರು. ರಂಗಣ್ಣನು ತನ್ನ ಹೆಂಡತಿಯನ್ನು ಕರೆದು, ' ನೋಡು ! ಮಕ್ಕಳು ಹಟ ಮಾಡುತ್ತಿದ್ದಾರೆ. ಅವರನ್ನು ಕರೆದುಕೊಂಡು ಹೋಗಬೇಕೆಂದಿದ್ದೇನೆ, ನೀನೊಬ್ಬಳೇ ಇಲ್ಲಿ ಏಕಿರಬೇಕು ? ನೀನೂ ಬಂದರೆ ಒಂದು ದಿನ ಸಂತೋಷವಾಗಿ ಕಾಲ ಕಳೆದು ಕೊಂಡು ಬರಬಹುದು. ಎಂತಿದ್ದರೂ ಗೋಪಾಲ ಮತ್ತು ಶಂಕರಪ್ಪ ಮುಂದಾಗಿ ಹೋಗಿದ್ದಾರೆ. ಅಡಿಗೆ ಮಾಡಿರುತ್ತಾರೆ ? ಎಂದು ಹೇಳಿದನು. ಅವನ ಹೆಂಡತಿ ಒಪ್ಪಿ ಕೊಂಡಳು. ತರುವಾಯ.ಅಲಂಕಾರ ಪ್ರಕರಣಗಳೆಲ್ಲ ಮುಗಿದುವು. ಮಕ್ಕಳು ಹಸಿವು ಎಂದು ಕೇಳಿದರೆ, ಕೈಗಾವಲಿಗಿರಲಿ ಎಂದು ಆಕೆ ತಿಂಡಿ ಪೆಟ್ಟಿಗೆಯನ್ನು ಮಾತ್ರ ತೆಗೆದುಕೊಂಡಳು ; ಕಂಚಿನ ಕೂಜದಲ್ಲಿ ನೀರನ್ನು.ತೆಗೆದುಕೊಂಡಳು. ಗಾಡಿಯಲ್ಲಿ ಮತ್ತೆಯನ್ನೂ, ಮೇಲೆ ಜಮಖಾನವನ್ನೂ, ಬೆನ್ನೊತ್ತಿಗೆಗೆ ದಿಂಬುಗಳನ್ನೂ ಅಣಿ ಮಾಡಿ, ಮನೆಯ ಕಾವಲಿಗೆ ತಕ್ಕ ಏರ್ಪಾಟು ಮಾಡಿ, ಕರಿಹೈದನ ಗಾಡಿಯಲ್ಲಿ ಎಲ್ಲರೂ ಹೊರಟರು.

ನಾಗೇನಹಳ್ಳಿ ಜನಾರ್ದನಪುರಕ್ಕೆ ಆರು ಮೈಲಿ ದೂರದಲ್ಲಿತ್ತು. ಒಂದೆರಡು ಮೈಲಿಗಳ ದೂರ ಹೋಗುವುದರೊಳಗಾಗಿ ಆ ಎತ್ತಿನ ಗಾಡಿಯ ಪ್ರಯಾಣದ ನಾವೀನ್ಯ ಮತ್ತು ಸಂತೋಷ ಕಡಮೆಯಾದುವು. ರಂಗಣ್ಣನ ಹೆಂಡತಿಗೆ ಹಳ್ಳಿಗಾಡಿನ ಒರಟು ರಸ್ತೆಗಳಲ್ಲಿ, ಆ ಒರಟು ಪ್ರಯಾಣ ಮಾಡಿ ಅಭ್ಯಾಸವಿರಲಿಲ್ಲ, ಧಡಕ್ ಭಡಕ್ ಎಂದು ಇತ್ತ ಅತ್ತ ಆಡುತ್ತ, ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖ ತಾಕಿಸುತ್ತ, ಮಧ್ಯೆ ಮಧ್ಯೆ ಎತ್ತಿ ಹಾಕುತ್ತ, ಹೊಟ್ಟೆಯಲ್ಲಿನ ಕರುಳುಗಳನ್ನೆಲ್ಲ ಸ್ಥಳಪಲ್ಲಟ ಮಾಡಿಸುತ್ತ