ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೦

ರಂಗಣ್ಣನ ಕನಸಿನ ದಿನಗಳು

ಮನೇಲಿ ಇಬ್ಬರು ಮಕ್ಕಳಿ! ಇದೇನೋ ನಾಜೋಕ್ ರುಚಿ ಪದಾರ್ತ! ಮಕ್ಕಳು ತಿನ್ನಲಿ ಅಂತ ಗಂಟು ಕಟ್ಟಿ ಮಡಕೊಂಡಿತ್ನಿ !”

'ಚಕ್ರವರ್ತಿಗಿರುವಂತೆಯೇ ಕರಿಹೈದನಿಗೂ ಕರುಳುಂಟಲ್ಲಾ ! ಮಕ್ಕಳ ಮೇಲೆ ಪ್ರೇಮವುಂಟಲ್ಲಾ! ರಂಗಣ್ಣನಿಗೂ ಅವನ ಹೆಂಡತಿಗೂ ಮನಸ್ಸು ಕರಗಿ ಹೋಯಿತು: ಪೆಟ್ಟಿಗೆಯಿಂದ ಮತ್ತಷ್ಟು ತಿಂಡಿಯನ್ನು ತೆಗೆದು ಕೈಗೆ ಕೊಟ್ಟು, 'ಗಂಟು ಕಟ್ಟಿರುವುದು ಮಕ್ಕಳಿಗಿರಲಿ. ಇದನ್ನು ನೀನು ತಿನ್ನು' ಎಂದು ಹೇಳಿದರು. ಕರಿಹೈದ, ಆಗಲಿ ಸೋಮಿ !” ಎಂದು ಬಾಯಲ್ಲಿ ಹೇಳಿ ಒಂದು ಕ್ಷಣ ಹಾಗೆಯೇ ಹಿಡಿದುಕೊಂಡಿದ್ದನು; ತಿನ್ನಲಿಲ್ಲ. ಮತ್ತೆ ಅದನ್ನು ಗಂಟಿನೊಳಗೆ ಸೇರಿಸಿಬಿಟ್ಟನು !

'ಎಲಾ ಕರಿಹೈ ದ ! ಅದೇಕೋ ಇದನ್ನೂ ಕಟ್ಟಿ ಬಿಟ್ಟೆ ? ನೀನು ತಿನ್ನಲಿಲ್ಲ ! ತಿನ್ನು' ಎಂದು ರಂಗಣ್ಣ ಹೇಳಿದನು.

'ಸೋಮಿ ! ಅ೦ಗೇ ಯೋಚ್ನಾ ಮಾಡಿದೆ ! ಮನೇಲಿ ನನ್ನೆಂಡ್ರವಳೆ ! ಅವಳನ್ನ ಬಿಟ್ಟು ತಿನ್ನೊಕೆ ಮನಸ್ಸು ಬರಾಕಿಲ್ಲ ಸೋಮಿ !” ರಂಗಣ್ಣನ ಕಣ್ಣುಗಳು ಹನಿಗೂಡಿ ಮಂಜಾದುವು ! ರಂಗಣ್ಣನ ಹೆಂಡತಿ ಗಂಡನ ಕೈ ಹಿಡಿದೆಳೆದು, 'ನೋಡಿದಿರಾ ! ನಿಮಗೆ ನನ್ನ ಮೇಲೆ ಬಹಳ ಪ್ರೀತಿ ಎಂದು ಹೇಳುತ್ತಾ ಇರುತ್ತೀರಿ! ಕರಿಹೈದ ತನ್ನ ಹೆಂಡತಿಯನ್ನು ಪ್ರೀತಿಸುವಂತೆ ನೀವು ಪ್ರೀತಿಸುವುದುಂಟೇ ?' ಎಂದು ನಗುತ್ತಾ ಕೇಳಿದಳು. ರಂಗಣ್ಣನು,

'ಕರಿಹೈದ ! ಮತ್ತೆ ಯಾರು ಇದ್ದಾರೆ ನಿನ್ನ ಮನೆಯಲ್ಲಿ ?” ಎಂದು ಕೇಳಿದನು.

'ಮತ್ತೆ ಯಾರೂ ಇಲ್ಲ ಸೋಮಿ !'

'ಹಾಗಾದರೆ, ನಿನ್ನ ಬಟ್ಟೆ ಹಿಡಿ' ಎಂದು ಹೇಳಿ ರಂಗಣ್ಣ ಇನ್ನು ನಾಲ್ಕು ಚಕ್ಕುಲಿ, ಕೋಡಬಳಿ ಮತ್ತು ಲಾಡುಗಳನ್ನು ಕೊಟ್ಟು, “ನಿನ್ನ ಹೆಂಡತಿ ಮಕ್ಕಳಿಗೆ ಅವನ್ನೆಲ್ಲ ಕೊಡು. ಈಗ ನೀನು ತಿನ್ನುವುದಕ್ಕೆ ನಿನಗೆ ಬೇರೆ ಕೊಡುತ್ತೇನೆ ; ತಿನ್ನು,'

'ನಾನೀಗ ತಿನ್ನೋಕಿಲ್ಲ ಸೋಮಿ! ನನ್ನ ಜೊತೆಗೆ ನನ್ನ ಹಳ್ಳಿ