ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

೨೬೯

ಗಾಡಿ ಮುಂದುವರಿಯುತ್ತಿತ್ತು. 'ನಿಮ್ಮ ಸರ್ಕಿಟು ಏನೇನೂ ಸುಖವಿಲ್ಲ, ಮೈ ಕೈ ನೋವು ಮಾಡಿಕೊಂಡು ಇದೇನು ಸರ್ಕಿಟು” ಎಂದು ರಂಗಣ್ಣನ ಹೆಂಡತಿ ಹೇಳಿದಳು. “ಹೆಂಡತಿ ಮತ್ತು ಮಕ್ಕಳು ಜೊತೆಗೆ ಇದ್ದರೂ ಈ ಸರ್ಕಿಟು ಹೀಗಿದೆಯಲ್ಲ ! ನಾನೊಬ್ಬನೇ ಗಾಡಿಯಲ್ಲಿ ಹೋಗುವಾಗ ನನಗೆಷ್ಟು ಕಷ್ಟವಾಗಬೇಕು. ಹೇಳು. ಶಂಕರಪ್ಪನಿಂದ ಆ ಕಷ್ಟ ಪರಿಹಾರವಾಗುತ್ತಿತ್ತು. ಅವನು ಹಲವರು ಇನ್ಸ್ಪೆಕ್ಟರುಗಭಳೊಡನೆ ತಿರುಗಿದವನು. ಅವರ ಕಥೆಗಳನ್ನೆಲ್ಲ ಹೇಳುತ್ತ-ಅವರ ಸರ್ಕೀಟಿನ ರೀತಿಯೇ ಬೇರೆ ತಮ್ಮ ಸರ್ಕಿಟನ ಸೊಗಸೇ ಬೇರೆ ಸ್ವಾಮಿ -- ಎಂದು ನನ್ನನ್ನು ಪ್ರಶಂಸೆಮಾಡುತ್ತ ಬೇಜಾರು ಕಳೆಯುತ್ತಿದ್ದನು. ಹೀಗೆ ಮಾತನಾಡುತ್ತ ಆಡುತ್ತ ರಂಗಣ್ಣ ತಿಂಡಿಯ ಪೆಟ್ಟಿಗೆಗೆ ಕೈ ಹಾಕಿ, ಮುಚ್ಚಳ ತೆಗೆದನು. ಮಕ್ಕಳು,-ನನಗೆ ಕೋಡಬಳೆ ! ನನಗೆ ಚಕ್ಕುಲಿ! ನನಗೆ ಬೇಸಿನ್ ಲಾಡು !-- ಎಂದು ಕೋಲಾಹಲವೆಬ್ಬಿಸಿದರು.

'ಪೆಟ್ಟಿಗೆಯನ್ನೆಲ್ಲ ಇಲ್ಲೇ ಖಾಲಿ ಮಾಡಿ ಬಿಡುತ್ತೀರಾ ?' ಎಂದು ರಂಗಣ್ಣನ ಹೆಂಡತಿ ಆಕ್ಷೇಪಿಸಿದಳು.

'ತಿಂಡಿ ತಿನ್ನು ತಾ, ಮಾತನಾಡುತ್ತಾ ಪ್ರಯಾಣ ಮಾಡಿದರೆ ಬೇಜಾರು ತೋರುವುದಿಲ್ಲ' ಎಂದು ರಂಗಣ್ಣ ಉತ್ತರ ಕೊಟ್ಟು ಮಕ್ಕಳಿಗೂ ಹೆಂಡತಿಗೂ ತಿಂಡಿ ಹಂಚಿದನು, ಆಮೇಲೆ ಕರಿಹೈದನ ಕಡೆ ನೋಡಿ, ಆ ಭಕ್ತನನ್ನು ಅನುಗ್ರಹಿಸಬೇಕೆಂದು, “ಆ ದಿನ ನೀನು ಎಂಟಾಣೆ ಕೊಟ್ಟರೆ ತೆಗೆದು ಕೊಳ್ಳಲಿಲ್ಲ. ದೇವರು ಮೆಚೊ ದಿಲ್ಲ ಸ್ವಾಮಿ ! ಎಂದು ಹೇಳಿಬಿಟ್ಟೆ. ಇವನ್ನಾದರೂ ತೆಗೆದುಕೋ. ತಿನ್ನು' ಎಂದು ಹೇಳಿ ಅವನ ಕೈಯಲ್ಲಿ ಕೋಡಬಳೆ ಚಕ್ಕುಲಿ ಮತ್ತು ಬೇಸನ್ ಲಾಡುಗಳನ್ನು ಹಾಕಿದನು. ಆದರೆ ಕರಿಹೈದ ಅವುಗಳನ್ನು ತಿನ್ನಲಿಲ್ಲ. ಬಟ್ಟೆಯಲ್ಲಿ ಗಂಟು ಕಟ್ಟಿ ಇಟ್ಟುಕೊಂಡನು! ರಂಗಣ್ಣ ಅದನ್ನು ನೋಡಿ,

'ಅದೇಕೆ ಗಂಟು ಕಟ್ಟಿದೆ ಕರಿಹೈದ ? ನೀನು ತಿನ್ನಬೇಕೆಂದು ನಾನು ಕೊಟ್ಟದ್ದು' ಎಂದನು.

'ಹೌದು ಸೋಮಿ! ತಾವೇನೋ ನಾನು ತಿನ್ನಬೇಕೆಂದು ಕೊಟ್ರಿ.